ಗಡಿ ಕನ್ನಡಿಗ ಸುದ್ದಿ
ಖಾನಾಪುರ:2022ರಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಅತ್ಯಾಚಾರ ಎಸಗಿದೆ ಆರೋಪಿಗೆ ಬೆಳಗಾವಿಯ ಪೊಕ್ಸೊ ನ್ಯಾಯಾಲಯದಲ್ಲಿ 20ವರ್ಷ ಕಾರಾಗ್ರಹ ಶಿಕ್ಷೆ ಹಾಗೂ 20ಸಾವಿರ ದಂಡ ವಿಧಿಸಿದೆ.
ಅಶೋಕನಗರದ ಪ್ರಕಾಶ ಸತ್ತೆಪ್ಪ ಮಗದುಮ್ಮ ಎಂಬುವವನು 2022 ನೇ ಸಾಲಿನಲ್ಲಿ ಅಪ್ರಾಪ್ತ ಬಾಲಕಿಯ ಮೇಲೆ ಲೈಂಗಿಕ ದೌರ್ಜನ್ಯವೆಸಗಿದ ಬಗ್ಗೆ ಖಾನಾಪೂರ ಪೊಲೀಸ್ ಠಾಣೆಯಲ್ಲಿ ಪೊಕ್ಸ ಪ್ರಕರಣ ದಾಖಲಾಗಿತ್ತು. ಸದರಿ ಪ್ರಕರಣದ ತನಿಖಾಧಿಕಾರಿಯಾಗಿ ಬಿ.ಜಿ ತೇಗೂರ ಸಿಹೆಚ್ ಸಿ,ಪಿಎಸ್ಆಯ್ ಶರಣೇಶ ಸಿ ಜಾಲಿಹಾಳ,ಮತ್ತು ಆಗಿನ ಪಿಆಯ್ ಸುರೇಶ ಪಿ ಶಿಂಗಿ ಹಾಗೂ ತನಿಖಾ ಸಹಾಯಕನಾಗಿ ಮಂಜುನಾಥ ಮುಸಳಿ ಮತ್ತು ಕೋರ್ಟ ಕರ್ತವ್ಯದ ಸಿಬ್ಬಂದಿಯಾಗಿ ಪ್ರವೀಣ ಹೊಂಡದ ಇವರು ಪ್ರಕರಣದ ವರದಿ ಒಪ್ಪಿಸಿದ್ದರು.
ಸದರಿ ಪ್ರಕರಣವು ಬೆಳಗಾವಿಯ ಮಾನ್ಯ ವಿಶೇಷ ಪೊಕ್ಲೋ ನ್ಯಾಯಾಲಯದಲ್ಲಿ ವಿಚಾರಣೆಯಾಗಿ ಆಪಾದಿತನು ಅಪರಾಧ ಮಾಡಿದ ಬಗ್ಗೆ ರುಜುವಾತಾಗಿದ್ದರಿಂದ ಆಪಾದಿತನಿಗೆ ಮಾನ್ಯ ನ್ಯಾಯಾದೀಶರಾದ ಶ್ರೀಮತಿ ಸಿ.ಎಂ ಪುಷ್ಪಲತಾ ರವರು 20 ವರ್ಷ ಕಾರಾಗೃಹ ಶಿಕ್ಷೆ ಹಾಗೂ 20 ಸಾವಿರ ದಂಡವನ್ನು ವಿದಿಸಿ ತೀರ್ಪು ಪ್ರಕಟಿಸಿದ್ದಾರೆ. ಈ ಪ್ರಕರಣದಲ್ಲಿ ಸರಕಾರಿ ಅಭಿಯೋಜಕರಾಗಿ ಶ್ರೀ ಎಲ್.ವಿ ಪಾಟೀಲ್ ಇವರು ವಾದವನ್ನು ಮಂಡಿಸಿದ್ದರು.