ಬೆಳಗಾವಿ, ಆ.೧೮ : ಬೆಳಗಾವಿಯ ೧೧೦ ಕೆವ್ಹಿ ಸುವರ್ಣಸೌಧ ಉಪ ಕೇಂದ್ರಲ್ಲಿ ತುರ್ತು ದುರಸ್ತಿ ನಿರ್ವಹಣಾ ಕೆಲಸ ಕೈಗೊಳ್ಳುತ್ತಿರುವುದರಿಂದ ವಿದ್ಯುತ್ ಉಪಕೇಂದ್ರದಿಂದ ಹೊರಡುವ ಪೂರಕಗಳ ಮೇಲೆ ಬರುವ ಬೆಳಗಾವಿ ನಗರ ವಿವಿಧ ಪ್ರದೇಶಗಳಲ್ಲಿ ಭಾನುವಾರ (ಆ.೨೦) ೨೦೨೩ ರಂದು ಬೆಳಿಗ್ಗೆ ೧೦ ಗಂಟೆಯಿಂದ ಸಂಜೆ ೫ ಗಂಟೆಯವರೆಗೆ ವಿದ್ಯುತ್ ವ್ಯತ್ಯಯಾಗಲಿದೆ.
ಎಫ್-೨ ಅಲಾರವಾಡಿ ವ್ಯಾಪ್ತಿಯ ಕೆ.ಎಚ್.ಬಿ ಕಾಲೋನಿ, ವೃದ್ರಾಶ್ರಮ ಪ್ರದೇಶ ಅಲ್ಲಾರವಾಡ ಮೇಲೆ ಬರುವ ಎಲ್ಲಾ ಪ್ರದೇಶಗಳು, ಎಫ್-೩ ಸುವರ್ಣಸೌಧ ಲೈನ್-೨ ಸುವರ್ಣಸೌಧ ವ್ಯಾಪ್ತಿಯಲ್ಲಿ ವಿದ್ಯುತ್ ವ್ಯತ್ಯಯಾಗಲಿದೆ.
ಅದೇ ರೀತಿಯಲ್ಲಿ ಎಫ್-೪ ಸುವರ್ಣಸೌಧ ಲೈನ್-೧ ವ್ಯಾಪ್ತಿಯ ಸುವರ್ಣಸೌಧ ಲೈನ್-೧ ಪ್ರದೇಶಗಳು, ಎಫ್-೫, ಬಸವೇಶ್ವರ ಸರ್ಕಲ್ ಶಾಹಾಪುರ್ ಗಡೆ ಮಾರ್ಗ, ಬಸವೇಶ್ವರ ಸರ್ಕಲ್, ಆಚಾರ್ಯ ಗಲ್ಲಿ, ನವಿಗಲ್ಲಿ, ನಾರ್ವೆಕರ್ ಗಲ್ಲಿ, ಬಿಚ್ಚು ಗಲ್ಲಿ, ಸರಾಫ್ ಗಲ್ಲಿಯ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯಾಗಲಿದೆ.
ಎಫ್-೬ ಹರಿಕಾಕಾ ಕಂಪೌಂಡ, ಮಾರುತಿ ನಗರ, ಹರಿಕಾಕಾ ಕಂಪೌಂಡ ಪ್ರದೇಶಗಳು, ಎಫ್-೮ ಪರ್ಯಾಯ ಸುವರ್ಣಸೌಧ, ಉದ್ಯಮಪರ್ಯಾಯ ಸುವರ್ಣಸೌಧ ಹಾಗೂ ಎಫ್-೯ ಯಡಿಯುರಪ್ಪಾ ಮಾರ್ಗ್ ವ್ಯಾಪ್ತಿಯ ಸಾಂಯಿ ಕಾಲನಿ, ಯಡಿಯುರಪ್ಪಾ ಮಾರ್ಗ, ಹಲಗಾ ರೊಡ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯಾಗಲಿದೆ ಎಂದು ಹುವಿಸಕಂನಿ ಬೆಳಗಾವಿಯ ಕಾರ್ಯ ಮತ್ತು ಪಾಲನೆ ನಗರ ವಿಭಾಗದ ಕಾರ್ಯನಿರ್ವಾಹಕ ಅಭಿಯಂತರರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ
Gadi Kannadiga > Local News > ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ
ವಿವಿಧ ಪ್ರದೇಶಗಳಲ್ಲಿ ವಿದ್ಯುತ್ ವ್ಯತ್ಯಯ
Suresh18/08/2023
posted on
More important news
ಬೆಳಗಾವಿ ನಗರಕ್ಕೆ ವಿಶ್ವ ಬ್ಯಾಂಕ್ ತಂಡ ಭೇಟಿ
25/09/2023
ನೀರು ಪೂರೈಕೆಯಲ್ಲಿ ವ್ಯತ್ಯಯ
25/09/2023
ಪೌರ ಕಾರ್ಮಿಕರ ದಿನಾಚರಣೆ
23/09/2023
ಬೆಳಗಾವಿ ನಗರಕ್ಕೆ ವಿಶ್ವ ಬ್ಯಾಂಕ್ ತಂಡದ ಭೇಟಿ
22/09/2023