ಯಮಕನಮರಡಿ:- ಪ್ರತಿ ೧೧ ವರ್ಷಕ್ಕೊಮ್ಮೆ ಜರುಗುವ ಕುಂದರನಾಡಿನ ಪಾಶ್ಚಾಪೂರ ಗ್ರಾಮದ ಗ್ರಾಮ ದೇವತೆಯಾದ ಆಲೂರ ಶ್ರೀ ಮಹಾಲಕ್ಷ್ಮೀದೇವಿಯ ಜಾತ್ರೆಯು ಮಂಗಳವಾರ ದಿ, ೭-೨-೨೦೨೩ ರಿಂದ ಶುಕ್ರವಾರ ೧೧-೨ ೨೦೨೩ ರ ವರೆಗೆ ವಿಜೃಂಭಣೆಯಿಂದ ನಡೆಯಲಿದೆ ಎಂದು ರಾಮಚಂದ್ರ ದೇಶಪಾಂಡೆ ತಿಳಿಸಿದರು.
ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡುತ್ತ ದಿ. ೩-೨-೨೦೨೩ ರಂದು ಅಂಕಿ ಹಾಕುವ ಕಾರ್ಯಕ್ರಮ ದಿ, ೭ ರಂದು ಮುಂ ೮ ಕ್ಕೆ ಶ್ರೀ ದೇವಿಯ ಪ್ರಾಣ ಪ್ರತಿಷ್ಠಾಪಣೆ, ಉಡಿ ತುಂಬುವುದು ರಾತ್ರಿ ೧೦ ಕ್ಕೆ ಕೆರಳಿದ ಪಾಶ್ಚಾಪೂರ ಹುಲಿ, ದಿ, ೮ ರಂದು ವಿವಿಧ ಗ್ರಾಮಗಳ ಭಕ್ತಾಧಿಗಳಿಂದ ಉಡಿ ತುಂಬುವ ಕಾರ್ಯಕ್ರಮ, ಮಧ್ಯಾನ್ಹ ದೇವಿಯ ಹೊನ್ನಾಟದ ಮೆರವಣಿಗೆ ಪ್ರಾರಂಭ, ದಿ,೧೦ ರಂದು ಶ್ರೀಕೃಷ್ಣ ಪಾರಿಜಾತ, ದೇಸಾಯಿ ದರ್ಪಕ್ಕೆ ಅಂತ್ಯ ಹಾಡಿದ ಸಹೋದರರು, ನಾಟಕ, ದಿ,೯ ರಂದು ಶಾಸಕ ಸತೀಶ ಜಾರಕಿಹೊಳಿ, ಸಂಸದ ಅಣ್ಣಾಸಾಹೇಬ ಜೋಲ್ಲೆ ಸಚಿವೆ ಶ್ರೀಮತಿ ಶಶಿಕಲಾಜೋಲ್ಲೆ, ವಿಧಾನ ಪರಿಷತ್ತ ಸದಸ್ಯ ಲಖನ ಜಾರಕಿಹೊಳಿ, ಕರಕುಶಲ £ಗಮದ ಅಧ್ಯಕ್ಷ ಮಾರುತಿ ಅಷ್ಠಗಿ, ಬಿಡಿಸಿಸಿ ಅಧ್ಯಕ್ಷರಾದ ರಮೇಶ ಕತ್ತಿ, ಜೆ,ಡಿ,ಎಸ್, ರಾಜ್ಯಾಧ್ಯಕ್ಷರಾದ ಸಿ,ಎಮ್, ಇಬ್ರಾಹಿಂ, ಎಲ್ಲರಿಗೂ ಸತ್ಕಾರ, ಮಧ್ಯಾನ್ಹ ೨.೩೦ ಕ್ಕೆ ವಿಧಿ-ವಿಧಾನಗಳೊಂದಿಗೆ ಶೃಂಗರಿಸಿದ ಶ್ರೀಮಹಾಲಕ್ಷ್ಮೀ ದೇವಿಯ ರಥೋತ್ಸವ ಗ್ರಾಮದೇವತೆಯಾದ ಆಲೂರವ್ವ ದೇವಸ್ಥಾನದಿಂದ ಪಾಶ್ಚಾಪೂರ ಬಸ್ಸ್ £ಲ್ದಾಣದ ವರೆಗೆ ನಡೆಯುವುದು, ರಾತ್ರಿ ೧೦;೩೦ಕ್ಕೆ ದರ್ಪದ ಶ್ರೀಮಂತರ ಧೂಳೆಬ್ಬಿಸಿದ ಹುಲಿ, ರಾತ್ರಿ ಚೌಡಕಿ ಪದಗಳು, ದಿ,೧೦ ರಂದು ೨:೩೦ಕ್ಕೆ ಬಸ್ಸ್ £ಲ್ದಾಣದಿಂದ ಶ್ರೀ ಆಲೂರವ್ವ ದೇವಸ್ಥಾನದ ವರೆಗೆ ರಥೋತ್ಸವ ಮರಳಿ ಬರುವುದು, ರಾತ್ರಿ ೯ ಕ್ಕೆ ಟಿ,ವಿ ಕಲಾವಿದರಿಂದ ಮನರಂಜನೆ ಕಾರ್ಯಕ್ರಮ ನಡೆಯಲಿದೆ, ದಿ,೧೧ ರಂದು ೧೦ : ೩೦ ಕ್ಕೆ ಕುದುರೆ ಗಾಡಿ ಸ್ಫರ್ಧೆ,ಕೇರಂ ಪಂದ್ಯಾವಳಿ, ರಾತ್ರಿ ದೇವಿಯನ್ನು ಸೀಮೆಗೆ ಕಳುಹಿಸುವುದು, ದಿ,೧೨ ರಂದು ಮುಂ ೧೦ ಕ್ಕೆ ಕಬ್ಬಡಿ ಪಂದ್ಯಾವಳಿ, ಕಿರುತೆರೆ ಕಲಾವಿಧರಿಂದ ಮನರಂಜನಾ ಕಾರ್ಯಕ್ರಮ, ದಿ,೧೩ ರಂದು ಮಧ್ಯಾನ್ಹ ೧೨ ಕ್ಕೆ ಟಗರಿನ ಕಾಳಗ, ರಾತ್ರಿ ಪಾಶ್ಚಾಪೂರ ಮೆಲೋಡಿಸ್ ಅವರಿಂದ ಮನರಂಜನಾ ಕಾರ್ಯಕ್ರಮ, ದಿ,೧೪ ರಂದು ದೇವಿಯ ಪುನ: ಪ್ರಾಣ ಪ್ರತಿಷ್ಠಾಪಣೆ ನಡೆಯಲಿದೆ, ಎಂದು ಜಾತ್ರಾ ಕಮಿಟಿಯವರು ತಿಳಿಸಿದ್ದಾರೆ ಈ ಪತ್ರಿಕಾಗೋಷ್ಟಿಯಲ್ಲಿ ಅಣ್ಣಾಸಾಹೇಬ ಮಹಾಜನಶೆಟ್ಟಿ, ಷನ್ಮುಖಪ್ಪಾ ಪಟ್ಟಣಶೆಟ್ಟಿ, ವಿಶ್ವನಾಥ ಪಾಟೀಲ, ಶಂಕರ ದುಂಡಗಿ, ರಸೂಲ ದೇಸಾಯಿ,ಬಾಗನಾ ಸಿಂಧೆ, ಶೆಟ್ಟೆಪ್ಪಾ ಕುಡಜೋಗಿ, ಸತೀಶ ನಾಡಗೌಡಾ, ಸು£Ãಲ ಕಲಾಲ, ಚಂದ್ರು ಆಡಿಮ£, ಬಸವರಾಜ ಅಂಬಿಗೇರ, ಶಂಕರ ತಲ್ಲೂರ, ಅಡಿವೆಪ್ಪಾ ಶಿಡ್ನಾಳ, ಮುಂತಾದವರು ಉಪಸ್ಥಿತರಿದ್ದರು,
Gadi Kannadiga > Local News > ಪಾಶ್ಚಾಪೂರ : ಶ್ರೀಆಲೂರವ್ವನ [ಶ್ರೀಲಕ್ಷ್ಮೀ] ದೇವಿ ಜಾತ್ರೆ