ಕೊಪ್ಪಳ ಮೇ ೨೪ : ಗಿಣಿಗೇರಾ ವಿದ್ಯುತ್ ವಿತರಣಾ ಉಪ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ ಕಾರ್ಯ ನಡೆಯುತ್ತಿರುವ ಪ್ರಯುಕ್ತ, ಗಿಣಿಗೇರಾ ಉಪ ಕೇಂದ್ರದಿಂದ ವಿದ್ಯುತ್ ಸರಬರಾಜು ಆಗುವ ಗ್ರಾಮಗಳ ವ್ಯಾಪ್ತಿಯ ಗ್ರಾಹಕರಿಗೆ ವಿದ್ಯುತ್ ಸರಬರಾಜಿನಲ್ಲಿ ಮೇ ೨೬ರಂದು ಬೆಳಿಗ್ಗೆ ೯ರಿಂದ ಸಾಯಂಕಾಲ ೫ ಗಂಟೆವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.
ಅಂದು ಗಿಣಿಗೇರಾ, ಗಿಣಿಗೇರಾ ಬೈಪಾಸ್, ಹಳೆ ಕನಕಾಪುರ, ಹೊಸ ಕನಕಾಪುರ, ಕನಕಾಪುರ ತಾಂಡಾ, ಹಿರೇ ಬಗನಾಳ, ಚಿಕ್ಕ ಬಗನಾಳ, ಕರ್ಕಿಹಳ್ಳಿ, ಲಾಚನಕೇರಿ, ಕಾಸನಕಂಡಿ, ಕುಣಿಕೇರಿ, ಕುಣಿಕೇರಿ ತಾಂಡಾ, ಕುಟುಗನಹಳ್ಳಿ, ಅಲ್ಲಾನಗರ, ಗಬ್ಬೂರು, ಹಾಲಹಳ್ಳಿ, ಭೀಮನೂರು, ಕಲ್ ತಾವರಗೇರಾ, ಎಫ್೩ ಬಗನಾಳ ಎನ್.ಜೆ.ವೈ ಫೀಡರ್, ಎಫ್೧೩ ಹಾಲಹಳ್ಳಿ ಎನ್.ಜೆ.ವೈ ಫೀಡರ್, ಎಫ್೭ ಎಸ್.ಆರ್.ಸಿ ಇಂಡಸ್ಟ್ರಿಯಲ್ ಫೀಡರ್, ಎಫ್೧೦ ಗಾಳೆಮ್ಮ ಗುಡಿ, ಎಫ್೧೨ ಗಿಣಿಗೇರಾ, ಎಫ್೧೧ ಕಲ್ ತಾವರಗೇರಾ, ಎಫ್೯ ಎನ್.ಜೆ.ವೈ., ಎಫ್೩೩ ಕೋಕಾ ಕೋಲಾ ಇಂಡಸ್ಟ್ರೀಸ್‌ಗೆ ಸಂಬಂಧಪಟ್ಟ ಎಲ್ಲಾ ಫೀಡರ್, ಎಫ್೧ ಕುಣಕೇರಿ ಐಪಿ, ಎಫ್೨ ಕರ್ಕಿಹಳ್ಳಿ ಐಪಿ, ಎಫ್೫ ಅಲ್ಲಾನಗರ ಐಪಿ, ಎಫ್೪ ಪೌಲಿಟ್ರಿ ಫಾರಂ, ಎಫ್೬ ಐಪಿ ಕಾಸನಕಂಡಿ ಮತ್ತು ಪಿಬಿಎಸ್ ಸೋಲಾರ್ ಈ ಎಲ್ಲಾ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸಬೇಕೆಂದು ಜೆಸ್ಕಾಂ ಮುನಿರಾಬಾದ್ ಕಾರ್ಯ ಮತ್ತು ಪಾಲನಾ ಉಪ-ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Gadi Kannadiga > State > ಮೇ ೨೬ರಂದು ವಿವಿಧ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯ
ಮೇ ೨೬ರಂದು ವಿವಿಧ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯ
Suresh24/05/2023
posted on
More important news
ಬೀಟ್ ಮೀಟಿಂಗ್
29/05/2023
ಸಚಿವ ಎಚ್.ಕೆ.ಪಾಟೀಲ ಅವರ ಜಿಲ್ಲಾ ಪ್ರವಾಸ
29/05/2023
ಶ್ರೀ ಯಾಜ್ಞವಲ್ಕö್ಯ ಗುರುಗಳ ಜಯಂತಿ
29/05/2023
ಅಧಿಕಾರ ಸ್ವೀಕಾರ
29/05/2023