ಕೊಪ್ಪಳ: ಹೆದ್ದಾರಿಗಳ £ರ್ಮಾಣದಲ್ಲಿ ವಿಶ್ವದಲ್ಲೇ ಭಾರತ ಎರಡನೇ ಸ್ಥಾನ ಪಡೆದುಕೊಂಡಿದೆ. ಇದು ಪ್ರಧಾನಮಂತ್ರಿ ನರೇಂದ್ರ ಮೋದಿ ಅವರಿಂದ ಸಾಧ್ಯವಾಗಿದೆ. ಕರ್ನಾಟಕದಲ್ಲಿ ಬಿಜೆಪಿ ಅಧಿಕಾರಕ್ಕೆ ತರುವ ಮೂಲಕ ಅವರ ಕೈ ಬಲ ಪಡಿಸಬೇಕು ಎಂದರು.
ನಗರದ ತಾಲೂಕು ಕ್ರೀಡಾಂಗಣದಲ್ಲಿ ಗುರುವಾರ ವರ್ಜುವಲ್ ಮೂಲಕ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ನಡೆಸಿದ ಕಾರ್ಯಕರ್ತರೊಂದಿಗೆ ಸಂವಾದ ಸಭೆಯಲ್ಲಿ ಮಾತನಾಡಿದರು.
ಸ್ವಾತಂತ್ರ÷್ಯ ಬಂದಾಗಿ£ಂದ ಏಳು ದಶಕದವರೆಗೆ ಅಧಿಕಾರ ನಡೆಸಿರುವ ಕಾಂಗ್ರೆಸ್ ಸರ್ಕಾರವು ದೇಶದ ಸಂಪರ್ಕ ಜಾಲವನ್ನು ಅಭಿವೃದ್ಧಿ ಪಡಿಸಿರಲಿಲ್ಲ. ಭೂ, ನೌಕಾ ಸಾರಿಗೆ ಅಭಿವೃದ್ಧಿ ಕಂಡಿರಲಿಲ್ಲ. ೨೦೧೪ ರಲ್ಲಿ ಅಧಿಕಾರಕ್ಕೆ ಬಂದ ಮೋದಿ ಸರ್ಕಾರವು ಆದ್ಯತೆ ಮೇರೆಗೆ ಸಂಪರ್ಕ ಜಾಲ ಅಭಿವೃದ್ಧಿ ಪಡಿಸಿದೆ. ದೇಶದ ಹೆದ್ದಾರಿ £ರ್ಮಾಣ ಕಾಮಗಾರಿಗಳು ವೇಗ ಪಡೆದುಕೊಂಡು ವಿಶ್ವದಲ್ಲೇ ೨ ನೇ ಸ್ಥಾನದಲ್ಲಿದೆ ಎಂದು ತಿಳಿಸಿದರು.
ಭಾರತ ಎಂದರೆ ಸಾಲ ಕೇಳಲು ಬರುತ್ತಾರೆ ಎಂಬುದು ವಿದೇಶ ಗಳ ಆರೋಪ ಇತ್ತು. ಆದರೆ, ಮೋದಿಯವರು ಅಧಿಕಾರಕ್ಕೆ ಬಮಧ ಬಳಿಕ ವಿದೇಶಗಳಿಗೆ ಭಾರತ ಸಾಲ £Ãಡುತ್ತಿದೆ. ಜಗತ್ತಿನ ಆರ್ಥಿಕ ಶಕ್ತಿ ಯಲ್ಲಿ ಭಾರತ ಐದನೇ ಸ್ಥಾನದಲ್ಲಿದೆ. ಒಂದೆಡೆ ಅಭಿವೃದ್ಧಿ ಇನ್ನೊಂದೆಡೆ ವಿಶ್ವಗುರು ಸ್ಥಾನದಲ್ಲಿದ್ದು, ರಾಜ್ಯದಲ್ಲಿ ಅಧಿಕಾರಕ್ಕೆ ತರುವ ಮೂಲಕ ಅಭಿವೃದ್ಧಿ ಗೆ ಕೈ ಜೋಡಿಸಬೇಕು.
ಜಿಲ್ಲಾ ಕಾರ್ಯಾಧ್ಯಕ್ಷ ಎಚ್. ಗಿರೇಗೌಡ ಮಾತನಾಡಿ, ನಮ್ಮ ಪಕ್ಷ ಎಲ್ಲ ಸ್ಥರದ ಜನರಿಗೆ ಅವಕಾಶ ಮಾಡಿಕೊಟ್ಟಿದೆ. ಕಳೆದ ೯ ವರ್ಷ ದಿಂದ ಮೋದಿ ಒಳ್ಳೆಯ ಕೆಲಸ ಮಾಡಿದ್ದಾರೆ. ರಾಜ್ಯದಲ್ಲಿ ಮಾಜಿ ಸಿಎಂ ಬಿ.ಎಸ್.ಯಡಿಯೂರಪ್ಪ ಹಾಗೂ ಸಿಎಂ ಬಸವರಾಜ ಬೊಮ್ಮಾಯಿ ಜನಪರ ಕೆಲಸಗಳನ್ನು ಮಾಡಿದ್ದಾರೆ. ಕೊಪ್ಪಳ ವಿಧಾನಸಭಾ ಕ್ಷೇತ್ರಕ್ಕೆ ಮಹಿಳಾ ಅಭ್ಯರ್ಥಿ ಯನ್ನು ಘೋಷಿಸಿದ್ದು, ಬಿಜೆಪಿಗೆ ಮತ £Ãಡಬೇಕು ಎಂದು ಮನವಿ ಮಾಡಿದರು.
ಬಿಜೆಪಿ ಅಭ್ಯರ್ಥಿ ಮಂಜುಳಾ ಅಮರೇಶ ಕರಡಿ ಮಾತನಾಡಿ, ಪ್ರಚಾರದ ವೇಳೆ ಗ್ರಾಮಗಳ ಜನತೆ ತಮ್ಮ ಸಮಸ್ಯೆ ಗಳನ್ನು ತಿಳಿಸಿದ್ದಾರೆ. ಆದ್ಯತೆ ಮೇರೆಗೆ ಸಮಸ್ಯೆ ಪರಿಹರಿಸಲಾಗುವುದು. ಧೂಳು ಮುಕ್ತ ನಗರವನ್ನಾಗಿ ಮಾಡುವುದೇ ನನ್ನ ಗುರಿಯಾಗಿದೆ. ಸರ್ಕಾರಿ ಶಾಲೆಗಳನ್ನು ಉನ್ನತೀಕರಿಸುವುದು, ಮೂಲಸೌಕರ್ಯ ಕಲ್ಪಿಸುವುದು ನನ್ನ ಆದ್ಯತೆ ಎಂದರು.
ಸಂವಾದ ಸಭೆಯಲ್ಲಿ ಮಹಿಳೆಯರು, ಯುವಕರು, ಹಿರಿಯರು ಸೇರಿ ಪಕ್ಷದ ಎಲ್ಲ ಕಾರ್ಯಕರ್ತರು ಉಪಸ್ಥಿತರಿದ್ದರು.
Gadi Kannadiga > State > ವರ್ಜುವಲ್ ಮೂಲಕ ಪ್ರಧಾ£ ಮೋದಿ ಅವರಿಂದ ಕಾರ್ಯಕರ್ತರ ಸಭೆ ಬಿಜೆಪಿ ಅಧಿಕಾರಕ್ಕೆ ತ£್ನ, ಮೋದಿ ಕೈ ಬಲಪಡಿಸಿ: ಸಂಗಣ್ಣ
ವರ್ಜುವಲ್ ಮೂಲಕ ಪ್ರಧಾ£ ಮೋದಿ ಅವರಿಂದ ಕಾರ್ಯಕರ್ತರ ಸಭೆ ಬಿಜೆಪಿ ಅಧಿಕಾರಕ್ಕೆ ತ£್ನ, ಮೋದಿ ಕೈ ಬಲಪಡಿಸಿ: ಸಂಗಣ್ಣ
Suresh27/04/2023
posted on

More important news
ಪ್ರತಿಬಂಧಕಾಜ್ಞೆ ಜಾರಿ
08/06/2023