ಬೆಳಗಾವಿ: ಇಂದು ವಚನಗಳಿಗೆ ರಾಗ ಸಂಯೋಜಿಸಿ ಹಾಡುವುದರ ಜತೆಗೆ ನೃತ್ಯಕ್ಕೂ ಸಂಯೋಜಿಸಿ ಪ್ರಸ್ತುತಪಡಿಸುವ ನಿಟ್ಟಿನಲ್ಲಿ ವಚನ ಸಾಹಿತ್ಯ ಬೆಳೆದಿದೆ ಎಂದರೆ ಅದು ಹೆಮ್ಮೆ ಪಡುವಂಥ ವಿಚಾರ ಎಂದು ತೋಂಟದ ಡಾ. ಶ್ರೀ ಸಿದ್ಧರಾಮ ಮಹಾಸ್ವಾಮಿಗಳು ಹೇಳಿದರು.
ಅವರು ಜಾಗತಿಕ ಲಿಂಗಾಯತ ಮಹಾಸಭಾ, ರಾಷ್ಟ್ರೀಯ ಬಸವ ಸೇನೆ ಬೆಳಗಾವ ಜಿಲ್ಲಾ ಘಟಕದ ಸಹಯೋಗದಲ್ಲಿ ಇಲ್ಲಿನ ಶಿವಬಸವನಗರದ ಪ್ರಭುದೇವ ಸಭಾಗ್ರಹದ ಸಭಾಂಗಣದಲ್ಲಿ ಬಸವ ಜಯಂತಿ ನಿಮಿತ್ತ ಆಯೋಜಿಸಿದ್ದ ಜಿಲ್ಲಾ ಮಟ್ಟದ ವಚನ ನೃತ್ಯೋತ್ಸವ ಸ್ಪರ್ಧೆ ಹಾಗೂ ಬಸವ ಸಮಾವೇಶದ ಸಾಂಸ್ಕೃತಿಕ ಕಾರ್ಯಕ್ರಮದ ಸಮಾರೋಪ ಸಮಾರಂಭದ ಸಾನ್ನಿಧ್ಯ ವಹಿಸಿ ಮಾತನಾಡಿದರು.
“ ಸಂಗೀತಕ್ಕೆ ವಚನ ಅಳವಡಿಸಿಕೊಳ್ಳಲು ಸಾಧ್ಯವಿಲ್ಲ ಎನ್ನುತ್ತಿದ್ದವರು ಇಂದು ಮುಖ ಮುಚ್ಚಿಕೊಳ್ಳುವ ಸಂದರ್ಭ ಬಂದಿದೆ. ಇಂಥ ಕಾರ್ಯಕ್ರಮದಿಂದ ಮಕ್ಕಳು, ಹಿರಿಯರು ಭಾಗವಹಿಸುವ ಅವಕಾಶ ನೀಡಿರುವುದು ಶ್ಲಾಘನೀಯ” ಎಂದರು.
“೧೨ನೇ ಶತಮಾನದಲ್ಲಿ ಬದುಕಿದ್ದ ಬಸವಣ್ಣನವರ ಮೌಲ್ಯಗಳು ತತ್ವಾದರ್ಶಗಳು ಸರ್ವಕಾಲಿಕ ಪ್ರಸ್ತುತವಾಗಿದ್ದು ಅವುಗಳನ್ನು ಪ್ರಸಾರ ಮಾಡುವುದು ನಮ್ಮೆಲ್ಲರ ಕರ್ತವ್ಯ. ಬಸವ ತತ್ವಗಳನ್ನು ಅರಿತು ನಾವೆಲ್ಲರೂ ಬಸವಣ್ಣನವರ ನಿಜ ಅನುಯಾಯಿಗಳಾಗಬೇಕು” ಎಂದು ಶ್ರೀಗಳು ಹೇಳಿದರಲ್ಲದೆ ಸಂಘಟಕರ ಕಾರ್ಯ ಶ್ಲಾಘಿಸಿದರು.
ಶ್ರೀ ಡಾ.ಅಲ್ಲಮಪ್ರಭು ಮಹಾಸ್ವಾಮಿಗಳು ಶೇಗುಣಸಿ ವಿರಕ್ತ ಮಠದ ಶ್ರೀ ಡಾ.ಮಹಾಂತ ಮಹಾಸ್ವಾಮಿಗಳು,ಶ್ರೀ ಶಿವಾನಂದ ಮಹಾಸ್ವಾಮಿಗಳು ಹಂದಿಗುಂದ ಶ್ರೀ ಡಾ. ಶಿವಯೋಗಿ ದೇವರು ಕಾರಂಜಿಮಠ ಸಮ್ಮುಖ ವಹಿಸಿದ್ದರು.
ಜಾಗತಿಕ ಲಿಂಗಾಯತ ಮಹಾಸಭಾ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಶಿವಾನಂದ ಜಾಮದಾರ್, ಜಾಗತಿಕ ಲಿಂಗಾಯತ ಮಹಾಸಭಾ ಅಧ್ಯಕ್ಷ ಬಸವರಾಜ ರೊಟ್ಟಿ ಅಧ್ಯಕ್ಷತೆ ವಹಿಸಿದ್ದರು. ರಾಷ್ಟ್ರೀಯ ಬಸವ ಸೈನ್ಯದ ಅಧ್ಯಕ್ಷ ಶಂಕರ ಗುಡಸ, ಶಾಸಕ ಅನಿಲ ಬೆನಕೆ, ಡಾ. ರವಿ ಪಾಟೀಲ, ಸುರೇಶ ಯಾದವ, ನಾನಾಗೌಡ ಬಿರಾದಾರ, ಮತ್ತಿತರ ಗಣ್ಯರು ಉಪಸ್ಥಿತರಿದ್ದರು.
ನಯನಾ ಗಿರಿಗೌಡರ್ ತಂಡದವರು ಪ್ರಾರ್ಥಿಸಿದರು. ಮುರಿಗೆಪ್ಪಾ ಬಾಳಿ ಸ್ವಾಗತಿಸಿದರು. ಜಾಗತಿಕ ಲಿಂಗಾಯತ ಮಹಾಸಭಾ ನಗರ ಘಟಕಾಧ್ಯಕ್ಷ ಎಸ್.ಜಿ. ಸಿದ್ನಾಳ ವಂದಿಸಿದರು. ಜಾಗತಿಕ ಲಿಂಗಾಯತ ಜಿಲ್ಲಾ ಪ್ರದಾನಕಾರ್ಯದರ್ಶಿ ಅಶೋಕ ಮಳಗಲಿ ನಿರೂಪಿಸಿದರು.
Gadi Kannadiga > Local News > ವಚನಗಳಿಗೆ ರಾಗ, ನೃತ್ಯ ಸಂಯೋಜನೆಯ ಪ್ರಸ್ತುತಿ ಹೆಮ್ಮೆ ಪಡುವ ವಿಚಾರ ತೋಂಟದ ಡಾ. ಶ್ರೀ ಸಿದ್ಧರಾಮ ಮಹಾಸ್ವಾಮೀಜಿ ಅಭಿಮತ
ವಚನಗಳಿಗೆ ರಾಗ, ನೃತ್ಯ ಸಂಯೋಜನೆಯ ಪ್ರಸ್ತುತಿ ಹೆಮ್ಮೆ ಪಡುವ ವಿಚಾರ ತೋಂಟದ ಡಾ. ಶ್ರೀ ಸಿದ್ಧರಾಮ ಮಹಾಸ್ವಾಮೀಜಿ ಅಭಿಮತ
Suresh03/05/2023
posted on
