ನೇಸರಗಿ: ಸಮೀಪದ ದೇಶನೂರ ಗ್ರಾಮದ ಸಿದ್ದಲಿಂಗೇಶ್ವರ ಶಿಕ್ಷಣ ಸಂಸ್ಥೆಯ ಸಿದ್ದಲಿಂಗೇಶ್ವರ ಪ್ರೌಢಶಾಲೆಯ ೧೯೯೭ ಮತ್ತು ೨೦೦೦ ನೇ ಸಾಲಿನ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಂದ ಗುರುವಂದನಾ ಕಾರ್ಯಕ್ರಮ ಹಾಗೂ ನೂತನ ಕಟ್ಟಡ ಅಡಿಗಲ್ಲು ಸಮಾರಂಭ ದಿ.೧೭ ರಂದು ಮುಂಜಾನೆ ೧೦ ಘಂಟೆಗೆ ದೇಶನೂರ ಸಿದ್ದಲಿಂಗೇಶ್ವರ ಪ್ರೌಢಶಾಲೆಯಲ್ಲಿ ನಡೆಯಲಿದೆ ಎಂದು ದೇಶನೂರ ಪಿಕೆಪಿಎಸ್ ಅಧ್ಯಕ್ಷ ಬಿ.ಬಿ.ಕೇದಾರಿ ಹೇಳಿದರು.
ಅವರು ಸೋಮವಾರ ದಿ. ೧೨ ರಂದು ನಡೆದ ಗುರುವಂದನಾ ಕಾರ್ಯಕ್ರಮ ಪೂರ್ವಭಾವಿ ಸಭೆಯಲ್ಲಿ ಹೇಳಿದರು.
ಸಾ£ಧ್ಯವನ್ನು ಕಿತ್ತೂರ ರಾಜಗುರು ಸಂಸ್ಥಾನ ಕಲ್ಮಠ, ದೇಶನೂರ ವಿರಕ್ತಮಠದ ಮಡಿವಾಳ ರಾಜಯೋಗಿಂದ್ರ ಸ್ವಾಮೀಜಿ, ದೇಶನೂರ ಅಲ್ ಹಜ್ ಹಜರತ್ ಸೈಯದ್ ಶಮ್ಮಸುಲ್ ಹಕ್, ದೇಶನೂರ ಡಾ.ಮೇ£ನೋ ಸ್ವಾಮೀಜಿ ವಹಿಸುವರು.
ಶಾಸಕ ಮಹಾಂತೇಶ ದೊಡ್ಡಗೌಡರ ಉದ್ಘಾಟಿಸುವರು. ಸಿದ್ದಲಿಂಗೇಶ್ವರ ಪ್ರೌಢಶಾಲೆ ಮುಖ್ಯೋಪಾಧ್ಯಾಯ ಎಂ.ಡಿ.ನಂದೆನ್ನವರ ಅಧ್ಯಕ್ಷತೆ ವಹಿಸುವರು.
ಮುಖ್ಯ ಅತಿಥಿಗಳಾಗಿ ಕಾಡಾ ಅಧ್ಯಕ್ಷ ಡಾ.ವಿಶ್ವನಾಥ ಪಾಟೀಲ, ಮದ್ಯಪಾನ ಸಂಯಮ ಮಂಡಳಿ ಅದ್ಯಕ್ಷ ಮಲ್ಲಿಕಾರ್ಜುನ ತುಬಾಕಿ, £ವೃತ್ತ ಮುಖ್ಯೊಪಾದ್ಯಾಯ ಎನ್.ಎಸ್.ಗಣಿಕೊಪ್ಪ ಪಾಲ್ಗೊಳ್ಳಲಿದ್ದಾರೆ.
ಇದೇ ವೇಳೆ ಸಾಧಕರನ್ನು ಸನ್ಮಾ£ಸಲಾಗುವದು. ಸಂಜೆ ರಸಮಂಜರಿ ಕಾರ್ಯಕ್ರಮ ನಡೆಯಲಿದೆ ಎಂದರು.
ಮುಖ್ಯೋಪಾಧ್ಯಾಯ ಎಂ.ಡಿ.ನಂದೆನ್ನವರ, ಆನಂದ ಹಜೇರಿ ಮಾತನಾಡಿ, ಸಿದ್ದಲಿಂಗೇಶ್ವರ ಪ್ರೌಢಶಾಲೆಯು ೧೯೭೪ರಲ್ಲಿ ೨೮ ವಿದ್ಯಾರ್ಥಿಗಳಿಂದ ಪ್ರಾರಂಭಗೊಂಡು ಸದ್ಯ ೪೦೦ ವಿದ್ಯಾರ್ಥಿಗಳು ಕಲಿಯುತ್ತಿದ್ದಾರೆ. ಇಲ್ಲಿ ಕಲಿತ ವಿದ್ಯಾರ್ಥಿಗಳು ಅನೇಕ ಉತ್ತಮ ಹುದ್ದೆಯಲ್ಲಿದ್ದಾರೆ. ದಿ.೧೭ ರಂದು ನಡೆಯುವ ಗುರುವಂದನಾ ಕಾರ್ಯಕ್ರಮಕ್ಕೆ ಎಲ್ಲರ ಸಹಕಾರ ಅಗತ್ಯ ಎಂದರು.
ಪತ್ರಿಕಾಗೋಷ್ಢಿಯಲ್ಲಿ ಮತ್ತಿಕೊಪ್ಪ ಪಿಕೆಪಿಎಸ್ ಉಪಾಧ್ಯಕ್ಷ ಅಡಿವೆಪ್ಪ ಹೊಸಮ£,ಮಹಾಂತೇಶ ಕೊತ್ತಲ, ಶಿವಾನಂದ ಗೂರನವರ, ಮಹಾಂತೇಶ ಅಂತೆನ್ನವರ, ರಾಜು ಮಡಿವಾಳರ, ನಾಗರಾಜ ಮುಚ್ಚಂಡಿ, ಯೋಗಿಶ ಕಾಂಬೋಜಿ ಇದ್ದರು.
Gadi Kannadiga > Local News > ಗುರುವಂದನಾ ಕಾರ್ಯಕ್ರಮದ ಪೂರ್ವಭಾವಿ ಸಭೆ