ಸಂಡೂರು: ಮುಂಬರುವ ವಿಧಾನ ಚುನಾವಣೆಗೆ ತಾಲೂಕು ಆಡಳಿತ ಸಕಲ ಸಿದ್ಧತೆ ನಡೆಸುತ್ತಿದ್ದು, ೧೮ ರ‍್ಷ ಮೇಲ್ಪಟ್ಟವರು ಏ.೧ ರೊಳಗೆ ಅಗತ್ಯ ದಾಖಲೆಗಳೊಂದಿಗೆ ಮತದಾರರ ಪಟ್ಟಿಗೆ ನೋಂದಣಿಯಾಗಬಹುದಾಗಿದೆ ಎಂದು ತಹಸೀಲ್ದಾರ್ ಕೆ.ಎಂ.ಗುರುಬಸವರಾಜ ಹೇಳಿದರು.
ಪಟ್ಟಣದ ತಹಸೀಲ್ದಾರ್ ಕಚೇರಿಯಲ್ಲಿ ನಾನಾ ಪಕ್ಷಗಳ ಸಭೆಯನ್ನು ಉದ್ದೇಶಿಸಿ ಮಾತನಾಡಿದರು.ತಾಲೂಕಿನಲ್ಲಿ ಈಗಾಗಲೇ
೧,೧೦,೫೮೯ ಪುರುಷರು, ೧,೧೦,೨೯೮ ಮಹಿಳೆಯರು, ೨೬ ಜನ ಇತರರು ಸೇರಿ ಒಟ್ಟಾರೆ ೨,೨೧,೧೮೩ ಜನರು ಮತದಾರರ ಪಟ್ಟಿಯಲ್ಲಿ ನೋಂದಣಿಯಾಗಿದ್ದಾರೆ. ಈ ಪೈಕಿ ೨,೬೪೫ ವಿಶೇಷಚೇತನರು, ೨೫,೦೭ ಜನ ೮೦-೮೯ ರ‍್ಷದವರು, ೫೩೧ ಜನ ೯೦-೯೯ ಸಭೆ ವಯಸ್ಸಿನವರು, ೪೨ ಕ್ಕೂ ಹೆಚ್ಚು ಜನ ೧೦೦ ಕ್ಕೂ ಹೆಚ್ಚಿನ ವಯಸ್ಸು ಉಳ್ಳವರಾಗಿದ್ದಾರೆ. ೮೦ ರ‍್ಷ ಮೇಲ್ಪಟ್ಟ ವೃದ್ಧರು ಮತದಾನಕ್ಕೆ ಬರಲು ಸಾಧ್ಯವಿಲ್ಲ ಎಂದು ತಿಳಿಸಿದಲ್ಲಿ ಪೋಸ್ಟಲ್ ಬ್ಯಾಲೆಟ್ ಮೂಲಕ ಮತದಾನಕ್ಕೆ ಅವಕಾಶ ನೀಡಲಾಗುತ್ತದೆ. ೨೭ ಸಾವಿರ ಮತದಾರರನ್ನು ಪಟ್ಟಿಯಿಂದ ಡಿಲಿಟ್ ಮಾಡಲಾಗಿದೆ. ಶೇ.೯೫ ರಷ್ಟು ಲಿಂಕ್ ಮಾಡಲಾಗಿದೆ.
ಕ್ಷೇತ್ರಾದ್ಯಂತ ೨೪೯ ಮತಗಟ್ಟೆಗಳಿವೆ. ಪಟ್ಟಣದ ಚಪ್ಪರದಹಳ್ಳಿ ಮತಗಟ್ಟೆಯಲ್ಲಿ ಮತದಾರರ ಸಂಖ್ಯೆ ಹೆಚ್ಚಿದ್ದು ಒಂದು ಹೆಚ್ಚುವರಿ ಮತಗಟ್ಟೆ ತೆರೆಯಲಾಗುವುದು. ಈ ಪೈಕಿ ಒಂದು ಮಾದರಿ ಮತಗಟ್ಟೆ ಸ್ಥಾಪಿಸಲು ಉದ್ದೇಶಿಸಲಾಗಿದೆ. ಸದ್ಯಕ್ಕೆ ೫೯ ಮತಗಟ್ಟೆಗಳನ್ನು ಕ್ರಿಟಿಕಲ್’ ಎಂದು ಗುರುತಿಸಲಾಗಿದೆ
ತಾಲೂಕಿನ ಪದವಿ ಕಾಲೇಜು ಸೇರಿ ನಾನಾ ಕಾಲೇಜುಗಳಲ್ಲಿ ಹಾಗೂ ಗ್ರಾಮ ಪಂಚಾಯಿತಿ ಮಟ್ಟದಲ್ಲಿ ವಿದ್ಯುನ್ಮಾನ ಮತಯಂತ್ರ, ವಿವಿ ಪ್ಯಾಟ್ ಕರ‍್ಯ ನರ‍್ವಹಣೆ ಕುರಿತು ಸಾಕಷ್ಟು ಪ್ರಚಾರ ನಡೆಸಲಾಗಿದೆ. ಎನ್‌ಎಂಡಿಸಿ, ಜಿಂದಾಲ್, ಸ್ಥಯೋರ್ ಸೇರಿ ನಾನಾ ಸಂಸ್ಥೆಗಳಿಂದ ರ‍್ಗವಾಗಿ ಹೋದವರ ಮಾಹಿತಿ ಕಲೆ ಹಾಕಿ ವಲಸೆ ಹೋದವರನ್ನು ಮತದಾರರ ಪಟ್ಟಿಯಿಂದ ಕೈಬಿಡಲಾಗುತ್ತಿದೆ ಎಂದರು. ಕಳೆದ ಬಾರಿ ಶೇ.೭೪ ರಷ್ಟು ಮತದಾನವಾಗಿತ್ತು. ಈ ಬಾರಿ ಹೆಚ್ಚಿನ ಮತದಾನ ಮಾಡಿಸಲು ಸಾಕಷ್ಟು ಪ್ರಚಾರ ನಡೆಸಲಾಗಿದೆ ಎಂದರು.
ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಚಿತ್ರಿಕಿ ಸತೀಶ, ಸತ್ಯಪ್ಪ, ಬಿಜೆಪಿಯ ನಾಗರಾಜ, ಜೆಡಿಎಸ್‌ನ ಹೊನ್ನೂರುಸಾಬ್, ಆಮ್ ಆದ್ಮಿ ಪಕ್ಷದ ಬಾಲಸುಭ್ರಮಣ್ಯ, ಖಲಂದರ್ ಇತರರು ಇದ್ದರು.
ನಂತರ ತಾಲೂಕಿನ ಬಿಎಲ್ಓ ಗಳಿಗೆ ಚುನಾವಣಾ ಪ್ರಯುಕ್ತ ತರಬೇತಿ ಕರ‍್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು, ತಾಲೂಕು ಆಡಳಿತದಿಂದ ಎಲ್ಲಾ ಬಿಎಲ್ಓ ಗಳಿಗೆ ಕಿಟ್ ಗಳನ್ನು ತಹಶೀಲ್ದಾರ್ ವಿತರಣೆ ಮಾಡಿದರು.