ಬೆಳಗಾವಿ, ಡಿ.೦೯ : ಬೆಳಗಾವಿ ಜಿಲ್ಲೆಯ ಹಾಗೂ ತಾಲೂಕಿನಲ್ಲಿ ೧೧೦ ಕೆವಿ ೨ ನೇ ವಿದ್ಯುತ್ ಮಾರ್ಗವನ್ನು ೨೨೦ ಕೆವಿ ಇಂಡಾಲ್ ಬೆಳಗಾವಿದಿಂದ ೧೧೦/೧೧ ಕೆವಿ ವಿದ್ಯುತ್ ಕೇಂದ್ರ ಮಚ್ಛೆ ವರೆಗೆ ಮೇಲುಮಾರ್ಗ ೨೮.೨೯೫ ಕಿಮಿ ಹಾಗೂ ಭೂಗತ ಮಾರ್ಗ ೧.೨೪೫ ಕಿಮೀ ಒಟ್ಟು ೨೯.೫೪ ಕಿಮೀ ಉದ್ದದ ವಿದ್ಯುತ್ ಪ್ರಸರಣ ಮಾರ್ಗವನ್ನು ನಿರ್ಮಿಸಲಾಗಿದೆ.
ಸದರಿ ೧೧೦ ಕೆವಿ ವಿದ್ಯುತ್ ಪ್ರಸರಣ ಮಾರ್ಗವು ಬೆಳಗಾವಿ ಜಿಲ್ಲೆಯ ಹಾಗೂ ತಾಲೂಕಿ ಯಮನಾಪೂರ, ಗೌಡವಾಡ, ಕಂಗ್ರಾಳಿ ಬಿ ಕೆ ಕಡೋಲಿ,ಅಳತಗೆ, ಅಂಬೇವಾಡಿ, ಮಣ್ಣೂರು, ಗೋಜಗಾ, ಉಚಗಾಂವ, ಸುಳಗಾ, ಬೆನಕನಹಳ್ಳಿ, ಮಂಡೋಳಿ ಚೇತನಮಾಳ, ಪೀರಣವಾಡಿ, ಕುಟ್ಟಲವಾಡಿ, ಮಚ್ಛೆ ಹಾಗೂ ಅಕ್ಕಪಕ್ಕದ ಹದ್ದಿನಲ್ಲಿ ಬರುವ ಹಳ್ಳಿಗಳು ಮತ್ತು ಸರಹದ್ದಿನ ವ್ಯಾಪ್ತಿಯಲ್ಲಿ ಬರುವ ಪ್ರದೇಶಗಳಲ್ಲಿ ಹಾಯ್ದು ಹೋಗುತ್ತದೆ.
ಆದಕಾರಣ ವಿದ್ಯುತ್ ಪ್ರಸರಣ ಮಾರ್ಗವನ್ನು ಡಿಸೆಂಬರ್ ೧೧ ರಂದು ಇಲ್ಲವೆ ತದನಂತರ ಯಾವುದೇ ಕ್ಷಣದಲ್ಲಿ ವಿದ್ಯುತ್ತನ್ನು ಹರಿಬಿಡಲಾಗುವದು. ವಿದ್ಯುತ್ ಗೋಪುರಗಳನ್ನು ಹತ್ತುವುದಾಗಲಿ ಅಥವಾ ತಂತಿಗಳನ್ನು ಮುಟ್ಟುವುದಾಗಲಿ ಹಸಿರು ಟೊಂಗೆಗಳನ್ನು ಎಸೆಯುವುದಾಗಲಿ ಮತ್ತು ಲೈನ್ ಕೆಳಗಡೆ ದನಕರುಗಳನ್ನು ಕಟ್ಟುವುದಾಗಲಿ, ಗಿಡಮರಗಳನ್ನು ನೆಡುವುದಾಗಲಿ, ಮನೆ/ಗುಡಿಸಲುಗಳನ್ನು ನಿರ್ಮಿಸುವುದಾಗಲಿ ಪ್ರಾಣಾಪಾಯಕವಾಗುವ ಸಂಭವವಿರುತ್ತದೆ.
ಆದ್ದರಿಂದ ಸಾರ್ವಜನಿಕರು ಒಂದು ವೇಳೆ ಇಂತಹ ಕೃತ್ಯಗಳನ್ನು ಯಾರಾದರು ಎಸಗಿದಲ್ಲಿ ಮುಂದೆ ಒದಗಬಹುದಾದ ಅಪಾಯಗಳಿಗೆ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತವು ಜವಾಬ್ದಾರಿಯಾಗಿರುವುದಿಲ್ಲ ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ, ಬೆಳಗಾವಿಯ ಬೃಹತ್ ಕಾಮಗಾರಿ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರು (ವಿ), ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Gadi Kannadiga > Local News > ವಿದ್ಯುತ್ ಪ್ರಸರಣ ಮಾರ್ಗ ನಿರ್ಮಾಣ: ಸಾರ್ವಜನಿಕರ ಗಮನಕ್ಕೆ