ಬೆಳಗಾವಿ : ಕರ್ನಾಟಕ ಸಾಹಿತ್ಯ ಅಕಾಡೆಮಿಯ ವತಿಯಿಂದ ಕರ್ನಾಟಕ ಸಂಭ್ರಮ-50ರ ಅಭಿಯಾನ ನಿಮಿತ್ತ ವಿಭಾಗವಾರು ಯುವ ಕವಿಗೋಷ್ಠಿ ಹಮ್ಮಿಕೊಂಡಿದೆ.ಕರ್ನಾಟಕ ಸಾಹಿತ್ಯ ಅಕಾಡೆಮಿ ಬೆಂಗಳೂರು, ಮೈಸೂರು, ಬೆಳಗಾವಿ ಹಾಗೂ ಕಲಬುರಗಿ ವಿಭಾಗಗಳಲ್ಲಿ ವಿಭಾಗವಾರು ಯುವಕವಿ ಗೋಷ್ಠಿಗಳನ್ನು ಆಯೋಜಿಸುತ್ತಿದ್ದು, ಆಸಕ್ತ 20ರಿಂದ 40 ವರ್ಷ ವಯಸ್ಸಿನ ಯುವಕವಿಗಳಿಂದ ಕವಿತೆಗಳನ್ನು ಆಹ್ವಾನಿಸಲಾಗಿದೆ. ರಾಜ್ಯದ ಎಲ್ಲ ಭಾಗದ ಆಸಕ್ತ ಕವಿಗಳು ಕನಿಷ್ಟ 3 ಕವಿತೆ ಕಳುಹಿಸಿಕೊಡಬಹುದು. ಕವಿತೆ ಕಳುಹಿಸಲು ಅ.30ರಂದು ಕೊನೆ ದಿನ. ಆಸಕ್ತರು ಕವಿತೆಗಳನ್ನು ಸಲ್ಲಿಸುವಾಗ ಅನುಸರಿಸಬೇಕಾದ ಕ್ರಮಗಳ ಬಗ್ಗೆ ಕರ್ನಾಟಕ ಸಾಹಿತ್ಯ ಅಕ್ಯಾಡೆಮಿ ಜಾಲತಾಣ http:// karnatakasahithyaacademy. org ಮಾಹಿತಿ ಪಡೆಯುವಂತೆ ಕರ್ನಾಟಕ ಸಾಹಿತ್ಯ ಅಕಾಡೆಮಿ ಸದಸ್ಯರಾದ ಡಾ .ಮೈತ್ರೇಯಿಣಿ ಗದಿಗೆಪ್ಪಗೌಡರ ಹಾಗೂ ಅಕ್ಯಾಡೆಮಿ ರೆಜಿಸ್ಟರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.