This is the title of the web page
This is the title of the web page

Please assign a menu to the primary menu location under menu

State

ಚಿರತೆ ಭಯದಿಂದ ಮನೆಯಿಂದ ಹೊರ ಬಾರದ ಜನ


ಬೆಳಗಾವಿ : ಬೆಳಗಾವಿ ಮಹಾನಗರದ ಶ್ರೀಮಂತ ಬಡಾವಣೆ ಎಂದೇ ಹೆಸರಾದ ಜಾಧವ ನಗರದಗಲ್ಲಿ ನಿನ್ನೆ ಚಿರತೆ ಕಂಡು ಬಂದ ಹಿನ್ನೆಲೆಯಲ್ಲಿ ಜಾಧವ ನಗರ, ದೂರದರ್ಶನ ನಗರ, ಹನುಮಾನ ನಗರ, ರೈಲ್ವೆ ಕಾಲೋನಿಗಳು ಜನ ಸಂಚಾರವಿಲ್ಲದೇ ಬಿಕೋ ಎನ್ನುತ್ತಿವೆ.

ಇಂದು ಶನಿವಾರ ಜನರು ಮನೆಗಳಿಂದ ಹೊರಗೆ ಬಂದಿಲ್ಲ. ತರಕಾರಿ ಮಾರಾಟ ಮಾಡುವವರು, ಮನೆಗೆಲಸಕ್ಕೆ ಮತ್ತು ಹಾಲು ಹಾಕಲು ಮನೆಗಳಿಗೆ ಬರುವವರೂ ಕೂಡ ಬಂದಿಲ್ಲ.
ಬೆಳಗಿನ ಹೊತ್ತು ಮತ್ತು ಸಾಯಂಕಾಲ ವಾಕಿಂಗ್ ಬರುವ ಜನ ಮನೆಯಿಂದ ಹೊರಗೆ ಬರುತ್ತಿಲ್ಲ .
ಪೊಲೀಸರು ಮೈಕ್ ಮೂಲಕ ಸಂದೇಶ ನೀಡುತ್ತಿದ್ದು ಮನೆಯಿಂದ ಹೊರಗೆ ಬರದಿರುವಂತೆ ವಿನಂತಿಸಿಕೊಳ್ಳುತ್ತಿದ್ದಾರೆ. ಅರಣ್ಯ ಇಲಾಖೆಯು ಅಲಲ್ಲಿ ಬೋನುಗಳಿಟ್ಟಿದ್ದು ,ಡ್ರೋಣ್ ಕ್ಯಾಮೆರಾ ಮೂಲಕ ಚಿರತೆ ಹುಡುಕುವ ಕಾರ್ಯ ಕೂಡ ನಡೆದಿದೆ , ಅನೇಕ ಕಡೆ ಕ್ಯಾಮೆರಾ ಅಳವಡಿಸಲಾಗಿದೆ.


Gadi Kannadiga

Leave a Reply