ಬೆಳಗಾವಿ ; ಕರ್ನಾಟಕ ರಾಜ್ಯ ಬಣಜಿಗ ಸಮಾಜದ ಕ್ಷೇಮಾಭಿವೃದ್ಧಿ ಸಂಘದ ಬೆಳಗಾವಿ ಜಿಲ್ಲಾ ಘಟಕಕ್ಕೆ ಚಿಕ್ಕೋಡಿಯ ಶ್ರೀ ಪ್ರಭು ನಾಗಪ್ಪ ಬೆಲ್ಲದ ಅವರನ್ನು ಮಲ್ಲಿಕಾರ್ಜುನ ಜಗಜಂಪಿಯವರ ಅಧ್ಯಕ್ಷತೆಯಲ್ಲಿ ನಡೆದ ಜಿಲ್ಲೆಯ ಎಲ್ಲ ತಾಲೂಕಾಧ್ಯಕ್ಷರುಗಳು ಭಾಗವಹಿಸಿದ್ದ ಸಭೆಯಲ್ಲಿ ಜಿಲ್ಲಾಧ್ಯಕ್ಷರನ್ನಾಗಿ ಸರ್ವಾನುಮತದಿಂದ ಆಯ್ಕೆ ಮಾಡಲಾಯಿತು.
ಬಣಜಿಗ ಸಂಘದ ಬೆಳಗಾವಿ ಜಿಲ್ಲಾಧ್ಯಕ್ಷರಾಗಿದ್ದ ಮಲ್ಲಿಕಾರ್ಜುನ ಕನಶೆಟ್ಟಿ ಅವರ ಅಧಿಕಾರಾವಧಿಯು ಕಳೆದ ಮಾರ್ಚ್ 31 ಕ್ಕೆ ಮುಗಿದ ಕಾರಣ ದಿನಾಂಕ 8-7-24 ರಂದು ಹುಬ್ಬಳ್ಳಿಯಲ್ಲಿ ಬಣಜಿಗ ಸಂಘದ ರಾಜ್ಯ ಘಟಕದ ಸಭೆಯ ನಂತರ ಬೆಳಗಾವಿ ಜಿಲ್ಲೆಯ ಸದಸ್ಯರೆಲ್ಲ ಕೂಡಿಕೊಂಡು ಈ ಕುರಿತು ಚರ್ಚಿಸಿ ಪ್ರಭು ಬೆಲ್ಲದವರನ್ನು ಜಿಲ್ಲಾಧ್ಯಕ್ಷರನ್ನಾಗಿ ಆಯ್ಕೆ ಮಾಡಬೇಕೆಂದು ತೀರ್ಮಾನವನ್ನು ಕೈಗೊಳ್ಳಲಾಗಿತ್ತು.
ಶ್ರೀ ಮಲ್ಲಿಕಾರ್ಜುನ ಜಗಜಂಪಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಪ್ರಭು ಬೆಲ್ಲದ ಅವರ ಹೆಸರನ್ನು ಜಿಲ್ಲಾಧ್ಯಕ್ಷರ ಸ್ಥಾನಕ್ಕೆ ಬೈಲಹೊಂಗಲದ ಮಹಾಂತೇಶ ವಾಲಿ ಅವರು ಸೂಚಿಸಿದರು, ಅದೇ ರೀತಿ ಬೆಳಗಾವಿಯ ಹಿರಿಯರಾದ ಮಲ್ಲಿಕಾರ್ಜುನ (ಪಾಪಣ್ಣ) ಹಿಡದುಗ್ಗಿ ಅವರು ಅನುಮೋದಿಸಿದರು.
ಈ ಸಭೆಯಲ್ಲಿ ಪ್ರವೀಣ್ ಪಟ್ಟಣಶೆಟ್ಟಿ , ಶಂಕರಣ್ಣ ಬಾಳಿ, ಪ್ರೇಮಕ್ಕ ಅಂಗಡಿ, ಚೆನ್ನಪ್ಪ ಕೌಜಲಗಿ, ಗುರುಸಿದ್ದಪ್ಪ ಮುತ್ತೂರು, ವಿರುಪಾಕ್ಷಿ ಕೌಜಲಗಿ, ಅಲ್ಲಪ್ಪ ನಿಡೋಣಿ, ಬಸವರಾಜ್ ನೂಲಿ ಮುಂತಾದವರು ಭಾಗವಹಿಸಿದ್ದರು ಎಂದು ಸಂಘದ ಮಲ್ಲಿಕಾರ್ಜುನ (ಪಾಪಣ್ಣ) ಹಿಡದುಗ್ಗಿ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.