ಗದಗ ಫೆಬ್ರುವರಿ ೪: ೧೧೦ಕೆ.ವ್ಹಿ. ಬೆಳ್ಳಟ್ಟಿ ಉಪಕೇಂದ್ರದಲ್ಲಿ ೧೧೦ಕೆ.ವ್ಹಿ ಮುಖ್ಯ ಬಸ್–ಐಸೋಲೇಟರನ್ನು ಸಂಪರ್ಕಿಸುವ ಕಾಮಗಾರಿ ಹಾಗೂ ಲಕ್ಷ್ಮೇಶ್ವರ-ಬೆಳ್ಳಟ್ಟಿ ಲೈನ್‌ನಲ್ಲಿ ಟವರ್ ಸಂಖ್ಯೆ ೧ ರಿಂದ ೨ ರವರೆಗೆ ಕಂಡಕ್ಟರನ ಸ್ಟ್ರಿಂಗಿಂಗ್ ಕಾಮಗಾರಿ ಕೈಗೊಳ್ಳಬೇಕಾಗಿರುವುದರಿಂದ ಫೆಬ್ರುವರಿ ೭ ರಂದು ಬೆ ೯ ರಿಂದ ಸಾಯಂಕಾಲ ೫ ಘಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯ ಉಂಟಾಗಲಿದೆ. ೧೧೦ಕೆ.ವ್ಹಿ. ಬೆಳ್ಳಟ್ಟಿ ಉಪಕೇಂದ್ರದಿಂದ ವಿದ್ಯುತ್ ಪೂರೈಕೆಯಾಗುವ ಎಲ್ಲಾ ನಗರ ಮತ್ತು ಗ್ರಾಮೀಣ ಪ್ರದೇಶಗಳ ೧೧ ಕೆವ್ಹಿ ವಿತರಣಾ ಮಾರ್ಗಗಳಲ್ಲಿ, ಸೋಲಾರ ಐ.ಪಿ.ಪಿ, ವಿಂಡ್‌ವರ್ಡ ಬನ್ನಿಕೊಪ್ಪ, ಬಹು ಗ್ರಾಮ ಕುಡಿಯುವ ನೀರಿನ ಸ್ಥಾವರಗಳು ಹಾಗೂ ೩೩ಕೆ.ವ್ಹಿ. ಸೂರಣಗಿ/ಹೊಳೆಇಟಗಿ ಉಪಕೇಂದ್ರಗಳ ಗ್ರಾಹಕರಿಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಾಗಲಿದೆ. ಸಾರ್ವಜನಿಕರು ಕಂಪನಿಯೊಂದಿಗೆ ಸಹಕರಿಸಬೇಕೆಂದು ಹೆಸ್ಕಾಂ ಪ್ರಕಟಣೆ ತಿಳಿಸಿದೆ.
Gadi Kannadiga > State > ವಿದ್ಯುತ್ ನಿಲುಗಡೆ