This is the title of the web page
This is the title of the web page

Please assign a menu to the primary menu location under menu

Local News

ಪ್ಲಾಸ್ಟಿಕ್ ನಿಷೇಧಿಸಿ ಆದೇಶ: ನಿಯಮ ಮೀರಿದರೆ ದಂಡ


ಬೆಳಗಾವಿ,ಜುಲೈ೧೬: ಪ್ಲಾಸ್ಟಿಕ್‌ನಿಂತ ತಯಾರಿಸಿದ ವಸ್ತುಗಳಾದ ಕ್ಯಾರಿ ಬ್ಯಾಗ್, ಬ್ಯಾನರ್, ಫ್ಲೆಕ್ಸ್, ಸ್ಟ್ರಾ ಸೇರಿದಂತೆ ಇನ್ನೀತರ ಪ್ಲಾಸ್ಟಿಕ್ ವಸ್ತಗಳನ್ನು ನಿಷೇಧಿಸಿ ಅಂಕಲಗಿ-ಅಕ್ಕತಂಗೇರಹಾಳ ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಆದೇಶಹೊರಡಿಸಲಾಗಿದೆ. ಜುಲೈ ೧ ೨೦೨೨ರಿಂದಲೇ ಸರ್ಕಾರದ ಆದೇಶದಂತೆ ಏಕ ಬಳಕೆಯ ಪ್ಲಾಸ್ಟಿಕ್ (SUP) ನಿಷೇಧಿಸಲಾಗಿದೆ.
ಪ್ಲಾಸ್ಟಿಕ್ ಸ್ಪೂನ್‌ಗಳು, ಪ್ಲಾಸ್ಟಿಕ್ ಪ್ಲೇಟ್‌ಗಳು, ಸಿಗರೇಟ್ ಪ್ಯಾಕೇಟ್‌ಗಳು ಸೇರಿದಂತೆ ಇನ್ನಿತರ ಬಳಕೆಯ ೧೦೦ ಮೈಕ್ರಾನ್‌ಗಿಂತ ಕಡಿಮೆ ದಪ್ಪದ ಪ್ಲಾಸ್ಟಿಕ್ ಅಥವ ಪಿವಿಸಿ ಬ್ಯಾನರ್‌ಗಳನ್ನು ನಿಷೇಧಿಸಲಾಗಿದೆ.
ಪ್ಲಾಸ್ಟಿಕ್ ಉತ್ಪಾದಿತ ಹಾಗೂ ಬಳಕೆಯ ಎಲ್ಲ ಕಂಪನಿಗಳು, ಸಂಸ್ಥೆಗಳು, ಮಾಲ್‌ಗಳು, ವಾಣಿಜ್ಯ, ಪ್ರವಾಸೋದ್ಯಮ ಸ್ಥಳಗಳು, ಆಸ್ಪತ್ರೆಗಳು, ಕಚೇರಿಗಳಲ್ಲಿ ಈ ಕೂಡಲೇ ಮುತುವರ್ಜಿ ವಹಿಸಿ ಪ್ಲಾಸ್ಟಿಕ್ ಮಾರಾಟ ಹಾಗೂ ಬಳಕೆಯನ್ನು ಕೈ ಬಿಡಬೇಕು.
ನಿಯಮ ಮೀರಿ ಪ್ಲಾಸ್ಟಿಕ್ ಮಾರಾಟ, ಬಳಕೆಯಾದರೆ ಅಂತಹವರ ವಿರುದ್ಧ ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ದಂಡ ವಿಧಿಸಲಾಗುವುದು ಎಂದು ಅಂಕಲಗಿ-ಅಕ್ಕತಂಗೇರಹಾಳ ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Gadi Kannadiga

Leave a Reply