This is the title of the web page
This is the title of the web page

Please assign a menu to the primary menu location under menu

State

ಜಿಲ್ಲಾಧಿಕಾರಿಗಳಾದ ಎಂ.ಸುಂದರೇಶಬಾಬು ಅವರಿಂದ ಪತ್ರಿಕಾಗೋಷ್ಠಿ ವಿಧಾನಸಭಾ ಚುನಾವಣೆ: ಶಾಂತಿಯುತ ಮತದಾನಕ್ಕೆ ಅಗತ್ಯ ಸಿದ್ಧತೆ


ಕೊಪ್ಪಳ ಮೇ ೦೮ : ಮೇ ೧೦ರಂದು ಮತದಾನ ಮತ್ತು ಮೇ ೧೩ರಂದು ಮತ ಎಣಿಕೆ ಸುಗಮವಾಗಿ ಸಾಗಿ ವಿಧಾನಸಭಾ ಚುನಾವಣೆ-೨೦೨೩ರ ಯಶಸ್ವಿಗೆ ಸಹಕರಿಸಬೇಕು ಎಂದು ಜಿಲ್ಲಾ ಚುನಾವಣಾಧಿಕಾರಿಗಳು ಆಗಿರುವ ಜಿಲ್ಲಾಧಿಕಾರಿಗಳಾದ ಎಂ.ಸುಂದರೇಶಬಾಬು ಅವರು ಕೊಪ್ಪಳ ಜಿಲ್ಲೆಯ ಸಾರ್ವಜನಿಕರಲ್ಲಿ ಮನವಿ ಮಾಡಿದರು.
ಮೇ ೮ರಂದು ಜಿಲ್ಲಾಡಳಿತ ಭವನದಲ್ಲಿನ ಸಭಾಂಗಣದಲ್ಲಿ ಪತ್ರಿಕಾಗೋಷ್ಠಿ ನಡೆಸಿ ಮಾತನಾಡಿದ ಅವರು, ಕೊಪ್ಪಳ ಜಿಲ್ಲೆಯಲ್ಲಿ ಈ ವಿಧಾನಸಭಾ ಚುನಾವಣೆಗೆ ೫,೬೬,೩೮೧ ಪುರುಷರು ಹಾಗೂ ೫,೭೦,೪೦೭ ಮಹಿಳೆಯರು ಮತ್ತು ಇತರೆ ೫೦ ಸೇರಿ ಒಟ್ಟು ೧೧,೩೬,೮೩೮ ಮತದಾರರು ಮತದಾನಕ್ಕೆ ಅರ್ಹರಿದ್ದಾರೆ. ಜಿಲ್ಲೆಯ ಐದು ಕ್ಷೇತ್ರಗಳಲ್ಲಿನ ಒಟ್ಟು ೧೧,೩೬,೮೩೮ ಮತದಾರರ ಪೈಕಿ ೩೦,೫೧೧ ಯುವ ಮತದಾರರು, ೧೪,೧೪೫ ವಿಕಲಚೇತನರು, ೮೦ ವರ್ಷ ಮೇಲ್ಪಟ್ಟ ೧೮,೩೦೯ ಮತ್ತು ೫೩೬ ಸೇವಾ ಮತರರಿದ್ದಾರೆ.
ಜಿಲ್ಲೆಯಲ್ಲಿ ೨೮ ಮಾದರಿ ಮತಗಟ್ಟೆಗಳು, ೧೨ ಸಖಿ ಮತಗಟ್ಟೆಗಳು, ತಲಾ ೫ ವಿಶೇಷಚೇತನರ ಮತಗಟ್ಟೆಗಳು ಮತ್ತು ಯುವ ಸಿಬ್ಬಂದಿ ನಿರ್ವಹಿಸುವ ಮತಗಟ್ಟೆಗಳನ್ನು ಸ್ಥಾಪಿಸಲಾಗಿದೆ. ಜಿಲ್ಲೆಯ ಎಲ್ಲಾ ೧,೩೨೨ ಮತಗಟ್ಟೆಗಳಲ್ಲಿ ಮೂಲಭೂತ ಸೌಕರ್ಯಗಳಾದ ಕುಡಿಯುವ ನೀರು, ಶೌಚಾಲಯ, ವಿಕಲಚೇತನರಿಗೆ ರ‍್ಯಾಂಪ್ ವ್ಯವಸ್ಥೆ, ವಿದ್ಯುತ್ ಸಂಪರ್ಕ, ನೆರಳಿನ ವ್ಯವಸ್ಥೆ ಮಾಡಲಾಗಿದೆ. ವಿಕಲಚೇತನರಿಗೆ ಅನುಕೂಲವಾಗಲು ಪ್ರತಿ ಮತಟ್ಟೆಗಳಲ್ಲಿ ಗಾಲಿ ಕುರ್ಚಿ ಮತ್ತು ಭೂತಗನ್ನಡಿಗಳ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು. ಪ್ರತಿ ಮತಗಟ್ಟೆಗಳಲ್ಲಿ ಅಂಧ ಮತದಾರರಿಗೆ ಅನುಕೂಲವಾಗಲು ಬ್ರೆöÊಲ್ ಮಾದರಿ ಮತಪತ್ರಗಳನ್ನು ಇರಿಸಲಾಗಿದೆ. ಅಂಧ ಮತದಾರರು ಮಾದರಿ ಬ್ರೆöÊಲ್ ಮತಪತ್ರಗಳ ಸಹಾಯದೊಂದಿಗೆ ಮತಚಲಾಯಿಸಬಹುದಾಗಿದೆ.
ಮತಗಟ್ಟೆಗಳಿಗೆ ವೆಬ್‌ಕಾಸ್ಟಿಂಗ್, ಸಿಎಪಿಎಫ್, ಮೈಕ್ರೋ ಆಬ್ರ‍್ವರ್‌ಗಳ ನೇಮಕಾತಿ ಮಾಡಲಾಗಿದೆ. ಜಿಲ್ಲೆಯಲ್ಲಿನ ಎಲ್ಲಾ ಮತದಾರರಿಗೆ ಮತದಾರರ ಮಾಹಿತಿ ಚೀಟಿಗಳನ್ನು ಮತ್ತು ಪ್ರತಿ ಮನೆಗಳಿಗೆ ಮತದಾರರ ಮಾರ್ಗದರ್ಶಿಗಳನ್ನು ಹಂಚಿಕೆ ಮಾಡಲಾಗಿದೆ.
ಜಿಲ್ಲೆಯಲ್ಲಿ ಮಾದರಿ ನೀತಿ ಸಂಹಿತೆಯನ್ನು ಕಟ್ಟುನಿಟ್ಟಾಗಿ ಜಾರಿ ಮಾಡಲಾಗಿದ್ದು, ಏಪ್ರಿಲ್ ೨೯ರಿಂದ ಮೇ ೭ರವರೆಗೆ ೩,೯೧,೪೦,೯೦೦ ನಗದು ಜಪ್ತು ಮಾಡಲಾಗಿದೆ. ೪೭,೪೩,೪೦೩.೪೬ ಮೌಲ್ಯದ ೧೦೯೧೪.೮೮ ಲೀಟರ್ ಮದ್ಯೆ, ೭,೪೦,೦೦೦ ರೂ.ಮೌಲ್ಯದ ೦.೧೨೪೦೮೮ ಕೆ.ಜಿ.ಬಂಗಾರ, ೧,೩೬,೫೦೦ ರೂ.ಮೌಲ್ಯದ ೨.೩೯೫ ಕೆ.ಜಿ.ಮಾದಕ ದ್ರವ್ಯ ವಶಕ್ಕೆ ಪಡೆಯಲಾಗಿದೆ. ೧೯,೦೩,೬೯೬ ರೂ.ಮೌಲ್ಯದ ೪೫೮೦೭ ಸಾಮಗ್ರಿಗಳನ್ನು ಜಪ್ತು ಮಾಡಲಾಗಿದೆ. ಫ್ಲೆöÊಯಿಂಗ್ ಸ್ಕಾ÷್ವಡ್‌ಗಳಿಂದ ೩೩, ಪೊಲೀಸ್ ಇಲಾಖೆಯಿಂದ ೯ ಮತ್ತು ಅಬಕಾರಿ ಇಲಾಖೆಯಿಂದ ೪೬ ಪ್ರಕರಣಗಳು ದಾಖಲಾಗಿವೆ.
ಕೊಪ್ಪಳ ಜಿಲ್ಲೆಯ ೦೫ ವಿಧಾನಸಭಾ ಕ್ಷೇತ್ರಗಳಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ಹಿತದೃಷ್ಟಿಯಿಂದ ಮತ್ತು ಮುಕ್ತ, ಶಾಂತ ಹಾಗೂ ನ್ಯಾಯಸಮ್ಮತ ಚುನಾವಣೆಗಳನ್ನು ನಡೆಸಲು ಮೇ ೦೮ರ ಸಂಜೆ ೦೫ ಗಂಟೆಯಿಂದ ಮೇ ೧೦ರ ರಾತ್ರಿ ೧೧ ಗಂಟೆಯವರೆಗೆ ಜಿಲ್ಲೆಯಾದ್ಯಂತ ಎಲ್ಲಾ ತರಹದ ಮದ್ಯೆ ತಯಾರಿಕೆ, ಮಾರಾಟ, ಸಂಗ್ರಹಣೆ ಹಾಗೂ ಸಾಗಣೆ ನಿರ್ಬಂಧಿಸಲಾಗಿದೆ.
ಸಿವಿಜಿಲ್‌ನಲ್ಲಿ ಒಟ್ಟು ೪೫೯ ಪ್ರಕರಣಗಳನ್ನು ವಿಲೇ ಮಾಡಲಾಗಿದೆ. ಮಸ್ಟರಿಂಗ್ ಮತ್ತು ಡಿ ಮಸ್ಟರಿಂಗ್ ಕಾರ್ಯವನ್ನು ಆಯಾ ವಿಧಾನಸಭಾ ಕ್ಷೇತ್ರಗಳಲ್ಲಿ ಕೈಗೊಳ್ಳಲಾಗುತ್ತಿದ್ದು, ಚುನಾವಣಾಧಿಕಾರಿಗಳು ಎಲ್ಲಾ ಅಗತ್ಯ ವ್ಯವಸ್ಥೆಗಳನ್ನು ಮಾಡಿಕೊಂಡಿರುತ್ತಾರೆ.
ಮೇ ೧೩ರಂದು ಮತ ಎಣಿಕೆಯು ಗವಿಸಿದ್ಧೇಶ್ವರ ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯದಲ್ಲಿ ನಡೆಯಲಿದ್ದು, ಮತಚಲಾವಣೆಗೊಂಡ ಮತಯಂತ್ರಗಳನ್ನು ಇರಿಸಲಾಗುವ ಭದ್ರತಾ ಕೊಠಡಿಗಳಿಗೆ ೦೩ ಹಂತದ ಭದ್ರತಾ ವ್ಯವಸ್ಥೆ ಕೈಗೊಳ್ಳಲಾಗುತ್ತದೆ ಎಂದು ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಾದ ರಾಹುಲ್ ರತ್ನಂ ಪಾಂಡೆಯ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳಾದ ಯಶೋಧಾ ವಂಟಗೋಡಿ, ಅಪರ ಜಿಲ್ಲಾಧಿಕಾರಿ ಸಾವಿತ್ರಿ ಬಿ ಕಡಿ ಉಪಸ್ಥಿತರಿದ್ದರು.


Leave a Reply