ಬೆಳಗಾವಿ,ಏ.೨೮ ಕ.ವಿ.ಪ್ರ.ನಿ.ನಿ. ವತಿಯಿಂದ ೧೧೦ ಕೆ.ವ್ಹಿ ಉಚಗಾಂವ ಉಪ ಕೇಂದ್ರ ಮತ್ತು ೧೧೦ ಕೆವ್ಹಿ ಉದ್ಯಮಭಾಗ ಉಪಕೇಂದ್ರದಲ್ಲಿ ತುರ್ತು ನಿರ್ವಹಣಾ ಕಾರ್ಯಗಳನ್ನು ಕೈಗೊಳ್ಳುತ್ತಿರುವುದರಿಂದ ಈ ಕೇಂದ್ರ ವ್ಯಾಪ್ತಿಯಲ್ಲಿ ಎಪ್ರಿಲ್ ೨೯ರಂದು ಬೆಳಿಗ್ಗೆ ೬ ಗಂಟೆಯಿಂದ ಬೆಳಿಗ್ಗೆ ೯ ಗಂಟೆಯವರೆಗೆ ವಿದ್ಯುತ್ ನಿಲುಗಡೆಯಾಗಲಿದೆ.
೧೧೦ ಕೆ.ವ್ಹಿ. ಉಚಗಾಂವ ಉಪಕೇಂದ್ರದಿಂದ ವಿತರಣೆಯಾಗುವ ಬಿಜಗರ್ಣಿ, ಬೋಕಮೂರ, ಕವಳೇವಾಡಿ, ಬೆಳವಟ್ಟಿ, ಬಾಕನೂರ, ಬೆಳಗುಂದಿ, ಸೋನೋಲಿ, ಎಳೆಬೈಲ, ರಾಕಸಕೊಪ್ಪ, ಕುದ್ರೇಮನಿ, ಕಲ್ಲೇಹೋಳ, ಬೆಳಗುಂದಿ ಇಂಡಸ್ಟ್ರೀಯಲ್ ಏರಿಯಾ, ಉಚಗಾಂವ, ಬಸುರ್ತೆ, ಬೆಕ್ಕಿನಕೇರಿ, ಸುಳಗಾ, ತುರಮುರಿ, ಕೋಣೇವಾಡಿ, ಬಾಚಿ, ಬೆನಕನಹಳ್ಳಿ, ಸಾವಗಾಂವ, ಮಂಡೋಳಿ, ಹಂಗರಗಾ, ಹಿಂಡಲಗಾ, ಅಂಗಡಿ ಕಾಲೇಜ್, ಗಣೇಶಪೂರ, ಮಹಾಲಕ್ಷ್ಮೀನಗರ, ಆರ್ಮಿ ಕಾಲನಿ, ಕೆ.ಎಚ್.ಬಿ. ಲೇಔಟ್, ಬೆನಕನಹಳ್ಳಿ ಗ್ರಾಮಗಳಿಗೆ ಹಾಗೂ ಸದರಿ ಗ್ರಾಮಗಳ ನೀರಾವರಿ ಪಂಪ್ಸೆಟ್ಗಳ ಏರಿಯಾಗಳಿಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
೧೧೦ ಕೆ.ವ್ಹಿ. ಉದ್ಯಮಬಾಗ ಉಪಕೇಂದ್ರದಿಂದ ವಿತರಣೆಯಾಗುವ ಪೀರಣವಾಡಿ, ಖಾದರವಾಡಿ, ಮಚ್ಛೆ, ಹುಂಚ್ಯಾನಟ್ಟಿ ಗ್ರಾಮಗಳಿಗೆ ಹಾಗೂ ಮಚ್ಛೆ ಕೈಗಾರಿಕಾ ಪ್ರದೇಶಕ್ಕೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ. ಆದ್ದರಿಂದ ಸಾರ್ವಜನಿಕರು ಸಹಕರಿಸಬೇಕು ಎಂದು ಬೆಳಗಾವಿ ಕಾರ್ಯ ಮತ್ತು ಪಾಲನೆ ಗ್ರಾಮೀಣ ವಿಭಾಗದ ಕಾರ್ಯ ನಿರ್ವಾಹಕ ಇಂಜಿನೀಯರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Gadi Kannadiga > Local News > ಉದ್ಯಮಭಾಗ ೧೧೦ ಕೆವ್ಹಿ ಉಪಕೇಂದ್ರ: ಏ.೩೦ ರಂದು ವಿದ್ಯುತ್ ಸ್ಥಗಿತ