This is the title of the web page
This is the title of the web page

Please assign a menu to the primary menu location under menu

Local News

ಕಮಲವನ್ನು ಮಕಾಡೆ ಮಲಗಿಸಿದ ಕಾಂಗ್ರೆಸ್ ಗೆದ್ದು ಮೀಸೆ ತಿರುವಿದ ಪ್ರಕಾಶ ಹುಕ್ಕೇರಿ


ಬೆಳಗಾವಿ:ವಾಯುವ್ಯ ಶಿಕ್ಷಕ ಮತಕ್ಷೇತ್ರದ ಚುನಾವಣಾ ಪಲಿತಾಂಶ ಹೊರಬಂದಿದ್ದು, ಕಾಂಗ್ರೆಸ್ ಪಕ್ಷದ ಅಭ್ಯರ್ಥಿಯಾದ ಪ್ರಕಾಶ್ ಹುಕ್ಕೇರಿ ಅವರು 10520 ಮತಗಳಿಂದ ವಿಜಯಿಯಾಗಿದ್ದಾರೆ.

ಅವರ ಸಮೀಪ ಸ್ಪರ್ಧಿ ಬಿಜೆಪಿಯ ಅರುಣ ಶಹಾಪುರ ಅವರು 6008 ಮತಗಳನ್ನು ಪಡೆಯಲಸ್ಟೇ ಸಾದ್ಯವಾಯಿತು.

ಹುಕ್ಕೇರಿ ಅವರು ಶಾಹಾಪೊರ ಅವರಿಗಿಂತ 4512 ಮತಗಳನ್ನು ಅಧಿಕವಾಗಿ ಪಡೆದು ವಿಜಯಿಯಾಗಿದ್ದಾರೆ.

ಈ ಮೂಲಕ ಬಿಜೆಪಿ ಅವರು ಎಲ್ಲರೂ ಸೇರಿ ಮಾಡಿದ ಟೀಕೆ ಟಿಪ್ಪಣಿಗಳಿಗೆ ಹುಕ್ಕೆರಿಯವರು ತಮ್ಮ ಗೆಲುವಿನ ಮೂಲಕ ಉತ್ತರ ಕೊಟ್ಟಿದ್ದಾರೆ.

ಶಿಕ್ಷಕ ಅಲ್ಲ, ಮುದಿಎತ್ತು, ಪಕ್ಷದಲ್ಲಿ ಬಲಿಪಶು ಮಾಡಿದ್ದಾರೆ, ಎಂದು ಬಿಜೆಪಿಗರು ಮಾಡಿದ ಎಲ್ಲ ಆರೋಪಗಳಿಗೆ ತಮ್ಮ ಜಯದ ಮೂಲಕ ಇವತ್ತು ಬಿಜೆಪಿಯವರು ಮಾತಿನಮಲ್ಲರು ಎಂದು ತೋರಿಸಿಕೊಟ್ಟಿದ್ದಾರೆ.

ಮತ ಎಣಿಕೆ ಕೇಂದ್ರದ ಹೊರಗಡೆ ಕಾಂಗ್ರೆಸ್ ಕಾರ್ಯಕರ್ತರ ಸಂಭ್ರಮಾಚರಣೆ ಮುಗಿಲು ಮುಟ್ಟಿತ್ತು.

ಸೋತ ನಂತರ ಅರುಣ ಶಹಾಪುರ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ಮುದಿ ಎತ್ತು ಎಂಬ ಹೇಳಿಕೆಯೂ ನನ್ನ ಸೋಲಿಗೆ ಒಂದು ಮುಖ್ಯವಾದ ಕಾರಣವಾಯಿತು ಎಂದರು.


Gadi Kannadiga

Leave a Reply