This is the title of the web page
This is the title of the web page

Please assign a menu to the primary menu location under menu

State

ಫೆ. ೧೩ ರಂದು ವಿವಿಧೆಡೆ ವಿದ್ಯುತ್ ವ್ಯತ್ಯಯ


ಕೊಪ್ಪಳ ಫೆಬ್ರವರಿ ೧೦ : ೧೧೦ ಕೆ.ವಿ ಕೊಪ್ಪಳ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತುರ್ತು ಮೆಂಟನನ್ಸ ದುರಸ್ಥಿ ಕೆಲಸ ನಿರ್ವಹಣೆ ಪ್ರಯುಕ್ತ ಫೆಬ್ರವರಿ ೧೩ ರಂದು ಬೆಳಿಗ್ಗೆ ೧೦ ರಿಂದ ಮಧ್ಯಾಹ್ನ ೦೩ ಗಂಟೆಯವರೆಗೆ ಕೊಪ್ಪಳ ನಗರ, ಭಾಗ್ಯನಗರ ಹಾಗೂ ವಿವಿಧ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದೆ.
೧೧೦ ಕೆ.ವಿ. ಕೊಪ್ಪಳ ವಿದ್ಯುತ್‌ಕೇಂದ್ರದಿಂದ ಸರಬರಾಜು ಆಗುವ ೩೩ ಕೆ.ವಿ. ಕಿನ್ನಾಳ ವಿದ್ಯುತ್ ವಿತರಣಾ ಕೇಂದ್ರಕ್ಕೆ ಸಂಬಂಧಿಸಿದ ೧೧ ಕೆ.ವಿ. ಮಾರ್ಗಕ್ಕೆ ಒಳಪಡುವ ಎಲ್ಲಾ ಗ್ರಾಮಗಳು, ಕೊಪ್ಪಳ ನಗರ (ಎಫ್-೨, ಕೆ.ಡಬ್ಲೂö್ಯ.ಎಸ್ ವಾಟರ್ ಸಪ್ಲೆöÊ, ಎಫ್-೯ ಬನ್ನಿಕಟ್ಟಿ ಫೀಡರ್, ಎಫ್-೧೦ ಗವಿಮಠ, ಎಫ್-೧೨ ತಾಲ್ಲೂಕ ಪಂಚಾಯತ್ ಫೀಡರ್) ಮತ್ತು ಭಾಗ್ಯನಗರ (ಎಫ್-೮ ಭಾಗ್ಯನಗರ ಫೀಡರ್, ಎಫ್-೧೧ ಡಿ.ಸಿ. ಆಫೀಸ್ ಫೀಡರ್, ಎಫ್-೪ ಎಲ್.ಐ.ಎಸ್, ಎಫ್-೫ ಬಗನಾಳ, ಎಫ್-೬ ಬಸಾಪೂರ, ಎಫ-೧ ಕಾಮನೂರು) ಮತ್ತು ಈ ಕೇಂದ್ರಗಳಿಂದ ವಿದ್ಯುತ್ ಸಂಪರ್ಕವಿರುವ ಎಲ್ಲಾ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಹಾಗೂ ಐ.ಪಿ ಸೆಟ್‌ನ ಗ್ರಾಹಕರು ಸಹಕರಿಸಬೇಕು.
ಮೆಂಟನನ್ಸ ದುರಸ್ಥಿ ಕೆಲಸವು ಬೇಗನೆ ಮುಕ್ತಾಯಗೊಂಡಲ್ಲಿ, ಯಾವುದೇ ಸಮಯದಲ್ಲಿ ವಿದ್ಯುತ್ ಸರಬರಾಜು ಮಾಡಲಾಗುವುದು. ಆದ್ದರಿಂದ ಸಾರ್ವಜನಿಕರು ಯಾವುದೇ ತರಹದ ವಿದ್ಯುತ್ ದುರಸ್ಥಿ ಕೆಲಸ-ಕಾರ್ಯಗಳನ್ನು ಮಾಡಬಾರದೆಂದು ಈ ಮೂಲಕ ಸೂಚಿಸಲಾಗಿದೆ. ಒಂದು ವೇಳೆ ವಿದ್ಯುತ್ ಅಫಘಾತ ಸಂಬವಿಸಿದ್ದಲ್ಲಿ ಕಂಪನಿಯು ಜವಬ್ದಾರರಾಗಿರುವುದಿಲ್ಲ ಎಂದು ಕೊಪ್ಪಳ ಜೆಸ್ಕಾಂ ಕಾರ್ಯ ಮತ್ತು ಪಾಲನೆ ಉಪ-ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Gadi Kannadiga

Leave a Reply