ಅಥಣಿ: ೩-ಅಥಣಿ ವಿಧಾನಸಭಾ ಮತಕ್ಷೇತ್ರದಲ್ಲಿ ಆಜಾದ್ ಮಜದೂರ್ ಕಿಸಾನ್ ಪಕ್ಷದ ಅಭ್ಯರ್ಥಿಯಾಗಿರುವ ಸಂಜೀವ ಹರಿಶ್ಚಂದ್ರ ಕಾಂಬಳೆ ಅವರಿಂದ ಅಥಣಿ ವಕೀಲರ ಸಂಘ, ಹಲ್ಯಾಳ, ಕರ್ಲಟ್ಟಿ, ದರೂರ, ಸತ್ತಿ, ಯಕ್ಕಂಚಿ, ಯಲಿಹಡಲಗಿ ಸೇರಿದಂತೆ ವಿವಿಧ ಗ್ರಾಮಗಳಲ್ಲಿ ಮತಯಾಚಿಸಿದರು.
ಅಭ್ಯರ್ಥಿ ಸಂಜೀವ ಹರಿಶ್ಚಂದ್ರ ಕಾಂಬಳೆ ಮಾತನಾಡಿ ಕ್ಷೇತ್ರದ ಎಲ್ಲ ಗ್ರಾಮಗಳ ಮುಖ್ಯ ರಸ್ತೆಗಳ ಅಭಿವೃದ್ಧಿ, ೨೪ಘಿ೭ ಕುಡಿಯುವ ನೀರು, ಒಳಚರಂಡಿ, ಬಸ್ ನಿಲ್ದಾಣಗಳನ್ನು ನಿರ್ಮಾಣ ಮಾಡುವುದಾಗಿ ಮತ್ತು ಅಥಣಿ ವಿಧಾನಸಭಾ ಕ್ಷೇತ್ರದಲ್ಲಿನ ಜನರ ಜೀವನಮಟ್ಟ ಸುಧಾರಿಸಲು ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.
ರೈತರ ಸಮಸ್ಯೆಗಳ ಪರಿಹಾರಕ್ಕೆ ಸದಾ ಯತ್ನಿಸಲು ಸಿದ್ದನಿದ್ದೇನೆ. ವಕೀಲ ಹಾಗೂ ಸಾಮಾಜಿಕ ಹೋರಾಟಗಾರನಾಗಿ ಕಾರ್ಯನಿರ್ವಹಿಸುತ್ತಿರುವುದರಿಂದ ತಮಗೆ ಜನತೆಯ ಕಷ್ಟನಷ್ಟಗಳ ಸ್ಪಷ್ಟವಾದ ಅರಿವಿದ್ದು ಜನಸಾಮಾನ್ಯರ ಶಾಸಕನಾಗಲು ಮತದಾರರು ಬೆಂಬಲಿಸಬೇಕು ಎಂದು ಸಂಜೀವ ಕಾಂಬಳೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಪಾಪು ಕಾಂಬಳೆ, ಶಿವು ಕಾಂಬಳೆ, ಸಂತೋಷ ಕಾಂಬಳೆ, ಮಹೇಶ ಕಾಂಬಳೆ, ವಿಠ್ಠಲ ಎಸ್. ಕಾಂಬಳೆ, ರವೀಂದ್ರ ಕಾಂಬಳೆ ಮತ್ತು ಅಭಿಮಾನಿಗಳು ಹಾಗೂ ಆಜಾದ್ ಮಜದೂರ್ ಕಿಸಾನ್ ಪಕ್ಷದ ಕಾರ್ಯಕರ್ತರು ಭಾಗವಹಿಸಿದ್ದರು.