ಬೆಳಗಾವಿ:೧೮-ಬೆಳಗಾವಿಯಲ್ಲಿ ರವಿವಾರ ದಿ:೧೭ ರಂದು ಪರ್ವ ನಾಟಕ ಪ್ರದರ್ಶನಗೊಂಡ ಹಿನ್ನಲೆಯಲ್ಲಿ, ಕನ್ನಡ ಸಾಹಿತ್ಯ ಪರಿಷತ್ತು ಬೆಳಗಾವಿ ಜಿಲ್ಲಾಧ್ಯಕ್ಷರಾದ ಶ್ರೀಮತಿ.ಮಂಗಲಾ ಶ್ರೀ ಮೆಟಗುಡ್ಡ ಅವರು ರಂಗಾಯಣದ ಉಪ ನಿರ್ದೇಶಕರಾದ ಶ್ರೀಮತಿ.ನಿರ್ಮಲಾ ಮಠಪತಿ ಇವರನ್ನು ಸನ್ಮಾನಿಸಿದರು. ಡಾ.ಎಸ್.ಎಲ್. ಭೈರಪ್ಪನವರ “ಪರ್ವ” ಕಾದಂಬರಿ ಆಧಾರಿತ ಎಂಟು ಗಂಟೆಗಳ ಕಾಲ ನಡೆದ ಸುದೀರ್ಘ ನಾಟಕ ಬೆಳಗಾವಿಯ ಇಡೀ ಜನರ ಮನಸ್ಸನ್ನು ಸೆಳೆಯುವುದರಲ್ಲಿ ಯಶಸ್ವಿಯಾಯಿತು. ಮಹಾಭಾರತದ ಕತೆಯ ಅನೇಕ ದೃಶ್ಯಗಳನ್ನು ಸಾಂಕೇತಿಕವಾಗಿ ಯಶಸ್ವಿಯಾಗಿ ರಂಗಭೂಮಿಯ ಮೇಲೆ ಪ್ರಯೋಗಿಸಿದರು.
ಹಿನ್ನಲೆ ಸಂಗೀತವು ಕೂಡ ಅದ್ಭುತವಾಗಿತ್ತು. ಹೀಗೆ ಒಟ್ಟಿನಲ್ಲಿ ಪರ್ವ ನಾಟಕವು ಯಶಸ್ವಿಯಾಗಿ ಪ್ರದರ್ಶಿಸಲ್ಪಟ್ಟಿತು. ಕ.ಸಾ.ಪ. ತಾಲೂಕಾ ಘಟಕ ಮೂಡಲಗಿ ಅಧ್ಯಕ್ಷರಾದ ಡಾ.ಸಂಜಯ ಸಿಂದಿಹಟ್ಟಿ ಹಾಗೂ ಸಂಗಡಿಗರು, ಕ.ಸಾ.ಪ.ತಾ.ಘಟಕ ಖಾನಾಪೂರ ತಾಲೂಕಿನ ಮಾಜಿ ಅಧ್ಯಕ್ಷರಾದ ಶ್ರೀ ವಿಜಯ ಬಡಿಗೇರ ಹಾಗೂ ಸಂಗಡಿಗರು, ಲಿಂಗಾಯುತ ಮಹಿಳಾ ಸಮಾಜ ಧುರಿಣೆ ಶ್ರೀಮತಿ.ಶೈಲಜಾ ಬಿಂಗೆ, ಕ.ಸಾ.ಪ.ಬೆಳಗಾವಿ ಜಿಲ್ಲೆ ಮಹಿಳಾ ಪ್ರತಿನಿಧಿ ಶ್ರೀಮತಿ.ಜಯಶ್ರೀ ನಿರಾಕಾರಿ, ಜಾನಪದ ಸಾಹಿತಿ ಶ್ರೀಮತಿ.ರುದ್ರಾಂಬಿಕಾ ಯಾಳಗಿ ಮುಂತಾದವರು ಕಾರ್ಯಕ್ರಮದಲ್ಲಿ ಪಾಲ್ಗೋಂಡಿದ್ದರು.
Gadi Kannadiga > Local News > ಯಶಸ್ವಿಯಾಗಿ ಪ್ರದರ್ಶನಗೊಂಡ ಪರ್ವ ನಾಟಕ
More important news
ವಿಧಾನ ಪರಿಷತ್ ಚುನಾವಣೆ: ಅಧಿಸೂಚನೆ ಪ್ರಕಟ
19/05/2022