This is the title of the web page
This is the title of the web page

Please assign a menu to the primary menu location under menu

Local News

ಮಾನವನನ್ನು ಮನುಷ್ಯನ್ನಾಗಿಸುವ ಜೀವಧಾರೆಯೇ ಕವಿತೆ: ವಿ. ಎಸ್. ಮಾಳಿ


ಬೆಳಗಾವಿ ಫೆಬ್ರವರಿ-೦೬: ” ಸಾಹಿತ್ಯವು ಸಂಸ್ಕೃತಿಯ ವೃಕ್ಷದಲ್ಲಿ ಅರಳಿದ ಹೂವು. ಅದು ಬದುಕಿಗೆ ಉತ್ಸಾಹ ಹಾಗೂ ಮೌಲ್ಯಗಳನ್ನು ಬಹುದೊಡ್ಡ ಶಕ್ತಿಯಾಗಿದ್ದು ಮಾನವನನ್ನು ಮನುಷ್ಯನನ್ನಾಗಿಸುವ ಜೀವಧಾರೆಯೇ ಕವಿತೆ. ಆ ನಿಟ್ಟಿನಲ್ಲಿ ಲತಾ ಹುದ್ದಾರ ಅವರ ಕಾವ್ಯತೀರ್ಥ ಪವಿತ್ರ ಬದುಕಿನ ಸಚಿತ್ರ ಕಾವ್ಯಗುಚ್ಛವಾಗಿದೆ” ಎಂದು ಹಿರಿಯ ಸಾಹಿತಿ ಡಾ. ವಿ. ಎಸ್. ಮಾಳಿ ಹೇಳಿದರು.
ಕನ್ನಡ ಸಾಹಿತ್ಯ ಪರಿಷತ್ತು, ತಾಲೂಕಾ ಘಟಕ ಹಾಗೂ ಶ್ರೀ ಸಿದ್ದೇಶ್ವರ ಸಾಹಿತ್ಯ ವೇದಿಕೆಗಳ ಸಹಯೋಗದಲ್ಲಿ ಹಾರೂಗೇರಿಯ ಎಚ್. ವಿ. ಎಚ್. ಶಾಲಾ ಸಭಾಭವನದಲ್ಲಿ ಜರುಗಿದ
ಲತಾ ದೇವೇಂದ್ರ ಹುದ್ದಾರ ಅವರ ಕಾವ್ಯ ತೀರ್ಥ ಪುಸ್ತಕ ಲೋಕಾರ್ಪಣೆ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ” ಕವಿ ಅಂದ್ರೆ ಪುರುಷ ಅನ್ನುವುದು ಜನರೂಢಿ. ಆದರೆ ಕನ್ನಡ ಸಾಹಿತ್ಯ ಪರಂಪರೆಯಲ್ಲಿ ಕವಿಯು ಸ್ತ್ರೀ ಸಂವೇದನೆಯೊಂದಿಗೆ ಜೀವನ್ಮುಖಿ ಚಿಂತನೆ ತುಂಬಬಲ್ಲ ಒಂದು ವ್ಯಕ್ತಿತ್ವವಾಗಿದ್ದು ಕನ್ನಡ ಕಾವ್ಯಲೋಕದಲ್ಲಿ ಮಹಿಳೆಯರು ಹಾಗೂ ಪುರುಷರು ಸಮನಾಗಿ ಕೃಷಿ ಮಾಡಿದ್ದಾರೆ. ಅದರಲ್ಲೂ ಹಳ್ಳಿಗಾಡಿನ ಅಕ್ಷರ ಕಲಿಯದ ಸಾವಿರಾರು ಜನಪದ ಹೆಣ್ಣುಮಕ್ಕಳು ಅದ್ಭುತ ಜಾನಪದ ಕಾವ್ಯ ಕಟ್ಟಿಕೊಟ್ಟಿರುವುದೇ ಸಾಕ್ಷಿಯಾಗಿದೆ. ರಾಯಬಾಗದ ಪರಿಸರದ ಮಹಿಳಾ ಸಾಹಿತ್ಯ ಲೋಕಕ್ಕೆ ಲತಾ ಅವರು ಹೊಸ ಭರವಸೆಯಾಗಿದ್ದಾರೆ” ಎಂದರು.
ಕೃತಿ ಲೋಕಾರ್ಪಣೆ ಮಾಡಿ ಮಾತನಾಡಿದ ಕುಡಚಿ ಶಾಸಕ ಪಿ. ರಾಜೀವ ಅವರು ಮಾತನಾಡಿ , ” ಸಾಹಿತ್ಯವು ಜನರ ಬದುಕಿನ ಚಿತ್ರಣ ನೀಡುವ ಕನ್ನಡಿಯಾಗಿದ್ದು ಸಾಹಿತ್ಯದಿಂದ ಜನರ ಬದುಕಿನ ಜೀವನದ ನೋವು, ನಲಿವುಗಳಿಗೆ ಸ್ಪಂದಿಸುತ್ತ ಸಂತೈಸುತ್ತದೆ” ಎಂದು ಹೇಳಿದರು. ಪತ್ರಕರ್ತ ಸುನಿಲ ಕಬ್ಬೂರ ಪುಸ್ತಕ ಪರಿಚಯ ಮಾಡಿದರು.
ಅತಿಥಿಗಳಾಗಿ ಡಿ. ಎಸ್. ನಾಯ್ಕ, ವಿಠಲ ಜೋಡಟ್ಟಿ, ರತ್ನಾ ಬಾಳಪ್ಪನವರ, ರವೀಂದ್ರ ಪಾಟೀಲ, ಆಗಮಿಸಿದ್ದರು.ಕಾರ್ಯಕ್ರಮದಲ್ಲಿ ಲತಾ ಹುದ್ದಾರ ದಂಪತಿಗಳು ಹಾಗೂ ಸುಂದರ ಭಾರತರಾಜ ಲೊಂಡೆ ಅವರನ್ನು ಸತ್ಕಾರಿಸಲಾಯಿತು.
ಬಿ. ಎ. ಜಂಬಗಿ, ಎಲ್. ಎಸ್. ಧರ್ಮಟ್ಟಿ, ಸದಾಶಿವ ವಾಳಕೆ, ಸುಖದೇವ ಕಾಂಬಳೆ, ವಿಲಾಸ ಕಾಂಬಳೆ, ಬಸು ಖೋತ,ಕಿರಣ ಗಾಯಕವಾಡ,ಶ್ವೇತಾ ಹುದ್ದಾರ, ಗೀತಾ ಬಾಗಾಯಿ, ಸಾಗರ ಹುದ್ದಾರ, ಶ್ರೀಧರ ಹುದ್ದಾರ, ಶರತ ಬಾಗಾಯಿ, ಬಸನಗೌಡ ಆಸಂಗಿ,ಬಸವರಾಜ ಸನದಿ, ಡಿ.ವೈ. ಸನದಿ ಉಪಸ್ಥಿತರಿದ್ದರು. ಪದ್ಮರಾಜ ಅಲ್ಲಪ್ಪನವರ ಅವರು ಪ್ರಾರ್ಥಿಸಿದರು.ಶಂಕರ ಕ್ಯಾಸ್ತಿ ಪ್ರಾಸ್ತಾವಿಕ ಮಾತನಾಡಿದರು. ಎಂ. ಎಸ್. ಬಳವಾಡ ಸ್ವಾಗತಿಸಿದರು. ಭರಮಾ ಕರೆಪ್ಪ ಪೂಜೇರಿ ನಿರ್ವಹಿಸಿದರು. ಟಿ. ಎಸ್. ವಂಟಗುಡಿ ವಂದಿಸಿದರು.


Gadi Kannadiga

Leave a Reply