ಗದಗ ಜನೆವರಿ ೨೩ : ಲಕ್ಷೆ÷್ಮÃಶ್ವರ ಉಪವಿಭಾಗದ ಬೆಳ್ಳಟ್ಟಿ ಶಾಖೆಯ ವ್ಯಾಪ್ತಿಯಲ್ಲಿ ೧೧ಕೆ.ವ್ಹಿ. ವಿದ್ಯುತ್ ಮಾರ್ಗಗಳ ಲಿಂಕ್ ಲೈನ್ ಕಾಮಗಾರಿಯನ್ನು ಎಸ್.ಡಿ.ಪಿ ಯೋಜನೆಯಡಿಯಲ್ಲಿ ಕೈಗೊಳ್ಳಲಾಗುತ್ತಿದ್ದು, ಈ ಹಿನ್ನಲೆಯಲ್ಲಿ ೧೧೦ಕೆ.ವ್ಹಿ. ಬೆಳ್ಳಟ್ಟಿ ವಿದ್ಯುತ್ ವಿತರಣಾ ಕೇಂದ್ರದಿಂದ ಹೊರಡುವ ಎಫ್-೭ ಹೊಸೂರು ಈ.ಐ.ಪಿ ಮಾರ್ಗ ಹಾಗೂ ಎಫ್-೯ ತಾರಿಕೊಪ್ಪ ಈ.ಐ.ಪಿ ಮಾರ್ಗದ ವಿದ್ಯುತ್ ಸರಬರಾಜು ವೇಳೆಯಲ್ಲಿ ಬದಲಾವಣೆಯಾಗುತ್ತದೆ. ಜನೆವರಿ ೨೫ ರಿಂದ ಫೆ.೨ ರವರೆಗೆ ಬೆಳಿಗ್ಗೆ ೬ ಘಂಟೆಯಿಂದ ಮಧ್ಯಾಹ್ನ ೧೨ ಘಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ಉಪಕೇಂದ್ರದಿಂದ ವಿದ್ಯುತ್ ಪೂರೈಕೆಯಾಗುವ ಎಫ್-೭ ಹೊಸೂರು ಈ.ಐ.ಪಿ ಮಾರ್ಗ ಹಾಗೂ ಎಫ್-೯ ತಾರಿಕೊಪ್ಪ ಈ.ಐ.ಪಿ ಮಾರ್ಗದ ಉಪಕೇಂದ್ರಗಳಿಂದ ಪೂರೈಸ್ಪಡುವ ಹೊಸೂರು, ಅಲಗಿನವಾಡ, ಕೂಗನೂರು, ತಂಗೋಡ, ಗೋವನಕೊಪ್ಪ, ವಡವಿ, ಬೆಳಗಟ್ಟಿ, ತಾರೀಕೊಪ್ಪ, ಕೆರಳ್ಳಿ ಹಾಗೂ ಸೇವಾನಗರ ಗ್ರಾಮಗಳ ರೈತರ ಬೋರವೆಲ್‌ಗಳ ಮಾರ್ಗಗಳಲ್ಲಿವಿದ್ಯುತ್ ವ್ಯತ್ಯಯವಾಗಲಿದೆ. ಸಾರ್ವಜನಿಕರು ಕಂಪನಿಯೊಂದಿಗೆ ಸಹಕರಿಸಬೇಕೆಂದು ಹೆಸ್ಕಾಂ ಪ್ರಕಟಣೆ ತಿಳಿಸಿದೆ.
Gadi Kannadiga > State > ವಿದ್ಯುತ್ ನಿಲುಗಡೆ
More important news
ವಿದ್ಯುತ್ ವ್ಯತ್ಯಯ
23/03/2023
ಚುನಾವಣೆಯಲ್ಲಿ ಮಕ್ಕಳ ಬಳಕೆ ಸಲ್ಲದು
23/03/2023
ಮಾರ್ಚ ೨೪ ರಂದು ನಗರಸಭೆಯಲ್ಲಿ ಸಾಮಾನ್ಯ ಸಭೆ
23/03/2023