This is the title of the web page
This is the title of the web page

Please assign a menu to the primary menu location under menu

Local News

ಜೈನ ಮು£ ಹತ್ಯೆ ಖಂಡಿಸಿ ಮನವಿ


ಸವದತ್ತಿ: ಇಲ್ಲಿನ ತಹಶೀಲ್ದಾರ ಕಚೇರಿಯಲ್ಲಿ ನ್ಯಾಯವಾದಿ ಸಂಘದಿಂದ ಸೋಮವಾರ ಜೈನ ಮು£ ಹತ್ಯೆ ಮತ್ತು ವಕೀಲರ ಮೇಲಿನ ಮಾರಣಾಂತಿಕ ಹಲ್ಲೆ ಖಂಡಿಸಿ ಶಿರಸ್ತೆದಾರ ಶಶಿರಾಜ್ ವನಕೆ ಅವರ ಮೂಲಕ ಸರಕಾರಕ್ಕೆ ಮನವಿ ಸಲ್ಲಿಸಲಾಯಿತು.
ಸಂಘದ ಅಧ್ಯಕ್ಷ ಎಮ್.ಎನ್. ಮುತ್ತಿನ ಮಾತನಾಡಿ, ಚಿಕ್ಕೋಡಿಯ ಜೈನ ಮು£ಯನ್ನು ಅಪಹರಿಸಿ ಬರ್ಬರವಾಗಿ ಹತ್ಯೆಗೈದಿದ್ದು ಅತ್ಯಂತ ಹೀನಕೃತ್ಯವಾಗಿದೆ. ಕೊಲೆ ಬಳಿಕ ದೇಹವನ್ನು ತುಂಡುಗಳಾಗಿ ಕತ್ತರಿಸಿ ವಿಕೃತ ಮನಸ್ಥಿತಿಯರಿಗೆ ಕಠಿಣ ಶಿಕ್ಷೆ ವಿಧಿಸಬೇಕು. ಸಮಾಜದ ಶಾಂತಿಗೆ ಧಕ್ಕೆ ತರುವವರಿಗೆ ಧಿಕ್ಕಾರ ವಿರಲಿ. ಸಮಾಜವನ್ನು ಶಾಂತಿ ಮತ್ತು ಸಮಾನತೆಯಿಂದ ಮುನ್ನೆಡೆಸುವ ಮು£ ಮತ್ತು ಮಠಾಧೀಶರಿಗೆ ಭದ್ರತೆ ಇಲ್ಲದಾಗಿದೆ.
ಹಳಿಯಾಳದ ವಕೀಲರ ಸಂಘದ ಅಧ್ಯಕ್ಷ ಮಲ್ಲಿಕಾರ್ಜುನ ಅಷ್ಟೇಕರ ಅವರ ಮೇಲೆ ಮಾರಣಾಂತಿಕ ಹಲ್ಲೆ ನಡೆಸಲಾಗಿದೆ. ಕಕ್ಷಿದಾರನೇ ತನ್ನ ವಕೀಲನ ಮನೆಗೆ ನುಗ್ಗಿ ವಕೀಲ ಮತ್ತು ಆತನ ಪುತ್ರನ ಮೇಲೆ ಚಾಕುವಿ£ಂದ ಮಾರಣಾಂತಿಕ ಹಲ್ಲೆ ನಡೆಸಿದ್ದಾನೆ. ಇದು ಸಮಾಜದಲ್ಲಿ ಭಯದ ವಾತಾವರಣ ಸೃಷ್ಟಿಸಿದೆ. ವಕೀಲರು ಸೇರಿ ಸಮಾಜದ ಅಭಿವೃದ್ಧಿಗೆ ಶ್ರಮಿಸುವ ಎಲ್ಲರಿಗೂ ಸೂಕ್ತ ರಕ್ಷಣೆ ಒದಗಿಸಲೇ ಬೇಕು. ಹಲ್ಲೆಗೈದ ಆರೋಪಿಗೆ ಕಠಿಣ ಶಿಕ್ಷೆ ಜೊತೆಗೆ ವಕೀಲರ ಹಿತರಕ್ಷಣಾ ಕಾಯ್ದೆ ಜಾರಿಗೆ ತರಬೇಕು ಎಂದು ಸರಕಾರಕ್ಕೆ ಒತ್ತಾಯಿಸಿದರು.
ಈ ವೇಳೆ ವಕೀಲರಾದ ಎಮ್. ಎಪ್. ಬಡಿಗೇರ, ಸು£Ãತಾ ಗೊಂದಕರ, ವಿವೇಕ ಮುನವಳ್ಳಿ, ಅರುಣ ಮಾನಗಾಂವ, ಎ. ಎಚ್. ನದಾಪ್, ರಾಘವೇಂದ್ ಪೂಜಾರ, ಎಮ್. ಎಸ್. ಹುಬ್ಬಳ್ಳಿ, ಆರ್. ಎಸ್. ಆಲದಕಟ್ಟೆ, ದಿಲೀಪ್ ಜಮಾದಾರ, ಎಸ್. ಎಸ್. ಗಿರಿಜಣ್ಣವರ ಇತರರು ಇದ್ದರು.


Leave a Reply