This is the title of the web page
This is the title of the web page

Please assign a menu to the primary menu location under menu

Local News

ಪ್ರಕಾಶ ಹುಕ್ಕೇರಿ ಒಳ್ಳೆಯ ರಾಜಕಾರಣಿ ಆದರೆ: ಸಚಿವ ಉಮೇಶ ಕತ್ತಿ


ಬೆಳಗಾವಿ : ಪ್ರಕಾಶ ಹುಕ್ಕೇರಿ ಅವರು ಒಳ್ಳೆಯ ರಾಜಕಾರಣಿ ಆದರೆ ಅವರು ಶಿಕ್ಷಕರಲ್ಲ ಎಂದು ಆಹಾರ ಮತ್ತು ನಾಗರಿಕ ಪೂರೈಕೆ ಮತ್ತು ಅರಣ್ಯ‌ ಇಲಾಖೆ ಸಚಿವ ಉಮೇಶ ಕತ್ತಿ ಹೇಳಿದರು.

ನಗರದಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಪ್ರಕಾಶ ಹುಕ್ಕೇರಿ ಅವರು ಶಾಸಕ, ಸಂಸದರಾಗಿ ಚುನಾಯಿತರಾದವರು ಆದರೆ ಅವರು ಶಿಕ್ಷಕರಲ್ಲ, ಶಿಕ್ಷಕ‌ ಮತಕ್ಷೇತ್ರಕ್ಕೆ ಸ್ಪರ್ಧೆ‌ ಮಾಡುವುದು ಸರಿಯಲ್ಲ ಎಂದರು.

ನಮ್ಮ ಅಭ್ಯರ್ಥಿ ಅರುಣ‌ ಶಹಾಪುರ ಅವರು ಶಿಕ್ಷಣ ಮತಕ್ಷೇತ್ರದ ಸಾಕಷ್ಟು ಕೆಲಸಗಳನ್ನು ಮಾಡಿದ್ದಾರೆ. ಶಿಕ್ಷಕ ಮತಕ್ಷೇತ್ರದಿಂದ ಶಿಕ್ಷಕರೇ ಸ್ಪರ್ಧೆ ಮಾಡುವುದು ಸೂಕ್ತ. ವಾಯುವ್ಯ ಶಿಕ್ಷಕ ಮತಕ್ಷೇತ್ರ ಹಾಗೂ ಪದವೀಧರ ಮತಕ್ಷೇತ್ರದಲ್ಲಿ ನಮ್ಮ ಅಭ್ಯರ್ಥಿ ಗೆಲವು ಸಾಧಿಸುತ್ತಾರೆ.

ಜಿಲ್ಲೆಯಲ್ಲಿ ನಾವು 13 ಶಾಸಕರು ಬಿಜೆಪಿಯವರಿದ್ದೇವೆ. ಹೀಗಾಗಿ ನಮ್ಮ ಮತಬ್ಯಾಂಕ್ ಇದ್ದೆ. ನಮ್ಮ‌ ಅಭ್ಯರ್ಥಿ ಗೆಲ್ಲಿಸಿಕೊಂಡು ಬರಲಿದ್ದೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಬೆಳಗಾವಿ ಬಿಜೆಪಿಯಲ್ಲಿ ಯಾವುದೇ ಆಂತರಿಕ ಕಚ್ಚಾಟ ಇಲ್ಲ, ನಾವೇಲ್ಲಾ ಜೊತೆಗೂಡಿ ಕೆಲಸ ಮಾಡುತ್ತೇವೆ ಎಂದರು.


Gadi Kannadiga

Leave a Reply