ಬೆಳಗಾವಿ : ಸಮಾಜದ ದಾನಿಗಳ ನೆರವಿನಿಂದ ವೀರಶೈವ ಲಿಂಗಾಯತ ಬಡ ವಿದ್ಯಾರ್ಥಿನಿಯರ ವಸತಿಗೃಹ ನಿರ್ಮಾಣ
ಪೂರ್ಣಗೊಳಿಸಲಾಗುವುದು ಎಂದು ಕೆಎಲ್ ಇ ಸಂಸ್ಥೆಯ ಕಾರ್ಯಾಧ್ಯಕ್ಷ ಮಾಜಿ ಸಂಸದ ಪ್ರಭಾಕರ ಕೋರೆ ಹೇಳಿದರು .
ಅವರು ವೀರಶೈವ ಲಿಂಗಾಯತ ಬಡ ವಿದ್ಯಾರ್ಥಿನಿಯರ ವಸತಿಗೃಹದ ಅಡಿಗಲ್ಲು ಸಮಾರಂಭದಲ್ಲಿ ಮಾತನಾಡುತ್ತಿದ್ದರು . ಮಾಜಿ ಮುಖ್ಯಮಂತ್ರಿ ಬಿಎಸ್ ಯಡಿಯೂರಪ್ಪ ಅವರು ಮುಖ್ಯಮಂತ್ರಿಗಳಾಗಿದ್ದಾಗ ಈ ನಿವೇಶನವನ್ನು ಬೆಳಗಾವಿ ಜಿಲ್ಲಾ ವೀರಶೈವ ಮಹಾಸಭಾಗೆ ಅತ್ಯಂತ ಕಡಿಮೆ ಬೆಲೆಗೆ ನೀಡಿದ್ದರು ಅವರ ಸಹಾಯದಿಂದಲೇ ಇಂದು ಕಟ್ಟಡ ನಿರ್ಮಾಣವಾಗುತ್ತಿದೆ ಎಂದ ಅವರು 5 ಕೋಟಿ ರೂ ಗಳ ವೆಚ್ಚದಲ್ಲಿ ಅಂತರರಾಷ್ಟ್ರೀಯ ಗುಣಮಟ್ಟದ ವಸತಿಗೃಹ ನಿರ್ಮಾಣವಾಗಲಿದೆ ತಲಾ 5 ಲಕ್ಷ ರೂ ಗಳಲ್ಲಿ ಒಂದೊಂದು ಕೊಠಡಿ ನಿರ್ಮಾಣವಾಗಲಿದ್ದು ಪ್ರಭಾಕರ್ ಕೋರೆ ಸಹಕಾರಿ ಬ್ಯಾಂಕ್ 2 ಕೊಠಡಿಗಳಿಗೆ ಮತ್ತು ತಾವು ವೈಯಕ್ತಿಕವಾಗಿಯೂ ಸಹಾಯ ನೀಡುತ್ತಿರುವುದಾಗಿ ತಿಳಿಸಿದರು .ಸಚಿವ ಮುರುಗೇಶ ನಿರಾಣಿಯವರು 2 ಕೊಠಡಿಗಳಿಗೆ , ಶಾಸಕಿ ಲಕ್ಷ್ಮಿ ಹೆಬ್ಬಾಳಕರ ಮತ್ತು ಚನ್ನರಾಜ್ ಹಟ್ಟಿಹೊಳಿ,ಕನ್ನಡ ಸಾಹಿತ್ಯ ಪರಿಷತ್ ಜಿಲ್ಲಾಧ್ಯಕ್ಷೆ ಮಂಗಲಾ ಮೆಟಗುಡ್ಡ ಮುಂತಾದವರು ಸಹ ಸಹಾಯ ಮಾಡಲಿದ್ದಾರೆ ಎಂದು ಪ್ರಭಾಕರ ಕೋರೆ ತಿಳಿಸಿದರು .
ಅಡಿಗಲ್ಲನ್ನು ನೆರವೇರಿಸಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪನವರು ಸಮಾಜದಲ್ಲಿನ ಪ್ರಮುಖರು ಮತ್ತು ಸ್ಥಿತಿವಂತರು ಸಮಾಜದ ಇಂತಹ ಕಾರ್ಯಗಳಿಗೆ ಮುಂದೆ ಬಂದು ಸಹಾಯ ಹಸ್ತ ಚಾಚಬೇಕು ಎಂದರು ,ವಿದ್ಯಾರ್ಥಿನಿಯರ ವಸತಿ ಗೃಹ ನಿರ್ಮಾಣ ದಿಂದ ಸಮಾಜದ ಬಡ ಹೆಣ್ಣು ಮಕ್ಕಳಿಗೆ ಅನುಕೂಲವಾಗಲಿದೆ ಎಂದರು .
ಅಖಿಲ ಭಾರತ ವೀರಶೈವ ಮಹಾಸಭೆ ಜಿಲ್ಲಾ ಘಟಕದ ಅಧ್ಯಕ್ಷೆ ಶ್ರೀಮತಿ ರತ್ನಪ್ರಭಾ ಬೆಲ್ಲದ ಮಾತನಾಡಿ ಯಡಿಯೂರಪ್ಪನವರ ಸಹಾಯವನ್ನು ಕೊಂಡಾಡಿದರು ಕಟ್ಟಡ ನಿರ್ಮಾಣ ಕಾರ್ಯದಲ್ಲಿ ಸಮಾಜದ ಸಮಸ್ತ ಬಾಂಧವರು ಕೈಜೋಡಿಸಬೇಕು ಎಂದು ಮನವಿ ಮಾಡಿದರು ತಾವು ವೈಯಕ್ತಿಕವಾಗಿ 1ಕೊಠಡಿ ನಿರ್ಮಾಣದ 5ಲಕ್ಷ ರೂಪಾಯಿಗಳನ್ನು ನೀಡುವುದಾಗಿ ಹೇಳಿದರು .
ಮಾರುತಿ ಝಿರ್ಲಿ ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಸರ್ವರನ್ನು ಸ್ವಾಗತಿಸಿದರು .
ಬೆಳಗಾವಿಯ ಕಾರಂಜಿ ಮಠದ ಗುರುಸಿದ್ಧ ಸ್ವಾಮೀಜಿ ಅವರು ಕಾರ್ಯಕ್ರಮದ ಸಾನ್ನಿಧ್ಯ ವಹಿಸಿದ್ದರು , ಸಚಿವ ಮುರುಗೇಶ ನಿರಾಣಿ, ಸಂಸದೆ ಶ್ರೀಮತಿ ಮಂಗಲಾ ಅಂಗಡಿ , ರಾಣಿ ಚನ್ನಮ್ಮ ಸಹಕಾರಿ ಬ್ಯಾಂಕಿನ ಅಧ್ಯಕ್ಷೆ ಶ್ರೀಮತಿ ಆಶಾ ಕೋರೆ, ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ , ಕೆಎಲ್ ಇ ಸಂಸ್ಥೆಯ ನಿರ್ದೇಶಕ ಮಹಾಂತೇಶ ಕವಟಗಿಮಠ , ಬೆಳಗಾವಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷೆ ಶ್ರೀಮತಿ ಮಂಗಲಾ ಮೆಟಗುಡ್ಡ , ರುದ್ರಣ್ಣ ಹೊಸಕೇರಿ ,ವಿಧಾನ ಪರಿಷತ್ ಸದಸ್ಯ ಚನ್ನರಾಜ ಹಟ್ಟಿಹೊಳಿ ,ಜಿಲ್ಲಾಧಿಕಾರಿ ಮಹಾಂತೇಶ ಹಿರೇಮಠ ,ಶ್ರೀಮತಿ ಶೈಲಜಾ ಭಿಂಗೆ , ಶ್ರೀಮತಿ ಜ್ಯೋತಿ ಬದಾಮಿ ,ಶ್ರೀಮತಿ ಜ್ಯೋತಿ ಭಾವಿಕಟ್ಟಿ ,ಶ್ರೀಮತಿ ಹೇಮಾ ಸೋನೊಳ್ಳಿ ಮತ್ತಿತರರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು . ಡಾ ಗುರುದೇವಿ ಹುಲೆಪ್ಪನವರಮಠ ಕಾರ್ಯಕ್ರಮ ನಿರ್ವಹಿಸಿದರು .