This is the title of the web page
This is the title of the web page

Please assign a menu to the primary menu location under menu

State

ಪ್ರಧಾನಮಂತ್ರಿಗಳ ಕಿರು ಆಹಾರ ಸಂಸ್ಕರಣ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ ಯೋಜನೆ


ಗದಗ ಮಾರ್ಚ ೨೩: ಆತ್ಮನಿರ್ಭರ ಭಾರತ ಅಭಿಯಾನದ ಅಂಗವಾಗಿ ಭಾರತ ಸರ್ಕಾರವು ಪ್ರಧಾನಮಂತ್ರಿಗಳ ಕಿರು ಆಹಾರ ಸಂಸ್ಕರಣ ಉದ್ದಿಮೆಗಳ ನಿಯಮಬದ್ಧಗೊಳಿಸುವಿಕೆ ಯೋಜನೆ ಜಾರಿಗೆ ತಂದಿದೆ. ಕೃಷಿ ಉತ್ಪನ್ನಗಳ ಮೌಲ್ಯವರ್ಧನೆಯಿಂದ ರೈತರ ಆದಾಯ ದ್ವಿಗುಣಗೊಳಿಸಲು ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷಿ ಯೋಜನೆ ಜಾರಿಗೆ ಬಂದಿದ್ದು, ಕೇಂದ್ರ ಸರ್ಕಾರದ ಶೇ. ೩೫ ಹಾಗೂ ರಾಜ್ಯ ಸರ್ಕಾರದ ಶೇ. ೧೫ ಸಹಾಯಧನ ಒಟ್ಟು ಶೇ.೫೦ ಸಹಾಯಧನ ಬ್ಯಾಂಕ ಮೂಲಕ ನೀಡಲು ಅವಕಾಶವಿರುತ್ತದೆ. ವಿಸû್ರತ ಯೋಜನಾ ವರದಿ ತಯಾರಿಸಿ ಶೇ. ೫೦ರಷ್ಟು ಸಹಾಯಧನ ಮತ್ತು ಉಳಿದ ಶೇ. ೫೦ ಅನುದಾನ ಬ್ಯಾಂಕ ಸಾಲ ದೊರೆಯಲಿದ್ದು, ಜಿಲ್ಲೆಯ ರೈತರು ಯೋಜನೆಯ ಸೌಲಭ್ಯ ಪಡೆಯಬಹುದಾಗಿದೆ.
ಈ ಯೋಜನೆಯಡಿ ಬ್ಯಾಡಗಿ ಮೆಣಸಿನಕಾಯಿ, ಹಿಟ್ಟಿನ ಗಿರಣಿಗಳು, ಎಣ್ಣೆ ಗಾಣಗಳು, ಮಿನಿ ದಾಲ್ ಮಿಲ್, ಅರಿಷಿಣ ಸಂಸ್ಕರಣೆ, ಮಸಾಲಾ ಪದಾರ್ಥಗಳು, ಸಿರಿಧಾನ್ಯಗಳಿಂದ ಉಪ ಉತ್ಪನ್ನಗಳ ತಯಾರಿಕೆ, ಶ್ಯಾವಿಗೆ, ರವಾ, ನೂಡಲ್ಸ್ ತಯಾರಿಕೆ ಹಾಗೂ ಇತರೆ ಸಂಸ್ಕರಣಾ ಘಟಕಗಳಿಗೆ ಬೆಳೆಯ ವರ್ಗಿಕರಣ, ಶ್ರೇಣಿಕರಣ, ಬ್ರಾö್ಯಂಡಿಂಗ್, ಲೇಬಲಿಂಗ್ ಮಾರುಕಟ್ಟೆಯ ಬೆಂಬಲ ಮತ್ತು ರಪ್ತಿಗೆ ಪ್ರೋತ್ಸಾಹ ನೀಡುವ ಮೂಲಕ ಅಂತಹ ವ್ಯಕ್ತಿ, ಸ್ವ ಸಹಾಯ ಸಂಘ, ರೈತ ಉತ್ಪಾದಕರ ಸಂಸ್ಥೆಗಳನ್ನು ಉದ್ಯಮೆದಾರರಾಗಿ ರೂಪಿಸಲು ಯೋಜಿಸಲಾಗಿದೆ.
ಇದರ ಪ್ರಯೋಜನವನ್ನು ಪಡೆಯಲು hಣಣಠಿ://ಠಿmಜಿme.moಜಿಠಿi.gov.iಟಿ ವೆಬ್‌ಸೈಟ್‌ನಲ್ಲಿ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಸಹಾಯಕ ಕೃಷಿ ನಿರ್ದೇಶಕರು ಶ್ರೀಮತಿ ಅನಸೂಯಾ ಪಾಟೀಲ (೮೨೭೭೯೩೧೪೨೫) ಹಾಗೂ ಸಂಪನ್ಮೂಲ ವ್ಯಕ್ತಿಗಳಾದ ಶ್ರೀನಿವಾಸ ರಾಠೋಡ (೯೬೮೬೬೪೧೧೩೪), ಮಂಜುನಾಥ ಭರಮಗೌಡರ (೯೪೪೯೩೩೯೫೩೧), ಮಹಾದೇವಾ ಭೈರವಾಡೆ (೯೯೮೬೯೬೮೦೨೩), ಗೌರಿಶಂಕರ ಸಜ್ಜನ (೯೯೮೬೭೮೯೧೬೨), ಪ್ರಭಾಕರ ಹೂಗಾರ (೯೬೨೦೬೨೪೮೩೮), ಸಂತೋಷ ಜವಳಿ (೯೨೪೧೩೩೩೫೫೫) ಮಂಜುನಾಥ ಬೀಳಗಿ (೯೪೮೦೧೮೦೦೨೩) ಹಾಗೂ ಮಹಾಬಳೇಶ್ವರ (೯೪೪೯೮೯೫೩೦೦), ಪ್ರಕಾಶ ಕೊಣ್ಣೂರು (೯೯೦೧೫೫೩೧೯೦), ಬಸಲಿಂಗಪ್ಪ ಹಾಲವರ (೯೯೮೦೦೯೪೬೪೩), ಶ್ರೀಮತಿ ಮಂಗಳಾ ನಿಲಗುಂದ (೮೯೭೧೪೦೭೨೪೧), ದೇವರಾಜ ಅಚಲಕರ್ (೮೦೯೫೫೨೭೦೩೨) ಹಾಗೂ ಚನ್ನಬಸಪ್ಪ (೯೧೮೭೯೨೩೭೪೭೧೪) ಇವರನ್ನು ಸಂಪರ್ಕಿಸಬಹುದಾಗಿದೆ. ಹೆಚ್ಚಿನ ವಿವರಗಳಿಗಾಗಿ ಸಮೀಪದ ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ ಹಾಗೂ ರೈತ ಸಂಪರ್ಕ ಕೇಂದ್ರಗಳಿಗೆ ಸಂಪರ್ಕಿಸಬಹುದಾಗಿದೆ.


Leave a Reply