ಬೆಳಗಾವಿ : ಪಂಜಾಬ್ ಘಟನೆ ಹಿನ್ನೆಲೆ ಪ್ರಧಾನಿ ನರೇಂದ್ರ ಮೋದಿ ಅವರ ಆರೋಗ್ಯ, ಶ್ರೆಯಸ್ಸು ಚೆನ್ನಾಗಿರಲೆಂದು ಬೆಳಗಾವಿಯ ಪ್ರಸಿದ್ಧ ಕಪಿಲೇಶ್ವರ ದೇವಸ್ಥಾನದಲ್ಲಿ ಕಲ್ಪವೃಕ್ಷ ಮಹಿಳಾ ಸಂಘಟನೆ ವತಿಯಿಂದ ಇಂದು ಮಹಾಮೃತ್ಯುಂಜಯ ಮಂತ್ರ ಜಪ ಹೋಮ ಮಾಡಲಾಯಿತು.
ಎರಡು ದಿನಗಳ ಹಿಂದೆ ಪಂಜಾಬ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಮೇಲೆ ದುರ್ವರ್ತನೆಯಾಗಿದ್ದು ಒಬ್ಬ ಬಲಿಷ್ಟ ಆಡಳಿತಾಧಿಕಾರಿ ಮತ್ತು ಅಂತರಾಷ್ಟ್ರೀಯ ಗಮನವನ್ನು ಭರತದತ್ತ ಸೆಳೆದ ಹೆಮ್ಮೆಯ ಪ್ರಧಾನಿ ಆಯುಷ್ಯ, ಆರೋಗ್ಯ ಚೆನ್ನಾಗಿರಲೆಂದು ಕಲ್ಪವೃಕ್ಷ ಮಹಿಳಾ ಸಂಘಟನೆ ಸದಸ್ಯರು ಶಿವನಿಗೆ ಮಂಗಳಾರುತಿ ಮಾಡಿ ಪ್ರಾರ್ಥಿಸಿದರು.
ಬಿಜೆಪಿ ನಾಯಕಿ ಜ್ಯೋತಿ ಶೆಟ್ಟಿ ನೇತೃತ್ವದಲ್ಲಿ ಕಾರ್ಯಕ್ರಮ ನಡೆಯಿತು. ಕಲ್ಪವೃಕ್ಷ ಮಹಿಳಾ ಸಂಘಟನೆಯ ಉಪಾಧ್ಯಕ್ಷೆ ಪುಷ್ಪಾ, ಕಾರ್ಯದರ್ಶಿ ಕವಿತಾ ಪೂಜಾರ ಉಪಸ್ಥಿತರಿದ್ದರು.