This is the title of the web page
This is the title of the web page

Please assign a menu to the primary menu location under menu

State

‘ಪರ್ಯಾಯ’ ಬಡತನಕ್ಕೆ ಪರ್ಯಾಯವೇನು? ಎನ್ನುವ ಚಿತ್ರ


ಚಿತ್ರರಂಗವೇ ಒಂದು ಮಾಯಾನಗರಿ. ಮಾಯಾನರಿ ಎಂದರೆ ತಾವಷ್ಟೇ ಮಾಡುವುದು ಬೇರೆಯವರಿಗೆ ಅವಕಾಶ ಕೊಡದಿರುವ ರಹಸ್ಯ ಎನ್ನಬಹುದೇನೊ. ದಕ್ಷಿಣ ಕರ್ನಾಟಕದ ಕಡೆಗೇನೇ ವಿಶೇಷವಾಗಿ ಬೆಂಗಳೂರಿನಲ್ಲಿ ಎಲ್ಲ ಚಲನಚಿತ್ರ ಚಟವಟಿಕೆಗಳೂ ಹೆಪ್ಪು ಗಟ್ಟಿ ನಿ0ತು ಬಿಟ್ಟಿವೆ. ಉತ್ತರ ಕರ್ನಾಟಕ ಜನ ಎಂದರೆ ಕೇವಲ ಚಲಚಿತ್ರಗಳನ್ನು ನೋಡುವವರು, ಚಿತ್ರಗಳಲ್ಲಿ ನಟನೆ ಮಾಡುವುದಾಗಲಿ, ನಿರ್ಮಿಸುವುದಾಗಲಿ ಅಷ್ಟಕ್ಕಷ್ಟೇ ಎನ್ನುವ ಮಾತಿದೆ. ಆದರೆ ಇತ್ತೀಚೆಗೆ ಈ ಮಾತು ಸುಳ್ಳಾಗುವ ದಿಸೆಯಲ್ಲಿ ಚಿತ್ರರಂಗಕ್ಕೆ ಸಂಬ0ಧಿಸಿದ0ತೆ ಒಂದಿಷ್ಟು ಚಟುವಟಿಕೆಗಳು ನಡೆದಿವೆ. ಅದರಲ್ಲಿಯೂ ಬೆಳಗಾವಿಗೆ ಸಂಬ0ಧಿಸಿದ0ತೆ ಡಾ. ಸರಜೂ ಕಾಟ್ಕರವರ ‘ಇಂಗಳೆ ಮಾರ್ಗ’ ದಿಂದ ‘ಇತ್ತೀಚಿನ ‘ದಂತ ಕಥೆ’ ವರೆಗೆ ಅವರೇ ಬರೆದ ಕಾದಂಬರಿ ಆಧಾರಿತ ಚಿತ್ರಗಳು ನಿರ್ಮಾಣವಾದರೆ, ವಿಜಯಪುರದ ಸುನಿಲ್‌ಕುಮಾರ ದೇಸಾಯಿಯವರ ನಿರ್ದೇಶನದಲ್ಲಿ ಹಲವಾರು ಮಹತ್ವದ ಚಿತ್ರಗಳು ತೆರೆ ಕಂಡಿವೆ. ಇನ್ನು ಬಸಂತಕುಮಾರ ಪಾಟೀಲರಂತಹವರು ನಟರಾಗಿ ನಿರ್ಮಾಪಕರಾಗಿ ಹಲವಾರು ರಾಷ್ಟಿಯ ಮತ್ತು ಅಂತರಾಷ್ಟಿಯ ಪ್ರಶಸ್ತಿಗಳನ್ನು ಪಡೆದು ಉತ್ತರ ಕರ್ನಾಟಕಕ್ಕೆ ಚಿತ್ರರಂಗದಲ್ಲಿ ಗೌರವ ತಂದು ಕೊಟ್ಟರು. ಈ ಪಟ್ಟಿಗೆ ಸೇರ್ಪಡೆ ಪತ್ರಕರ್ತ ಗೆಳೆಯ ಮುರುಗೇಂದ್ರ ಶಿವಪೂಜೆಯವರ ಇತ್ತೀಚಿನ ಚಲನಚಿತ್ರ ಸಾಹಸಗಳು ಎನ್ನಬಹುದು. ಈ ರಂಗಕ್ಕೆ ಇವರೇನೂ ಹೊಸಬರಲ್ಲ ಈಗಾಗಲೇ ನಟ, ನಿರ್ಮಾಪೊಕರಾಗಿ ಬೆಳಕಿನ ಕನ್ನಡಿ, ಕೊನೆಯ ಪುಟ, ಬಂಗಾರದ ಮಕ್ಕಳು, ಚಿತಾಯು ಚಿತ್ರಗಳಲ್ಲಿ ಕೈ ಚಳಕ ತೋರಿಸಿದ್ದು, ಪತ್ರಿಕೋದ್ಯಮ ಕುರಿತು ದಿ.ಪೇಪರ ಚಿತ್ರದ ಚಿತ್ರೀಕರಣ ನಡಿದಿದೆ. ಮುಂದಿನ ದಿನಮಾನಗಳಲ್ಲಿ ಇನ್ನಷ್ಟು ಕನಸುಗಳನ್ನು ಹೊತ್ತಿದ್ದು ‘ಪರ್ಯಾಯ’ ಚಿತ್ರವನ್ನು ಮರಾಠಿ ಹಾಗೂ ಲಮಾಣಿ ಭಾಷೆಗಳಿಗೆ ರೂಪಾಂತರಿಸುವ ಕೆಲಸವನ್ನು ಇಷ್ಟರಲ್ಲಿಯೇ ಕೈಕೊಳ್ಳುವವರಿದ್ದಾರೆ. ನಿನ್ನೆ ತಾನೇ ವೀಕ್ಷಿಸಿದ ‘ಪರ್ಯಾಯ’ ಚಿತ್ರ ಸದಭಿರುಚಿಯ ಕನ್ನಡ ಚಿತ್ರ. ಇತ್ತೀಚಿನ ದಿನಮಾನಗಳಲ್ಲಿ ಕೆಲ ಕನ್ನಡ ಚಿತ್ರಗಳಿಗೆ ಇಂಗ್ಲೀಷ ಶಿರ್ಷಿಕೆ ನಿಡುತ್ತಿರುವ ಸಂದರ್ಭದಲ್ಲಿ ‘ಪರ್ಯಾಯ’ ಎನ್ನುವ ಕನ್ನಡ ಪದ ಇಟ್ಟಿರುವುದಕ್ಕೆ ಮೊದಲನೆಯದಾಗಿ ವಂದನೆಗಳು. ಚಿತ್ರ ಕೊನೆಯನ್ನು ‘ರಹಸ್ಯ’ ವಾಗಿಟ್ಟಿರುವುದರಿಂದ, ಚಿತ್ರದ ನಾಯಕ ಗೋವಿಂದ ಮೇಲಿಂದ ಮೇಲೆ ‘ನನ್ನ ಗುರೀನ ಬ್ಯಾರೇ ಐತಿ’ ಎನ್ನುವ ಮಾತು ಕೂಡ ಈ ರಹಸ್ಯವನ್ನು ಧ್ವ£ಸುತ್ತಿರುವುದರಿಂದ ‘ರಹಸ್ಯ’ ವನ್ನು ಕಾಪಾಡುತ್ತಲೇ ಈ ಚಿತ್ರ ಕಥನ ಹೇಳಬೇಕಾಗಿದೆ.
ಕಿವುಡ ಗೋವಿಂದನ ಪಾತ್ರದಲ್ಲಿ ಮುರುಗೇಶ ಶಿವಪೂಜಿ, ಕುರುಡ ಗೋಪಾಲನ ಪಾತ್ರದಲ್ಲಿ ರಾಜಕುಮಾರ ನಾಯಕ ಮತ್ತು ಮೂಕ ಪಾಂಡುನ ಪಾತ್ರದಲ್ಲಿ ರಂಜನಕುಮಾರ ಆಪ್ತ ಗೆಳೆಯರು ಇಡೀ ಚಿತ್ರಪರದೆಯ ತುಂಬ ಇವರೇ ರಾರಾಜಿಸುತ್ತಾರೆ. ಕುರುಡನ ಪಾತ್ರಧಾರಿ ಅನಗತ್ಯವಾಗಿ ಗೋಣು ಅಲುಗಾಡಿಸುವ ಮೂಲಕ ಪಾತ್ರ ಅಭಾಸವಾಗುತ್ತದೆ. ಇನ್ನು ಕಿವಿ ಕೇಳಿಸದವರು ಮೂಕರಾಗಿರುತ್ತಾರೆ. ಆದರೆ ಇಲ್ಲಿ ಮೂಕನಿಗೆ ಕಿವಿ ಕೇಳಿಸುತ್ತದೆ. ಬಡತನವನ್ನೆ ಉಂಡು ಬಡತವನ್ನೆ ಹಾಸಿ ಹೊದ್ದುಕೊಂಡು ಮಲಗುವಷ್ಟು ಬಡತನ ಇವರ ಬದುಕಿನ ಭಾಗವೇ ಆಗಿರುತ್ತದೆ. ಆದರೆ, ಕಾಣುವ ಕನಸುಗಳಿಗೆ ಕೊರತೆಯೇ£ರುವದಿಲ್ಲ. ಸರಕಾರಿ ನೌಕರಿಯನ್ನೆ ಹಿಡಿದು ತನ್ನ ತಂಗಿಗೆ ಮದುವೆ ಮಾಡಬೇಕೆಂದು ಕನಸು ಕಾಣುವ ಪಾಂಡು, ಇದ್ದ ಚಿಕ್ಕ ಚಹಾದಂಗಡಿಯನ್ನು ಇನ್ನಷ್ಟು ದೊಡ್ಡದು ಮಾಡಿ ತನ್ನ ತಾಯಿಯ ಬಡತನ ಹೋಗಿಸಿ ನೆಮ್ಮದಿಯ ಜೀವನ ಸಾಗಿಸಬೇಕೆನ್ನುವ ಗೋಪಾಲ, ಏನೂ ಕೆಲಸವಿಲ್ಲದಿದ್ದರೂ ಏನೋ ಗುರಿಯನಿಟುಕೊಂಡು ಡಿಢೀರ ಶ್ರೀಮಂತನಾಗಬೇಕು, ಆ ಶ್ರೀಮಂತಿಕೆಯಲ್ಲಿ ತನ್ನ ಗೆಳೆಯರೂ ಪಾಲುದಾರರಾಗಬೇಕೆಂಬ ಸಹೃದಯಿ ಗೋವಿಂದ. ಆದರೆ ವಿಪರ್ಯಾಸವೆಂದರೆ, ಎಲ್ಲ ಗೆಳೆಯರು ತಮ್ಮ ಕುಟುಂಬದ ಸದಸ್ಯರನ್ನು ಉದ್ಧರಿಸುವ ಮೂಲಕ ತಾವೂ ಉದ್ಧಾರವಾಗಬೇಕೆಂದು ಕನಸೂ ಕಂಡರು ಸದಾ ಪಿಟಿ ಪಿಟಿ ಎಂದು ಬಯ್ಯುವ ಗೋಪಾಲನ ತಾಯಿ, ಪಾಂಡುನ ತಂಗಿ ಮತ್ತು ವಿಶೇಷವಾಗಿ ಪಕ್ಕಾ ಬಜಾರಿ ಹೆಣ್ಣೆ ಆದ ಗೋವಿಂದನ ಪತ್ನಿ ಪರಿಮಳ ಪಾತ್ರಧಾರಿ ಅರ್ಚನಾ ಶೆಟ್ಟಿ. ಇವೆಲ್ಲ ಜಂಜಾಟಗಳ ನಡುವೆಯೆ ‘ಶ್ರಿಮಂತರಗಬೇಕೆ0ಬ’ ಕನಸಿಗೆ ಇವೇನೂ ಧಕ್ಕೆ ತರುವುದಿಲ್ಲವೆನ್ನುವುದು ಇಡೀ ಚಿತ್ರದ ಸಾರ.
ಹೀಗೇ ಚಿತ್ರ ಸಾಗುತ್ತಿರಲು ಗೋಪಾಲ ತಾನು ಪಡೆದ ಸಾಲದ ಬಡ್ಡಿ ಕಟ್ಟದೇ ಇದ್ದಾಗ, ಬಡ್ಡಿ ಸಾಲ ಕೊಟ್ಟ ಸಾಹುಕಾರ ಚಹಾದಂಗಡಿಯ ಎಲ್ಲ ಉಪಕರಣಗಳನ್ನು ಎತ್ತಿಕೊಂಡು ಹೋಗುತ್ತಾನೆ, ಆಗ ಮೂವರು ಗೆಳೆಯರು ಕೂಡಿ ಮುಂದಿನ ಶ್ರೀಮಂತಿಕೆಯ ದಾರಿಯನ್ನು ಹುಡುಕುತ್ತಾರೆ. ಚಿತ್ರದ ಮಧ್ಯಂತರವಾದ ನಂತರ ಈ ಚಟುವಟಿಕೆಗಳು ಆರಂಭವಾಗುತ್ತವೆ. ಆಕಸ್ಮಿಕವಾಗಿ ಮಂತ್ರವಾದಿಯನ್ನು ಭೇಟಿಯಾದಾಗ ಇವರ ಕೈಯಲ್ಲಿ ‘ನಿಧಿ ರೇಖೆ’ ಇದೆಯೆಂದು ನಂಬಿಸಿದ ಮಂತ್ರವಾದಿ ನಂಬಿಸಿದಾಗ, ಆತನ ಶಿಷ್ಯ ಎಂಟು ಲಕ್ಷ ರೂಪಾಯಿಗಳ್ನು ಪೂಜೆಯ ಖರ್ಚಿನ ಸಲುವಾಗಿ ಕೊಡಬೇಕೆಂದು ಹೇಳಿದಾಗ, ಇದನ್ನು ಹೊಂದಿಸಲು ಒಬ್ಬ ಜಮೀನು ಮಾರಿದರೆ, ಇನ್ನೊಬ್ಬ ಮನೆಯಲ್ಲಿರುವ ಚಿನ್ನದ ಆಭರಣಗಳನ್ನೇ ಮಾರುತ್ತಾನೆ. ಹೀಗೆ ಕಥೆ ಸಾಗಿ, ಕೊನೆಗೆ £ಧಿ ಇವರಿಗೆ ಸಿಕ್ಕಿತೆ? ಇವರು ದಿಢೀರ ಸಾಹುಕಾರರಾದೆ ಎನ್ನುವುದೇ ಕಥೆಯ ರಹಸ್ಯ. ಈ ರಹಸ್ಯವನ್ನು ತಿಳಿಯಬೇಕಾದರೆ, ಸ್ವತಃ ಚಿತ್ರವನ್ನು ನೋಡಬೇಕು ಅಷ್ಟೇ. ಚಿತ್ರದುದ್ದಕ್ಕೂ ಹಳ್ಳಿಯ, ನಗರ ಮತ್ತು ಪ್ರಕೃತಿ ಪರಿಸರದ ಸುಂದರ ಮತ್ತು ಆಕರ್ಷಕ ಛಾಯಾಗ್ರಹಣ ಇಡೀ ಚಿತ್ರ ಧನಾತ್ಮಕ ಅಂಶ. ಪಾತ್ರಧಾರಿಗಳ ಅಭಿನಯವೆಂದರೆ, ಕಿವುಡನ, ಮೂಕನ ಮತ್ತು ಕುರುಡನ ಅಭಿನಯ ನೋಡಿದಾಗ, ಬಹುಶಃ ಇವರು £ಜ ಜೀವನದಲ್ಲಿಯೂ ಇದೇ ಅಂಗವೈಕಲ್ಯತೆ ಹೊಂದಿದ್ದಾರೆನೋ ಅ£ಸುವಷ್ಟು ಪಾತ್ರಗಳ ಪರಕಾಯ ಪ್ರವೇಶ ಮಾಡಿ, ತಮ್ಮ ಪಾತ್ರಗಳಿಗೆ ನ್ಯಾಯವನ್ನು ಒದಗಿಸಿದ್ದಾರೆ. ಬಲಗೈಯನ್ನು ಕಿವಿ ಸಮೀಪ ಹಿಡಿಯುತ್ತ ಬೇರೆಯವರು ಪ್ರಶ್ನೆ ಕೇಳುವುದೇ ಬೇರೆ ಉತ್ತರ ನಿಡುವುದು ಬೇರೆ, ಕಿವುಡನ ಪಾತ್ರ ಒಂದಿಷ್ಟು ಗಮನ ಸೆಳೆಯುತ್ತ, ಸಹಜವಾಗಿ ಹಾಸ್ಯವನ್ನು ಸೃಷ್ಟಿಸುತ್ತದೆ. ಇನ್ನುಳಿದಂತೆ ಬ್ಯಾಂಕ ವ್ಯವಸ್ಥಾಪಕ ಮಿತ್ರ ಬಸವರಾಜ ಗಾರ್ಗಿಯವರನ್ನು ಒಳಗೊಂಡ0ತೆ ಚಿಕ್ಕ ಪುಟ್ಟ ಪಾತ್ರಗಳಾದ ಸ್ವಯಂಭೂ, ಬಡ್ಡಿ ವಸೂಲಿಗಾಗಿ ದಪ್ಪ ದಪ್ಪ ಚಕ್ರಗಳನ್ನು ಹೊತ್ತ ಜೀಪಿನಲ್ಲಿ ಬರುವ ಸಾಹುಕಾರ, ಮಂತ್ರವಾದಿ ಮತ್ತು ಈತನ ಶಿಷ್ಯರು, ನಾಯಕರ ವಟ ವಟ ಹಚ್ಚುವ ತಾಯಿ, ಗಯ್ಯಾಳಿ ಪತ್ನಿ ಬಡತನದಲ್ಲೆ ನಿಟ್ಟುಸಿರುವ ಬಿಡುತ್ತ ಅಡಿಗೆ ಮನೆಯಲ್ಲಿ ಖಾಲಿ ಡಬ್ಬಿಗಳನ್ನೆ ಕಯ್ಯಾಡಿಸುವ ತಂಗಿ ಇವರೂ ಕೂಡ ತಮ್ಮ ಪಾತ್ರಗಳಿಗೆ ನ್ಯಾಯ ಒದಗಿಸಿದ್ದಾರೆ. ಆದರೆ ಚಿತ್ರದ ಕುರಿತು ಸಂಗೀತ ಮತ್ತು ಹಾಡುಗಳಿಗೆ ಸಂಬ0ಧಿಸಿದ0ತೆ ಹೇಳುವುದು ಕಷ್ಟ. ಏಕೆಂದರೆ ಒಂದಿಷ್ಟು ಕರ್ಕಶ ಸಂಗೀತ ಹಾಗೂ ಸ್ಪಷ್ಟವಾಗಿ ಕೇಳಿಸದ ಹಾಡುಗಳು ಚಿತ್ರದ ಹೊಳಪು ಕಡಿಮೆ ಮಾಡಿದರೆ, ನಿರ್ದೇಶನ ಸ್ಪರ್ಶ ಇನ್ನಷ್ಟು ಬಿಗಿಗೊಳ್ಳಬೇಕಾಗಿತ್ತು. ಚಿತ್ರ ಮಧ್ಯಂತರವಾಗುವವರೆಗೆ ಸ್ವಲ್ಪ ಬೇಸರ ತರಿಸಿದರೂ ನಂತರ ಲವಲವಿಕೆಯಿಂದ ಕೂಡಿದ್ದು. ಒಟ್ಟಾರೆ ಚಿತ್ರ ಸಂದೇಶವೆನ0ದರೆ ಶ್ರಮದಿಂದ ಮಾತ್ರ ನಮ್ಮ ಉತ್ತಮ ಬದುಕನ್ನು ಕಟ್ಟಿಕೊಳ್ಳಲು ಸಾಧ್ಯ ‘ಕಾಯಕವೇ ಕೈಲಾಸ’ ಎನ್ನುವ ಮಾತನ್ನು ಬಿಂಬಿಸುತ್ತಿದ್ದರೂ ಕೊನೆಯ ದೃಶ್ಯ ಅದ್ಭುತವಾಗಿದೆ. ಒಟ್ಟಿನಲ್ಲಿ ಅದೇನೇ ಇದ್ದರೂ, ಕಿತ್ತೂರು ಕರ್ನಾಟದ ಬೆಳಗಾವಿಯಂತಹ ಗಡಿ ಭಾಗದಲ್ಲಿ ಮಾಯಾ ಲೋಕ ಭೇದಿಸುವ ಚಟುವಟಿಕೆಗಳು ನಡೆಯುತ್ತಿದ್ದು, ಇವನ್ನು ತುಂಬು ಹೃದಯದಿಂದ ಸ್ವಾಗತಿಸುವ ಸಹೃದಯತೆ ಬೇಕು ಅಷ್ಟೇ.
ಯ.ರು. ಪಾಟೀಲ [ಸವದತ್ತಿ } ಚಾರಿತ್ರಿಕ ಕಾದಂಬರಿಕಾರರು
ಮಾಜಿ ಜಿಲ್ಲಾಧ್ಯಕ್ಷರು, ಕ.ಸಾ.ಪ ಬೆಳಗಾವಿ


Leave a Reply