This is the title of the web page
This is the title of the web page

Please assign a menu to the primary menu location under menu

Local News

ಬೆಳಂ ಬೆಳಿಗ್ಗೆ ರೌಡಿಗಳ ಮನೆ ಮೇಲೆ ಪೊಲೀಸರ ದಾಳಿ ಮಾರಕಾಸ್ತ್ರಗಳ ವಶಕ್ಕೆ


ಬೆಳಗಾವಿ: ಬೆಳಗಾವಿ ಪೊಲೀಸ್ ಅಂದ್ರೆ ರೌಡಿಗಳು ನಿದ್ರೆಗಣ್ಣಲ್ಲು ಎದ್ದು ಕೂಡುವಂತೆ ಡಿಸಿಪಿ ರವೀಂದ್ರ ಗಡಾದಿ ಅವರ ತಂಡ ಮಾಡಿದ್ದು ನಗರದ ರೌಡಿಗಳ ಮನೆಗಳ ಮೇಲೆ ಬೆಳ್ಳಂ ಬೆಳಿಗ್ಗೆ ೫ಗಂಟೆಗೆ ದಾಳಿ ನಡೆಸಿ ಮಾರಕಾಸ್ತ್ರಗಳನ್ನು ವಶಕ್ಕೆ ಪಡೆದಿದ್ದಾರೆ.

ಡಿಸಿಪಿ ರವೀಂದ್ರ ಗಡಾದಿ ಹಾಗೂ150ಕ್ಕೂ ಹೆಚ್ಚು ಜನರಿದ್ದ ಪೊಲೀಸರ ತಂಡ ನಡೆಸಿದ ದಾಳಿಯಲ್ಲಿ ಮೂವರು ರೌಡಿಗಳ ಮನೆಗಳಲ್ಲಿ ತಲವಾರ, ಚಾಕು, ಜಂಬೆ ಸೇರಿದಂತೆ ವಿವಿಧ ಮಾರಕಾಸ್ತ್ರಗಳನ್ನು ವಶಕ್ಕೆ ಪಡೆದಿದ್ದಾರೆ.

ರುಕ್ಮೀಣಿ ನಗರದ ಮಹಾದ್ವಾರ ರಸ್ತೆಯ ವಿನಯ ಶಂಕರ ಪ್ರಧಾನ(45), ರುಕ್ಮಿಣಿ ನಗರ ಶ್ರೀಧರ ಸತ್ಯಪ್ಪ ತಲವಾರ(29), ಮತ್ತು ಖಂಜರ ಗಲ್ಲಿಯ ಅಲ್ತಾಫ ಸುಬೇದಾರ(36) ಸೇರಿದಂತೆ ಒಟ್ಟು 26 ರೌಡಿಗಳ ಮನೆಗಳ ಮೇಲೆ ದಾಳಿ ನಡೆಸಿ ಮಾರಕಾಸ್ತ್ರಗಳನ್ನು ವಶಪಡಿಸಿಕೊಂಡಿದ್ದಾರೆ.

ನಗರದಲ್ಲಿ ಶಾಂತಿ ಭಂಗವನ್ನುಂಟು ಮಾಡುವವರ ಮೇಲೆ ಸದಾ ನಿಗಾ ಇಡಲಾಗುತ್ತಿದ್ದು ತಕ್ಷಣ ಅಂತಹವರ ವಿರುದ್ಧ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಡಿಸಿಪಿ ರವೀಂದ್ರ ಗಡಾದಿ ತಿಳಿಸಿದ್ದಾರೆ.


Gadi Kannadiga

Leave a Reply