This is the title of the web page
This is the title of the web page

Please assign a menu to the primary menu location under menu

Local News

ದೇವಸ್ಥಾನದಲ್ಲಿ ಮುಸ್ಲಿಂ ಸಮುದಾಯ ವ್ಯಾಪಾರ ನಡೆಸಬಾರದು : ಪ್ರಮೋದ ಮುತಾಲಿಕ


ಬೆಳಗಾವಿ: ಮುಸ್ಲಿಂರು ಗೋ ಹತ್ಯೆ ಮಾಡುವುದನ್ನು ಮತ್ತು ಗೋ ಮಾಂಸ ತಿನ್ನುವ ಮಾನಸಿಕತೆ ಎಲ್ಲಿಯವರೆಗು ಬದಲಾಗುವುದಿಲ್ಲವೋ ಅಲ್ಲಿಯವರೆಗೆ ಮುಸ್ಲಿಂರ ಜೊತೆಗೆ ವ್ಯಾಪಾರ ವಹಿವಾಟು ಮಾಡುವುದಿಲ್ಲ ಎಲ್ಲವು ಬಂದ್ ಎಂದು ಶ್ರೀರಾಮ ಸೇನೆ ಸಂಸ್ಥಾಪಕ ಪ್ರಮೋದ ಮುತಾಲಿಕ ಖಡಕ್ ಎಚ್ಚರಿಕೆ ನೀಡಿದ್ದಾರೆ.

ನಗರದಲ್ಲಿ ಹಮ್ಮಿಕೊಂಡಿದ್ದ ಸುದ್ದಿಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು  ಕಳೆದ ಎರಡು ದಿನಗಳಿಂದ ಕರ್ನಾಟಕದಲ್ಲಿ ಆರ್ಥಿಕ ಮುಷ್ಕರ ಮುಸ್ಲಿಂರ ಜತೆ ವ್ಯಾಪಾರ ಮಾಡಬಾರದು ಎಂದು ಹಬ್ಬಿದೆ. ಮುಸ್ಲಿಂ ಮಾನಸೀಕತೆಯ ಬದಲಾವಣೆಯಾಗುವವರೆಗೂ ಸಂಘರ್ಷ ಹೀಗೆ ಮುಂದುವರಿಯುತ್ತದೆ. ದೇವಸ್ಥಾನದಲ್ಲಿ ಮುಸ್ಲಿಂ ಸಮುದಾಯದವರು ವ್ಯಾಪಾರ ನಡೆಸದಂತೆ ನಿರ್ಧಾರ ತೆಗೆದುಕೊಂಡಿದ್ದನ್ನು ಶ್ರೀರಾಮ ಸೇನೆ ಬೆಂಬಲಿಸುತ್ತದೆ ಎಂದರು.

ಹಿಂದೂ ಯುವಕರಾದ ಶಿವು ಉಪ್ಪಾರ ಹಾಗೂ ಹರ್ಷ ಕೊಲೆ ಅಲ್ಲದೆ ಗದಗನಲ್ಲಿ ಹಿಂದು ಮಹಿಳೆಯ ಮೇಲೆ ಮುಸ್ಲಿಂ ಯುವಕ ಬರ್ಬರವಾಗಿ ಹಲ್ಲೆ ಮಾಡಿದ್ದಾನೆ. ಮುಸ್ಲಿಂರ ಕೌರ್ಯ ನಿಲ್ಲಿಸುವವರೆಗೂ ಈ ರೀತಿಯ ಕೌರ್ಯ ನಡೆಯುತ್ತಿರುತ್ತದೆ. ಮುಸ್ಲಿಂರು ಗೋ ಹತ್ಯೆ ನಡೆಸುತ್ತಿದ್ದಾರೆ. ಮಾಂಸ ತಿನ್ನುತ್ತಿದ್ದಾರೆ. ಇದು ಎಲ್ಲಿಯವರೆಗೂ ನಿಲ್ಲುವುದಿಲ್ಲವೋ ಅಲ್ಲಿಯವರೆಗೂ ಮುಸ್ಲಿಂರ ಜತೆ ಯಾವುದೇ ವ್ಯಾಪಾರ ವಹಿವಾಟ ನಡೆಸಬಾರದು ಎಂದು ಇದೇ ವೇಳೆ ಪ್ರಮೋದ್ ಮುತಾಲಿಕ್ ಕರೆ ನೀಡಿದರು.

ಇನ್ನು ಹಿಜಾಬ್ ವಿಚಾರದಲ್ಲಿ ನ್ಯಾಯಾಲಯಕ್ಕೆ ಹೋದವರು ಮುಸ್ಲಿಂರೇ ಈಗ ನ್ಯಾಯಾಲಯದ ಆದೇಶವನ್ನು ಧಿಕ್ಕರಿಸಿದ್ದಾರೆ. ನ್ಯಾಯಾಲಯಕ್ಕೆ ಮುಸ್ಲಿಂ ವಿದ್ಯಾರ್ಥಿನಿಯರುಪೋಷಕರು ಮುಸ್ಲಿಂ ಸಂಘಟನೆಗಳು ಗೌರವಿಸಲಿಲ್ಲ. ಎಂದು ಹರಿಹಾಯ್ದ ಪ್ರಮೋದ್ ಮುತಾಲಿಕ್ ಸುಪ್ರೀಂ ಕೋರ್ಟ್ ಸೂಚನೆ ಇದ್ದಾಗಲೂ ಸಹ ಬೆಳಗ್ಗೆ 5 ಗಂಟೆಗೆ ಎದ್ದು ಸಾರ್ವಜನಿಕರಿಗೆ ಕಿರಿಕಿರಿ ಮಾಡುವ ಪ್ರಾರ್ಥನೆ ನಿಲ್ಲಿಸಬೇಕು. ಎಂದರು.

 


Gadi Kannadiga

Leave a Reply