This is the title of the web page
This is the title of the web page

Please assign a menu to the primary menu location under menu

Local News

ಶಿರಗುಪ್ಪಿಯಲ್ಲಿ ಮಾ.25ರಂದು ವಿದ್ಯುತ್ ವ್ಯತ್ಯಯ


ಬೆಳಗಾವಿ : ಶಿರಗುಪ್ಪಿ110/11 ಕೆ.ವ್ಹಿ ವಿದ್ಯುತ್ ಕೇಂದ್ರದಲ್ಲಿ ಉಪಕರಣಗಳ ಮೇಲೆ ತ್ರೈಮಾಸಿಕ ಕೆಲಸ ನಿರ್ವಹಣೆ ಮಾಡುವ ಹಿನ್ನೆಲೆ ಮಾರ್ಚ್ 25 ರಂದು ಬೆಳಿಗ್ಗೆ 9 ರಿಂದ ಸಂಜೆ 4 ಗಂಟೆಯವರೆಗೆ ದುರಸ್ತಿ ಕಾರ್ಯ ನಡೆಯಲಿದೆ. ಹೀಗಾಗಿ ಈ ವೇಳೆಯಲ್ಲಿ ವಿದ್ಯುತ್ ವ್ಯತ್ಯಯ ಆಗಲಿದೆ.

ಶಿರಗುಪ್ಪಿ ಐಪಿ, ಜುಗೂಳ ಐಪಿ, ಮಂಗಾವತಿ ಐಪಿ, ಶಿರಗುಪ್ಪಿ ಐಪಿ, ನೀರಾವರಿ ಫೀಡರ್ಗಳ ಮೇಲೆ ಕಾಗವಾಡ ಶಾಖೆಯ ಶಿರಗುಪ್ಪಿ, ಮಂಗಾವತಿ, ಜುಗೂಳ ಗ್ರಾಮಗಳಲ್ಲಿ ಮಾರ್ಚ 25 ರಂದು ಮುಂಜಾನೆ 9 ರಿಂದ ಸಂಜೆ 4 ಗಂಟೆಯವರೆಗೆ ವಿದ್ಯುತ್ ವ್ಯತ್ಯಯ ಆಗಲಿದ್ದು ಸಾರ್ವಜನಿಕರು, ರೈತರು, ವಿದ್ಯುತ್ ಗ್ರಾಹಕರು ಸಹಕರಿಸಬೇಕು ಎಂದು ಹು.ವಿ.ಸ.ಕಂ.ನಿ ಉಗಾರ ಕಾರ್ಯ ಮತ್ತು ಪಾಲನೆ ಉಪ ವಿಭಾಗದ ಸಹಾಯಕ ಕಾರ್ಯನಿರ್ವಾಹಕ ಅಭಿಯಂತರ ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.


Gadi Kannadiga

Leave a Reply