ಯಮಕನಮರಡಿ: ಕೇಂದ್ರ, ರಾಜ್ಯ ಬಿಜೆಪಿ ಸರ್ಕಾರದ ಆಡಳಿತಕ್ಕೆ ಬೇಸತ್ತು ಜನರು ಕಾಂಗ್ರೆಸ್ ಸೇರ್ಪಡೆಯಾಗುತ್ತಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ, ಶಾಸಕ ಸತೀಶ್ ಜಾರಕಿಹೊಳಿ ಹೇಳಿದರು.
ಯಮಕನಮರಡಿ ಮತಕ್ಷೇತ್ರದ ದಾದಬಾನಹಟ್ಟಿ ಗ್ರಾಮದ ೨೦ಕ್ಕೂ ಹೆಚ್ಚು ಬಿಜೆಪಿ ಕಾರ್ಯಕರ್ತರನ್ನು ಕಾಂಗ್ರೆಸ್ ಪಕ್ಷಕ್ಕೆ ಬರಮಾಡಿಕೊಂಡು ಮಾತನಾಡಿದ ಅವರು, ಕಾಂಗ್ರೆಸ್ ಸರ್ವರ ಪ್ರಗತಿಯನ್ನು ಬಯಸುವ ಪಕ್ಷ. ಹೀಗಾಗಿ ಪಕ್ಷವನ್ನು ಸಂಘಟಿಸಿ, ಅಧಿಕಾರಕ್ಕೆ ತರಬೇಕೆಂದು ಕರೆ £Ãಡಿದರು.
ಬಿಜೆಪಿ ಸರ್ಕಾರದಲ್ಲಿ ಭ್ರಷ್ಟಾಚಾರ ಮಿತಿ ಮೀರಿದೆ. ಯುವಕರಿಗೆ £ರುದ್ಯೋಗ ಸಮಸ್ಯೆ ಕಾಡುತ್ತಿದೆ. ಆದರೆ ಈ ಎಲ್ಲ ಸಮಸ್ಯೆಗಳಿಗೆ ಯಾವ ಬಿಜೆಪಿ ನಾಯಕರು ಸ್ಪಂದಿಸುತ್ತಿಲ್ಲ. ಹೀಗಾಗಿ ಸಾರ್ವಜ£ಕರು ಕಾಂಗ್ರೆಸ್ ಕಡೆ ಒಲವು ತೋರುತ್ತಿದ್ದಾರೆ ಎಂದು ತಿಳಿಸಿದರು.
ಇದೇ ವೇಳೆ ಕಾಂಗ್ರೆಸ್ ಸೇರ್ಪಡೆಯಾದ ರಾಯಪ್ಪಾ ಬಡಿಗೇರ, ಬಾಳು ಶಿರಣಗಿ ಸೇರಿದಂತೆ ಹಲವರನ್ನು ಸನ್ಮಾ£ಸಿದರು.
ಈ ಸಂದರ್ಭದಲ್ಲಿ ಕಾಂಗ್ರೆಸ್ ಯುವ ಧುರಿನ ರವೀಂದ್ರ ಜಿಂಡ್ರಾಳಿ, ದಸ್ತಗೀರಿ ಬಸಾಪುರಿ, ಕಿರಣ ರಜಪೂತ, ದಯಾನಂದ ಪಾಟೀಲ್, ಯಲ್ಲಪ್ಪಾ ಪೊಂಗ ಸೇರಿದಂತೆ ಶ್ರೀಧರ ಗಂಭಿರ. ಶಟ್ಟಿಪ್ಪಾ ಜಮಕೋಳಿ, ಗೌಸ್ ಐನಾಪುರೆ, ಮಂಜುನಾಥ ಓಬ್ಬನವರ, ಮಲ್ಲೇಶ್ ಘಸ್ತಿ, ಶಶಿಕಾಂತ ಹಟ್ಟಿ, ದಾದಬಾನಹಟ್ಟಿ ಗ್ರಾಮದ ಕಾಂಗ್ರೆಸ್ ಪಕ್ಷದ ಮುಖಂಡರು, ನೂರಾರು ಯುವಕರು ಇದ್ದರು.
Gadi Kannadiga > Local News > ಕಾಂಗ್ರೆಸ್ ಸರ್ವರ ಪ್ರಗತಿ ಬಯಸುವ ಪಕ್ಷ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆ
ಕಾಂಗ್ರೆಸ್ ಸರ್ವರ ಪ್ರಗತಿ ಬಯಸುವ ಪಕ್ಷ: ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ್ ಜಾರಕಿಹೊಳಿ ಬಿಜೆಪಿ ಕಾರ್ಯಕರ್ತರು ಕಾಂಗ್ರೆಸ್ ಸೇರ್ಪಡೆ
Suresh24/01/2023
posted on
