ಕೊಪ್ಪಳ : ಕೊಪ್ಪಳ ಜಿಲ್ಲೆಯ ಜನರು ಹೃದಯವಂತರು ಮತ್ತು ಸಂಸ್ಕಾರವಂತರು. ಈ ಜಿಲ್ಲೆಯು ಹಲವಾರು ಸಾಹಿತಿಗಳ, ಸಂತರ ತಾಣವಾಗಿದೆ. ಕೊಪ್ಪಳ ಜಿಲ್ಲೆಯಲ್ಲಿ ಸೇವೆ ಸಲ್ಲಿಸುವ ಅವಕಾಶ ಲಭಿಸಿದ್ದು ನನ್ನ ಸೌಭಾಗ್ಯವೆಂದು ಭಾವಿಸಿದ್ದೇನೆ ಎಂದು ಕೊಪ್ಪಳದ ಪದವಿ ಪೂರ್ವ ಶಿಕ್ಷಣ ಇಲಾಖೆಯ ಉಪನಿರ್ದೇಶಕರಾದ ಎಸ್. ಉಮೇಶ ಹೇಳಿದರು.
ಅವರು ಮಂಗಳವಾರ ಕೊಪ್ಪಳದ ಜಿಲ್ಲಾ ಸಂಕೀರ್ಣದಲ್ಲಿರುವ ಪದವಿ ಪೂರ್ವ ಶಿಕ್ಷಣ ಇಲಾಖೆಯಲ್ಲಿ ತಮ್ಮ ವರ್ಗಾವಣೆ ನಿಮಿತ್ಯ ಹಮ್ಮಿಕೊಂಡ ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದರು. ಹಲಗೇರಿ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯರಾದ ಜಿ.ಎಂ. ಭೂಸನೂರುಮಠ ಅವರು ಪ್ರಭಾರಿ ಉಪನಿರ್ದೇಶಕರಾಗಿ ಅಧಿಕಾರ ವಹಿಸಿಕೊಂಡರು. ಭಾಗ್ಯನಗರ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಾಚಾರ್ಯರಾದ ರಾಜಶೇಖರ ಪಾಟೀಲ, ಹಿರೇಸಿಂದೋಗಿ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಭಾರಿ ಪ್ರಾಚಾರ್ಯರಾದ ಹನುಮಂತಪ್ಪ ಅಂಡಗಿ ಚಿಲವಾಡಗಿ, ಕೊಪ್ಪಳದ ಬಾಲಕಿಯರ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಭಾರಿ ಪ್ರಾಚಾರ್ಯರಾದ ಎಚ್.ಎಸ್. ಬಾರಕೇರ, ಗಾಣದಾಳ ಸರಕಾರಿ ಪದವಿ ಪೂರ್ವ ಮಹಾವಿದ್ಯಾಲಯದ ಪ್ರಭಾರಿ ಪ್ರಾಚಾರ್ಯರಾದ ಶಿವಪ್ಪ ಹಲಕಿ, ಉಪನ್ಯಾಸಕರಾದ ಎಸ್.ಎ. ರಜಪೂತ, ರಾಚಪ್ಪ ಕೇಸರಬಾವಿ, ಪದವಿ ಪೂರ್ವ ಶಿಕ್ಷಣ ಇಲಾಖೆಯ ಶಾಖಾಧಿಕಾರಿಯಾದ ಎಂ. ರಮೇಶ, ಇಲಾಖೆಯ ರುದ್ರೇಶ ಇಟಗಿ, ಮಾರುತಿ ಬಿಲ್ಲರ, ತುಳಸಿ ಬೆಲ್ಲದ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.
Gadi Kannadiga > State > ಕೊಪ್ಪಳದ ಜನರು ಹೃದಯವಂತರು. ಎಸ್. ಉಮೇಶ