ಬೆಳಗಾವಿ . ಆ ೧೧: ಜೈನ್ ಇಂಟರ್‌ನ್ಯಾಶನಲ್ ಟ್ರೇಡ್ ಆರ್ಗನೈಸೇಶನ್ ಜಿತೋ ಬೆಳಗಾವಿ ವಿಭಾಘ ಡ್ರಗ್ ಕಂಟ್ರೋಲ್ ಡಿಪಾರ್ಟ್ಮೆಂಟ್, ಬೆಳಗಾವಿ ಇವರ ಸಹಯೋಗದಲ್ಲಿ ೭೭ನೇ ಸ್ವಾತಂತ್ರೊö್ಯÃತ್ಸವದ ಅಂಗವಾಗಿ ಇದೆ ಆಗಸ್ಟ ೧೫ ರಂದು ಬೆಳಗಾವಿ ಹಿಂದವಾಡಿಯಲ್ಲಿರುವ ಮಹಾವೀರ ಭವನದಲ್ಲಿ ಬೆಳಿಗ್ಗೆ ೮ ಗಂಟೆಯಿಂದ ಮಧ್ಯಾಹ್ನ ೨ ಗಂಟೆಯವರೆಗೆ ಬೃಹತ್ತ ರಕ್ತದಾನ ಶಿಬಿರವನ್ನು ಹಮ್ಮಿಕೊಳ್ಳಲಾಗಿದೆ ಎಂದು ಜಿತೋ ಅಧ್ಯಕ್ಷ ಮುಕೇಶ ಪೋರವಾಲ ಅವರು ಇಂದಿಲ್ಲಿ ಹೇಳಿದರು.
ಬೆಳಗಾವಿಯಲ್ಲಿಂದು ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಳೆದ ಮೂರು ವರ್ಷಗಳಿಂದ ಜಿತೋ ಸಂಸ್ಥೆಯ ವತಿಯಿಂದ ರಕ್ತದಾನ ಶಿಬಿರವನ್ನು ಆಯೋಜಿಸುತ್ತ ಬಂದಿದ್ದು, ಎಲ್ಲ ಶಿಬಿರಗಳನ್ನು ಅತ್ಯಂತ ಯಶಸ್ವಿಯಾಗಿ ನಡೆಸಲಾಗಿದೆ. ವಿವಿಧ ಸಂಸ್ಥೆಗಳು, ಸಾಮಾಜಿಕ ಸೇವಾ ಸಂಸ್ಥೆಗಳು, ಉದ್ದಿಮೆ ಸಂಸ್ಥೆಗಳು ಸೇರಿದಂತೆ ಇನ್ನಿತರ ಸಂಸ್ಥೆಗಳ ಜೊತೆಯಲ್ಲಿ ಮತ್ತು ಅವರ ಸಹಯೋಗದಲ್ಲಿ ಈ ರಕ್ತದಾನ ಶಿಬಿರವನ್ನು ನಡೆಸಲಾಗುತ್ತಿದೆ ಎಂದು ಅವರು ತಿಳಿಸಿದರು.
ಆಗಸ್ಟ ೧೫ ರಂದು ನಡೆಯಲಿರುವ ಈ ಶಿಬಿರದಲ್ಲಿ ಕೆ.ಎಲ್. ಇ. ಬ್ಲಡ್ ಬ್ಯಾಂಕ್, ಬಿಮ್ಸ್ ಬ್ಲಡ್ ಬ್ಯಾಂಕ್, ಮಹಾವೀರ ಬ್ಲಡ್ ಬ್ಯಾಂಕ್, ಬೆಳಗಾವಿ ಬ್ಲಡ್ ಬ್ಯಾಂಕ್ ಭಾಗವಹಿಸಲಿದ್ದು, ಈ ಸಂಸ್ಥೆಗಳು ರಕ್ತವನ್ನು ಶೇಖರಸಲಿವೆ. ಅಪಾತ್ತ್ಕಾಲಿನಲ್ಲಿ ರಕ್ತದ ಅವಶ್ಯಕತೆವಿದ್ದಲ್ಲಿ ಅಂತಹ ವ್ಯಕ್ತಿಗಳಿಗೆ ರಕ್ತವನ್ನು ಒದಗಿಸುವ ಯೋಜನೆಯನ್ನು ಹಾಕಿಕೊಳ್ಳಲಾಗಿದೆ ಎಂದು ಅವರು ತಿಳಿಸಿದರು.
ಇದೇ ಸಂದರ್ಭದಲ್ಲಿ ಮಾತನಾಡಿದ ಜಿತೋ ಆರೊಗ್ಯ ರಕ್ಷಣೆ ವಿಭಾಗದ ಸಂಯೋಜಕ ಹರ್ಷವರ್ಧನ ಇಂಚಲ ಅವರು ಯುವ ಜನತೆ ರಕ್ತದಾನ ಮಾಡಲು ಮುಂದಾಗಬೇಕು. ಓರ್ವ ವ್ಯಕ್ತಿ ರಕ್ತದಾನ ಮಾಡಿದ್ದಲ್ಲಿ ಮೂರು ಜನರ ಪ್ರಾಣವನ್ನು ಉಳಿಸಬಹುದಾಗಿದೆ. ಈ ಬೃಹತ್ತ ರಕ್ತದಾನ ಶಿಬಿರದಲ್ಲಿ ಯಾರು ರಕ್ತದಾನ ಮಾಡಿರುತ್ತಾರೋ ಅಂತಹ ದಾನಿಗಳಿಗೆ ಕೃತಜ್ಞತೆ ರೂಪದಲ್ಲಿ ಅವರಿಗೆ ರೂ. ೧ ಲಕ್ಷ ರೂಗಳವರೆಗೆ ೧ ವರ್ಷದ ಅವಧಿಗಾಗಿ ದ ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಂ. ಲಿಮಿಟೆಡ್ ಜನತಾ ಪರ್ಸನಲ್ ಆ್ಯಕ್ಸಿಡೆಂಟ್ (ಅಪಘಾತ ವಿಮೆ ) ಪಾಲಿಸಿ ನೀಡಲಾಗುವುದೆಂದು ಅವರು ತಿಳಿಸಿದರು.
ಒಂದು ಯೂನಿಟ್ ರಕ್ತವು ೩ ಜೀವಗಳನ್ನು ಉಳಿಸುತ್ತದೆ ಮತ್ತು ರಕ್ತದ ಅವಶ್ಯಕತೆ ಯಾವಾಗಲೂ ಇರುತ್ತದೆ. ಆದ್ದರಿಂದ ನಾವು ಬೆಳಗಾವಿ ಜಿಲ್ಲೆಯ ನಾಗರಿಕರು ಈ ಬೃಹತ್ ರಕ್ತದಾನ ಶಿಬಿರದಲ್ಲಿ ಸ್ವಯಂಪ್ರೇರಣೆಯಿಂದ ಮುಂದೆ ಬಂದು ರಕ್ತದಾನ ಮಾಡುವ ಮೂಲಕ ಈ ಶಿಬಿರವನ್ನು ಯಶಸ್ವಿಗೊಳಿಸಬೇಕೆಂದು ಅವರು ಮನವಿ ಮಾಡಿದರು.
ಇದೇ ಸಂದರ್ಭದಲ್ಲಿ ಜಿತೋ ಅಪೆಕ್ಸ ಸಂಯೋಜಕ ವಿಕ್ರಮ ಜೈನ, ಕೆ.ಎಲ್.ಇ. ಬ್ಲಡ್ ಬ್ಯಾಂಕ ಅಧಿಕಾರಿ ಶ್ರೀಕಾಂತ ವಿರಗಿ ಅವರು ಮಾತನಾಡಿದರು. ಪತ್ರಿಕಾಗೋಷ್ಟಿಯಲ್ಲಿ ನಿತಿನ್ ಪೋರವಾಲ ಮುಖ್ಯ ಕಾರ್ಯದರ್ಶಿ ಜಿತೋ, ಕುಂತಿನಾಥ ಕಲಮನಿ, ಅಭಯ ಆದಿಮನಿ ಸದಸ್ಯರು ಜಿತೋ ಬೆಳಗಾವಿ ಸೇರಿದಂತೆ ಮೊದಲಾದವರು ಉಪಸ್ಥಿತರಿದ್ದರು.
Gadi Kannadiga > Local News > ಪ್ರೆಸ್ ನೋಟ್ ಆಗಸ್ಟ ೧೫ ರಂದು ಬೃಹತ್ತ ರಕ್ತದಾನ ಶಿಬಿರ
ಪ್ರೆಸ್ ನೋಟ್ ಆಗಸ್ಟ ೧೫ ರಂದು ಬೃಹತ್ತ ರಕ್ತದಾನ ಶಿಬಿರ
Suresh11/08/2023
posted on

More important news
ಪ್ಲಾಸ್ಟಿಕ್ ಬಳಕೆ ಮಾಡಿದರೆ ಕ್ರಮ
30/09/2023
ಬಿತ್ತನೆ ಬೀಜ ವಿತರಣೆಗೆ ಚಾಲನೆ
30/09/2023
ಸುಮಧುರ ಚಿತ್ರಗೀತೆಗಳ ಕಾರ್ಯಕ್ರಮ
29/09/2023