This is the title of the web page
This is the title of the web page

Please assign a menu to the primary menu location under menu

State

ಪೋಷಣ್ ಮಾಸಾಚರಣೆ ಕಾರ್ಯಕ್ರಮ


ಗದಗ ಸೆಪ್ಟೆಂಬರ್ ೭: ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ,ಶಿಶು ಅಭಿವೃದ್ದಿ ಯೋಜನೆ, ನರಗುಂದ ಇವರ ವತಿಯಿಂದ ಪೋಷಣ್ ಮಾಸಾಚರಣೆ ಕಾರ್ಯಕ್ರಮವು ಮಂಗಳವಾರದಂದು ಕುರಗೋವಿನಕೊಪ್ಪ ಗ್ರಾಮದ ಅಂಗನವಾಡಿ ಕೇಂದ್ರ ಸಂಖ್ಯೆ-೧೦೪ ರಲ್ಲಿ ಕಾರ್ಯಕ್ರಮ ಜರುಗಿತು.
ಕಾರ್ಯಕ್ರಮವನ್ನು ಗ್ರಾ,ಪಂ ಸದಸ್ಯರಾದ ಜಗದೀಶರೆಡ್ಡಿ ದೊಡ್ಡಲಿಂಗಪ್ಪನವರ ಅವರು ಸಸಿಗೆ ನೀರುಣಿಸುವ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು.
ಕಾರ್ಯಕ್ರಮದಲ್ಲಿ ಸ್ವ-ಸಹಾಯ ಸಂಘದ ಮಹಿಳೆಯರಿಗೆ ರಂಗೋಲಿ ಸ್ಪರ್ದೆ ಏರ್ಪಡಿಸಿ ವಿಜೇತರಿಗೆ ಬಹುಮಾನ ನೀಡಲಾಯಿತು. ಅಲ್ಲದೇ ಶಾಲಾ ಪೂರ್ವ ಶಿಕ್ಷಣ ಚಟುವಟಿಕೆಯಲ್ಲಿ ಕ್ರೀಯಾತ್ಮಕವಾಗಿರುವ ಮಕ್ಕಳಿಗೆ ಬಹುಮಾನ ಪ್ರೋತ್ಸಾಹಿಸಲಾಯಿತು.
ಶಿಶು ಅಭಿವೃದ್ದಿ ಯೋಜನಾಧಿಕಾರಿಗಳಾದ ರೂಪಾ ಗಂಧದ ಮಾತನಾಡಿ ಸರ್ಕಾರದಿಂದ ಅಂಗನವಾಡಿ ಕೇಂದ್ರಗಳ ಮೂಲಕ ವಿವಿಧ ಪೌಷ್ಠಿಕಾಂಶ ಆಹಾರಗಳನ್ನು ನೀಡಲಾಗುತ್ತಿದ್ದು ಅವುಗಳ ಸದ್ಭಳಕೆಯಿಂದ ಅಲ್ಲದೇ ಮನೆಯ ಸುತ್ತ ಮುತ್ತಲಿನ ಆವರಣದಲ್ಲಿ ಪೌಷ್ಠಿಕ ಕೈ ತೋಟಗಳ ನಿರ್ಮಾಣದಿಂದ ಅಪೌಷ್ಠಿಕತೆ ಹೋಗಲಾಡಿಸಬಹುದಾಗಿದೆ ಎಂದರು.
ಕಾರ್ಯಕ್ರಮದಲ್ಲಿ ಗ್ರಾಂ,ಪಂ ಸದಸ್ಯರಾದ ಯಮನಪ್ಪ ತಳವಾರ,ಶಿಕ್ಷಕರಾದ ಪಿ,ಪಿ,ದೇವಾಂಗಮಠ, ಪೋಷಣ್ ಅಭಿಯಾನ ಕಾರ್ಯಕ್ರಮ ಸಂಯೋಜಕರಾ ಮಂಜು ಗುಗ್ಗರಿ,ಆರೋಗ್ಯ ಇಲಾಖೆಯ ನೇತ್ರಾವತಿ ಜಗಲಿ(ಸಿ,ಎಚ್,ಓ),ಮಂಜುಳಾ ಕುರಬನಾಳ ಅಂಗನವಾಡಿ ಕಾರ್ಯಕರ್ತೆಯರಾದ ಶಿವಲೀಲಾ ಹಿರೇಮಠ, ಬೇಬಿ ದೊಡ್ಡಮನಿ, ಸಹಾಯಕಿಯರು, ಗರ್ಭಿಣಿ,ಹಿರಿಯ ಮಾತೆಯರು, ಮಕ್ಕಳ ಹಾಜರಿದ್ದರು.


Leave a Reply