ಬೆಳಗಾವಿ : ಜಿಲ್ಲೆಯಲ್ಲಿ ಇ-ಸ್ವತ್ತು ನೋಂದಣ ಯನ್ನು ಪರಿಣಾಮಕಾರಿಯಾಗಿ ಅನುಷ್ಠಾನಗೊಳಿಸುವ ಮತ್ತು ಸಾರ್ವಜನಿಕರು ಅನಾವಶ್ಯಕವಾಗಿ ಕಚೇರಿಯಿಂದ ಕಚೇರಿಗೆ ಅಲೆದಾಡುವುದನ್ನು ತಪ್ಪಿಸುವ ಹಿತದೃಷ್ಟಿಯಿಂದ ಈ ಹಿಂದೆ ಈ ಕಚೇರಿಯಿಂದ ಹೊರಡಿಸಿದ ಭೂ ಪರಿವರ್ತನೆ ಆದೇಶಗಳ ಉರ್ಜಿತಾವಧಿ ಮುಂದಿನ ಆದೇಶದವರೆಗೂ ಶಾಶ್ವತ ಎಂದು ಪರಿಗಣ ಸಲು ಹಾಗೂ ವಿಧಿಸಲಾದ ಇನ್ನೂಳಿದ ಷರತ್ತುಗಳು ಯಥಾವತ್ತಾಗಿ ಮುಂದುವರೆಯತಕ್ಕದ್ದು ಈ ಮೂಲಕ ಜಿಲ್ಲೆಯ ಎಲ್ಲಾ ಯೋಜನಾ ಪ್ರಾಧಿಕಾರಿಗಳಿಗೆ ಸೂಚಿಸಿದೆ ಹಾಗೂ ಇನ್ನು ಮುಂದೆ ಸಾರ್ವಜನಿಕರಿಗೆ ಭೂ ಪರಿವರ್ತನೆ ಆದೇಶದ ನವೀಕರಣ ಕುರಿತು ಯಾವುದೇ ಅರ್ಜಿಯನ್ನು ಸಲ್ಲಿಸುವ ಅವಶ್ಯಕತೆ ಇರುವುದಿಲ್ಲ ಎಂದು ಜಿಲ್ಲಾಧಿಕಾರಿ ಎಂ.ಜಿ.ಹಿರೇಮಠ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಈ ಕಚೇರಿಯಿಂದ ಹೊರಡಿಸಿದ ಕೆಲವು ಭೂ ಪರಿವರ್ತನ ಆದೇಶಗಳಲ್ಲಿ ಜಮೀನು ಅಭಿವೃದ್ಧಿಗೆ 2 ವರ್ಷಗಳ ಕಾಲಾವಧಿಯನ್ನು ನಿಗದಿಪಡಿಸಿರುವುದು ಹಾಗೂ ನಿಗದಿತ ಕಾಲಾವಧಿಯಲ್ಲಿ ಜಮೀನು ಅಭಿವೃದ್ಧಿ ಪಡಿಸದೇ ಇದ್ದಲ್ಲಿ ಸದರಿ ಆದೇಶ ತನ್ನಿಂದ ತಾನೇ ರದ್ದಾಗುವುದೆಂದು ಶರ್ತು ವಿಧಿಸಿರುವುದನ್ನು ಕಾಣಬಹುದು. ವಾಸ್ತವಿಕವಾಗಿ ಈ ಶರ್ತನ್ನು ಕೇವಲ ಆಡಳಿತಾತ್ಮಕ ಅನುಕೂಲಕ್ಕಾಗಿ ವಿಧಿಸಿದ್ದು ಇರುತ್ತದೆ. ಷರತ್ತು ವಿಧಿಸುವದರಿಂದ ಭೂ ಪರಿವರ್ತಿತ ಜಮೀನುಗಳ ಕ್ರಮಬದ್ಧ ಮತ್ತು ಕಾಲಮಿತಿಗೊಳಪಟ್ಟು ಅಭಿವೃದ್ಧಿ ಕಾಣಬಹುದು ಎಂಬುದು ಉದ್ದೇಶವಾಗಿರುತ್ತದೆ ಎಂದು ಅವರು ತಿಳಿಸಿದ್ದಾರೆ.
ಬೆಳಗಾವಿ ಜಿಲ್ಲೆಯಲ್ಲಿ ಭೂ ಪರಿವರ್ತನೆ ಆದೇಶ ಹೊರಡಿಸಿದರೂ ಕೆಲವು ಭೂಮಾಲೀಕರು ಯೋಜನಾ ಪ್ರಾಧಿಕಾರದಿಂದ ವಿನ್ಯಾಸ ನಕ್ಷೆ ಅನುಮೋದಿಸಿಕೊಂಡು ಜಮೀನು ಅಭಿವೃದ್ಧಿ ಪಡಿಸಿದ್ದು ಕಂಡು ಬಂದಿರುವುದಿಲ್ಲ. ಇಂತಹ ಪ್ರಕರಣಗಳಲ್ಲಿ ಇ-ಸ್ವತ್ತು ನೋಂದಣ ಗೆ ಸ್ಥಳೀಯ ಸಂಸ್ಥೆಗಳು, ವಿನ್ಯಾಸ ನಕ್ಷೆಯನ್ನು ಕೋರುತ್ತಿದ್ದು, ಭೂ ಮಾಲೀಕರು ಯೋಜನಾ ಪ್ರಾಧಿಕಾರಕ್ಕೆ ತೆರಳಿದಾಗ ಭೂ ಪರಿವರ್ತನ ಆದೇಶಗಳ ಉರ್ಜಿತಾವಧಿ ಮುಕ್ತಾಯಗೊಂಡಿರುವುದರಿಂದ ನವೀಕೃತ ಆದೇಶಗಳನ್ನು ಸಲ್ಲಿಸಲು ಯೋಜನಾ ಇಲಾಖೆಯ ಅಧಿಕಾರಿಗಳು ಭೂ ಮಾಲೀಕರನ್ನು ಒತ್ತಾಯಿಸುತ್ತಿದ್ದಾರೆ ಎಂದು ಹೇಳಿದ್ದಾರೆ.
ಈ ಹಿನ್ನಲೆಯಲ್ಲಿ ಭೂ ಪರಿವರ್ತನಾ ಆದೇಶದ ನವೀಕರಣಕ್ಕೆ ಇತ್ತೀಚೆಗೆ ಈ ಕಚೇರಿಯಲ್ಲಿ ಸಾಕಷ್ಟು ಅರ್ಜಿಗಳು ಸ್ವೀಕೃತವಾಗುತ್ತಿವೆ. ಇದರಿಂದ ಸಾರ್ವಜನಿಕರು ಅನಾವಶ್ಯಕವಾಗಿ ಕಚೇರಿಯಿಂದ ಕಚೇರಿಗೆ ಅಲೆದಾಡುವ ಪರಿಸ್ಥಿತಿ ಉಂಟಾಗಿರುತ್ತದೆ. ಕರ್ನಾಟಕ ಭೂ ಕಂದಾಯ ಕಾಯ್ದೆ, 1964 ಕಲಂ, 95 ರಡಿಯಲ್ಲಿ ಕೃಷಿ ಜಮೀನುಗಳನ್ನು ಕೃಷಿಯೇತರ ಉದ್ದೇಶಕ್ಕಾಗಿ ಉಪಯೋಗಿಸುವ ಪೂರ್ವದಲ್ಲಿ ಜಿಲ್ಲಾಧಿಕಾರಿಗಳ ಪೂರ್ವಾನುಮತಿ ಪಡೆಯುವುದು ಅಗತ್ಯವೆಂದು ಉಲ್ಲೇಖಿಸಲಾಗಿದೆ. ಮುಂದುವರೆದು, ಕಲಂ 97ರಲ್ಲಿ ಉದ್ದೇಶ ಬದಲಾವಣೆಗೆ ಸಹ ಅವಕಾಶ ಕಲ್ಪಿಸಲಾಗಿದೆ. ಆದರೆ ಕಾಯ್ದೆಯಲ್ಲಿ ಎಲ್ಲಿಯೂ ಸಹ ಭೂಪರಿವರ್ತನಾ ಆದೇಶಕ್ಕೆ ಉರ್ಜಿತಾವಧಿಯನ್ನು ನಿಗದಿಪಡಿಸಿದ್ದು ಅಥವಾ ನಿಗದಿಪಡಿಸಲು ಸೂಚಿಸಿದ್ದು ಇರುವುದಿಲ್ಲ. ಈ ಹಿನ್ನೆಲೆಯಲ್ಲಿ ಒಮ್ಮೆ ಭೂಪರಿವರ್ತನೆ ಆದೇಶ ಹೊರಡಿಸಿದ ನಂತರ ಸದರಿ ಆದೇಶ ಶಾಶ್ವತ ಎಂದು ಭಾವಿಸಬೇಕಾಗುತ್ತದೆ ಎಂದು ತಿಳಿಸಿದ್ದಾರೆ.
ಇತ್ತೀಚೆಗೆ ಹಳೆಯ ಭೂ ಪರಿವರ್ತನ ಆದೇಶಗಳ ನವೀಕರಣಕ್ಕೆ ಭೂ ಮಾಲೀಕರು ಸತತವಾಗಿ ಈ ಕಚೇರಿಗೆ ಅರ್ಜಿ ಸಲ್ಲಿಸುತ್ತಿರುವುದು ಗಮನಕ್ಕೆ ಬಂದಿರುತ್ತದೆ. ಸರ್ಕಾರವು ಭೂ ಪರಿವರ್ತಿತ ಜಮೀನುಗಳ ಇ-ಸ್ವತ್ತು ನೋಂದಣ ಕಡ್ಡಾಯಗೊಳಿಸಿದ ನಂತರ ಇಂತಹ ಅರ್ಜಿಗಳ ಸಂಖ್ಯೆ ಇನ್ನಷ್ಟು ಹೆಚ್ಚಾಗಿರುತ್ತದೆ. ಕರ್ನಾಟಕ ಭೂಕಂದಾಯ ಕಾಯ್ದೆ, 1964 ಕಲಂ 95 ರಡಿಯಲ್ಲಿ ಜಿಲ್ಲಾಧಿಕಾರಿಗಳು, ಕೃಷಿ ಜಮೀನನ್ನು ಕೃಷಿಯೇತರ ಉದ್ದೇಶಕ್ಕಾಗಿ ಉಪಯೋಗಿಸಲು ಆದೇಶ ಹೊರಡಿಸಿದ ನಂತರ ಸಂಬಂಧಿಸಿದ ಭೂ ಮಾಲೀಕರು ಭೂ ಪರಿವರ್ತಿತ ಜಮೀನಿನಲ್ಲಿ ನಿರ್ಮಿಸಲು ಉದ್ದೇಶಿಸಿರುವ ವಿನ್ಯಾಸಗಳ ನಕ್ಷೆಯನ್ನು ಯೋಜನಾ ಪ್ರಾಧಿಕಾರದಿಂದ ಅನುಮೋದಿಸಿಕೊಂಡು ತದನಂತರ ಇ-ಸ್ವತ್ತು ನೋಂದಣ ಗೆ ಕ್ರಮ ಜರುಗಿಸಬೇಕಾಗುತ್ತದೆ ಎಂದು ಜಿಲ್ಲಾಧಿಕಾರಿ ಎಂ.ಜಿ. ಹಿರೇಮಠ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.