This is the title of the web page
This is the title of the web page

Please assign a menu to the primary menu location under menu

State

ಏಪ್ರಿಲ್ ೨೧ ರಂದು ವಿವಿಧ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯ


ಕೊಪ್ಪಳ ಏಪ್ರಿಲ್ ೨೦ : ಮುನಿರಾಬಾದ್ ೧೧೦/೩೩/೧೧ ಕೆ.ವಿ ಕೆರೆಹಳ್ಳಿ ಮತ್ತು ೩೩/೧೧ ಕೆ.ವಿ ಕೂಕನಪಳ್ಳಿ ವಿದ್ಯುತ್ ವಿತರಣಾ ಕೇಂದ್ರಗಳಲ್ಲಿ ನಿರ್ವಹಣಾ ಕಾರ್ಯ ನಡೆಯುತ್ತಿರುವ ಪ್ರಯುಕ್ತ ಈ ವಿದ್ಯುತ್ ವಿತರಣಾ ಕೇಂದ್ರಗಳಿಂದ ವಿದ್ಯುತ್ ಸರಬರಾಜು ಆಗುವ ಗ್ರಾಮಗಳ ವ್ಯಾಪ್ತಿಯ ಗ್ರಾಹಕರಿಗೆ ಏ. ೨೧ರ ಬೆಳಿಗ್ಗೆ ೯ ರಿಂದ ಮಧ್ಯಾಹ್ನ ೧ ಗಂಟೆವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯ ಉಂಟಾಗಲಿದೆ.
ಅಂದು ಕೆರೆಹಳ್ಳಿ, ಬೂದಗುಂಪಾ, ಬಿಳೇಬಾವಿ, ಆರ್.ಎಸ್ ನಗರ, ನಾಗೇಶನಹಳ್ಳಿ, ಚಂದ್ರಗಿರಿ, ಹಳೇಕುಮುಟಾ, ಇಂದಿರಾನಗರ, ಜಬ್ಬಲಗುಡ್ಡ, ದನಕನದೊಡ್ಡಿ, ಅಚಲಾಪುರ, ಅಮರಾಪುರ, ವನಬಳ್ಳಾರಿ, ಇಂದರಗಿ, ಈ ಎಲ್ಲಾ ಗ್ರಾಮಗಳಲ್ಲಿ ವಿದ್ಯುತ್ ವ್ಯತ್ಯಯವಾಗಲಿದ್ದು, ಸಾರ್ವಜನಿಕರು ಸಹಕರಿಸಬೇಕೆಂದು ಜೆಸ್ಕಾಂ ಮುನಿರಾಬಾದ್ ಕಾರ್ಯ ಮತ್ತು ಪಾಲನಾ ಉಪ-ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Leave a Reply