This is the title of the web page
This is the title of the web page

Please assign a menu to the primary menu location under menu

State

ಪಾಸ್‌ಪೋರ್ಟ ಸೇವಾ ಕೇಂದ್ರಗಳು ಕರ‍್ಯಾರಂಭ


ಗದಗ ಫೆಬ್ರುವರಿ ೧೩: ಭಾರತೀಯ ಅಂಚೆ ಇಲಾಖೆಯು ಮತ್ತು ಪಾಸ್ ಪೋರ್ಟ ವಲಯ ಕಚೇರಿ ಬೆಂಗಳೂರು ಇವರ ಸಹಯೋಗದೊಂದಿಗೆ ಗದಗ ಮತ್ತು ಕೊಪ್ಪಳ ನಗರಗಳಲ್ಲಿ ಪಾಸ್ ಪೋರ್ಟ ಸೇವಾ ಕೇಂದ್ರಗಳು ಕಾರ್ಯನಿರ್ವಹಿಸುತ್ತಿದ್ದು, ಇದರ ಸದುಪಯೋಗವನ್ನು ಗದಗ ಜಿಲ್ಲೆ ಮತ್ತು ಕೊಪ್ಪಳ ಜಿಲ್ಲೆಯ ಗ್ರಾಹಕರು ಈ ಪಾಸ್ ಪೋರ್ಟ ಸೇವೆಯ ಸೌಲಭ್ಯ ಪಡೆಯಬಹುದಾಗಿದೆ. ಗದುಗಿನಲ್ಲಿ ಪಾಸ್ ಪೋರ್ಟ ಸೇವಾ ಕೇಂದ್ರ, ಟಿಳಕ ಪಾರ್ಕ ಹತ್ತಿರ, ಸಿಟಿ ಪೋಸ್ಟ್ ಆಫೀಸ್ ಬಿಲ್ಡಿಂಗ್ , ಗದಗ -೫೮೨ ೧೦೧ ಇಲ್ಲಿ ಹಾಗೂ ಕೊಪ್ಪಳದಲ್ಲಿ ಪಾಸ್ ಪೋರ್ಟ ಸೇವಾ ಕೇಂದ್ರ , ಜವಾಹರ್ ರೋಡ , ಕೊಪ್ಪಳ ಬಜಾರ್ ಪೋಸ್ಟ್ ಆಫೀಸ್ ಹತ್ತಿರ , ಕೊಪ್ಪಳ – ೫೮೩೨೩೧ ಇಲ್ಲಿ ಕಾರ್ಯನಿರ್ವಹಿಸುತ್ತಿವೆ ಎಂದು ಗದಗ ವಿಭಾಗದ ಅಂಚೆ ಅಧೀಕ್ಷಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Gadi Kannadiga

Leave a Reply