This is the title of the web page
This is the title of the web page

Please assign a menu to the primary menu location under menu

State

ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ ಹಾಗೂ ಹುತಾತ್ಮ ವೀರಯೋಧ ಮೇಜರ್ ಸಂದೀಪ್ ಉನ್ನಿಕೃಷ್ಣನ್ ನಗರದ ನಾಮಫಲಕ/ಭಾವಚಿತ್ರಕ್ಕೆ ಪೂಜೆ


ಕುಷ್ಟಗಿ:- ನಗರದ ಗಜೇಂದ್ರಗಡ ರಸ್ತೆಯ ಹತ್ತಿರವಿರುವ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ವೃತ ಹಾಗೂ ಹುತಾತ್ಮ ವೀರಯೋಧ ಮೇಜರ್ ಸಂದೀಪ್ ಉನ್ನಿಕೃಷ್ಣನ್ ನಗರದ ನಾಮಫಲಕ/ಭಾವಚಿತ್ರಕ್ಕೆ ಪೂಜೆ ಹಾಗೂ ಪುಷ್ಪಾರ್ಪಣೆ ನೆರವೇರಿಸಿ, 76ನೆ ಸ್ವಾತಂತ್ರೋತ್ಸವ ಹಾಗೂ ಸ್ವಾತಂತ್ರ್ಯ ಅಮೃತ ಮಹೋತ್ಸವ ಆಚರಿಸಲಾಯಿತು.

ಹೈದರಾಬಾದ್-ಕರ್ನಾಟಕ ಯುವಶಕ್ತಿ ಸಂಘಟನೆ, ಹಾಲುಮತ ಸಮುದಾಯದ ಹಿರಿಯ ಮತ್ತು ಯುವ ಘಟಕ ಕುಷ್ಟಗಿ,ಭಾರತೀಯ ಕೃಷಿ ಕಾರ್ಮಿಕ ಸಂಘಟನೆ ಯ ಅಧ್ಯಕ್ಷರು ಹಾಗೂ ಸರ್ವ ಸದಸ್ಯರು ಉಭಯ ಸ್ವಾತಂತ್ರ್ಯ ಹೋರಾಟಗಾರ ಹಾಗೂ ಹುತಾತ್ಮ ವೀರಯೋಧರ ಭಾವಚಿತ್ರಕ್ಕೆ ಪೂಜೆ ಮತ್ತು ಮಾಲಾರ್ಪಣೆ ಮಾಡಿ ಗೌರವ ಸಲ್ಲಿಸಿದರು.

ಕುಷ್ಟಗಿ ನ್ಯಾಯಾಲಯದಲ್ಲಿ ಇತ್ತೀಚಿಗೆ ನಡೆದ ತಾಲೂಕಿನ ವಕೀಲರ ಸಂಘದ ಎಲ್ಲಿ ಆಯ್ಕೆಯಾದ ನೂತನ ಅಧ್ಯಕ್ಷ ಮಲ್ಲಿಕಾರ್ಜುನ ಗೋಡಿ, ಕಾರ್ಯದರ್ಶಿ ಪರಶುರಾಮ ಆಡಿನ್ ರನ್ನು ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಪುರಸಭೆ ಮಾಜಿ ಅಧ್ಯಕ್ಷ ಹಾಗೂ ಹಾಲಿ ಸದಸ್ಯ ಕಲ್ಲೇಶ ತಾಳದ, ಮುಖಂಡರಾದ ಮುದುಕಪ್ಪ ಆಚಾರ, ಶರಣಪ್ಪ ಚೂರಿ, ಭಾರತೀಯ ಕೃಷಿ ಕಾರ್ಮಿಕ ಸಂಘಟನೆಯ ಮುಖ್ಯಸ್ಥರಾದ ಶರಣಪ್ಪ ಕತ್ತಿ, ರವಿಪ್ರಕಾಶ್ ಕೆಳಗಡೆ, ರಾಘವೇಂದ್ರ ಭಜಂತ್ರಿ, ಹೈದರಾಬಾದ್ ಕರ್ನಾಟಕ ಯುವಶಕ್ತಿ ಸಂಘಟನೆ ಸಂಸ್ಥಾಪಕ ಅಧ್ಯಕ್ಷ ಬಸವರಾಜ ಗಾಣಿಗೇರ, ಬಸವರಾಜ ತಿಮ್ಮಾಪುರ, ಶ್ರೀಧರ ಹಿರೇಮಠ,ಪ್ರವೀಣ ತಾರಿವಾಳ, ಹಾಲುಮತ ಯುವ ಘಟಕದ ಕೊಳ್ಳಪ್ಪ ಬೂದರ, ತೊಂಡೆಪ್ಪ ಚೂರಿ ಇತರ ಉಪಸ್ಥಿತರಿದ್ದರು.

ಆರ್ ಶರಣಪ್ಪ ಗುಮಗೇರಾ
ಕೊಪ್ಪಳ


Gadi Kannadiga

Leave a Reply