ಬೆಳಗಾವಿ ೨೨- ನಗರದ ರಂಗಸಂಪದದವರು ಕೋನವಾಳ ಬೀದಿಯಲ್ಲಿರುವ ಲೋಕಮಾನ್ಯ ರಂಗಮಂದಿರದಲ್ಲಿ ಇದೇ ದಿ. ೨೬ ಶನಿವಾರದಂದು ರಂಗಾಯಣ ಕಲಬುರ್ಗಿ ತಂಡದಿಂದ ಗಣೇಶ ಅಮಿನಗಡ ನಿರ್ದೇಶನದಲ್ಲಿ ಡಾ. ಸ. ಜ. ನಾಗಲೋಟಿಮಠ ಅವರ ಆತ್ಮಕಥೆ ಆಧಾರಿತ ‘ಬಿಚ್ಚಿದ ಜೋಳಿಗೆ’ ನಾಟಕ ಮತ್ತು ದಿ. ೨೭ ರವಿವಾರದಂದು ಸಾ. ೬-೩೦ ಕ್ಕೆ ರಂಗಸಂಪದ ತಂಡದಿಂದ ಡಾ. ಅರವಿಂದ ಕುಲಕರ್ಣಿಯವರ ನಿರ್ದೇಶನದಲ್ಲಿ, ಧಾರವಾಡದ ವಿನುತಾ ಹಂಚಿನಮನಿಯವರು ರಚಿಸಿರುವ ‘ಪಂಚಕನ್ಯಾ ಸ್ಮರೇ ನಿತ್ಯಂ’ ನಾಟಕ ಪ್ರದರ್ಶನಗೊಳ್ಳಲಿದೆ. ತಾಂತ್ರಿಕ ಸಹಾಯ ತುಷಾರ ರೇವಣಕರ, ರಂಗಪರಿಕರ ಸಹಾಯ ಶರಣಯ್ಯ ಮಠಪತಿಯವರದ್ದಿದ್ದು ಪಾತ್ರವರ್ಗದಲ್ಲಿ ವಾಮನ ಮಳಗಿ, ಪ್ರಸಾದ ಕಾರಜೋಳ, ಪದ್ಮಾ ಕುಲಕರ್ಣಿ, ನಿರ್ಮಲಾ ಬಟ್ಟಲ, ಪವಿತ್ರಾ ರೇವಣಕರ, ಯೋಗೇಶ ದೇಶಪಾಂಡೆ ಕಾಣಿಸಿಕೊಳ್ಳಲಿದ್ದಾರೆ.
ಕಾರ್ಯಕ್ರಮ ಸರಿಯಾದ ಸಮಯಕ್ಕೆ ಪ್ರಾರಂಭವಾಗಲಿದ್ದು ೧೦ ನಿಮಿಷ ಮೊದಲೇ ಆಸೀನರಾಗಬೇಕು. ಕೋವಿಡ್ ನಿಯಮವನ್ನು ಪಾಲಿಸಬೇಕು. ಪ್ರವೇಶ ಪತ್ರವನ್ನು ಕಡ್ಡಾಯವಾಗಿ ತರಬೇಕೆಂದು ಸಂಘಟಕರು ತಿಳಿಸಿದ್ದಾರೆ.
Gadi Kannadiga > State > ರಂಗಸಂಪದದವರಿಂದ ಎರಡು ನಾಟಕಗಳ ಪ್ರದರ್ಶನ