ಬೆಳಗಾವಿ: ಕೋಳಿಗಳನ್ನು ಸಾಕಿ, ಬೆಳಸಿ, ಅವರಿಗೆ ಮಾರಾಟ ಮಾಡುವವರು ನಾವು, ಆದರೆ ನಮ್ಮ ಬದುಕು ಇಂದು ಬೀದಿಗೆ ಬೀಳುವಂತಾಗಿದೆ ಎಂದು ಕೋಳಿ ಸಾಕಾಣಿಕೆ ಅಸೋಸಿಯೇಷನನ ಜಿಲ್ಲಾಧ್ಯಕ್ಷ ನಾಗಪ್ಪ ಕೊರವಿ ತಮ್ಮ ಅಳಲು ಹೇಳಿಕೊಂಡರು.
ನಾವು ಮತ್ತು ನಮ್ಮ ಸಂಘದವರು ಕೋಳಿ ಸಾಕಾಣಿಕೆ ಕೈಗಾರಿಕೆಯನ್ನು ಬೆಳಗಾವಿ ಜಿಲ್ಲೆಯಾದ್ಯಂತ ಸುಮಾರು ವರ್ಷಗಳಿಂದ ಮಾಡುತ್ತಾ ಬಂದಿದ್ದೇವೆ..
ಕ್ವಾಲಿಟಿ ಅನಿಮಲ್ಸ್ ಪೀಡ್ಸ್ ಪ್ರೈ ಲಿ, ಅವರು ನಮಗೆ ಹಿಂದಿನಿಂದಲೂ ಕೋಳಿ ಮರಿಗಳನ್ನು ಪೂರೈಕೆ ಮಾಡುತ್ತಿದ್ದು, ಕಳೆದ ನಾಲ್ಕು ತಿಂಗಳ ಹಿಂದೆ ದೀಡಿರನೆ ಬೆಲೆ ಏರಿಕೆ ಮಾಡಿದ್ದು,ಅವರು ನೀಡುವ ಬೆಲೆಯು ನಮಗೆ ಸರಿ ಹೊಂದುತ್ತಿಲ್ಲ..
ಲಾಭಕ್ಕಿಂತ ಖರ್ಚುಗಳೆ ಹೆಚ್ಚಾಗುತ್ತಿವೆ, ನಮ್ಮ ಎಲ್ಲಾ ಸದಸ್ಯರಿಗೂ ಇದರಿಂದ ಆರ್ಥಿಕವಾಗಿ ತೊಂದರೆಯಾಗಿದೆ. ಇದರ ಕುರಿತಾಗಿ ಕ್ವಾಲಿಟಿ ಅನಿಮಲ್ಸ್ ಪೀಡ್ಸ್ ಫ್ರೈ ಲಿ ಹತ್ತಿರ ಸುಮಾರು ಸಾರಿ ನಾವು ಕೇಳಿಕೊಂಡರೂ ಅವರಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ ಎಂದರು..
ಲಕ್ಷಗಟ್ಟಲೆ ಹಣ ಹಾಕಿ ನಾವು ಕೋಳಿ ಪಾರ್ಮ ಮಾಡಿ, ಇಂದು ಸಂಕಟ ಪಡುವ ಪರಿಸ್ಥಿತಿ ಬಂದಿದೆ.. ಆದರಿಂದ ಕ್ವಾಲಿಟಿ ಅನಿಮಲ್ಸ್ ಫ್ರೈ ಲಿ ಮೇಲೆ ಸರಿಯಾದ ಕ್ರಮ ಜರುಗಿಸಿ, ನಮಗೆ ಯೋಗ್ಯ ಬೆಲೆಯಲ್ಲಿ ಕೋಳಿ ಮರಿಗಳು ಸಿಗುವಂತೆ ಮಾಡಬೇಕೆಂದು ಇವತ್ತು ಮಾನ್ಯ ಜಿಲ್ಲಾಧಿಕಾರಿಗಳಿಗೆ ಮನವಿ ಮಾಡಿಕೊಂಡೆವು ಎಂದು ಹೇಳಿದರು.
ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷ ನಾಗೇಶ್ ಕೊರವಿ, ಉಪಾಧ್ಯಕ್ಷ ನಾರಾಯಣ್ ನಾಲವದೆ, ಕಾರ್ಯದರ್ಶಿ ಬಾಬು ಕುಲಂ ಮುಂತಾದವರು ಉಪಸ್ಥಿತರಿದ್ದರು.