ಬೆಳಗಾವಿ, ನ.೨೧ : ಸರ್ಕಾರಿ ಪದವಿ ಪೂರ್ವ ಕಾಲೇಜು ಹೀರೆಬಾಗೆವಾಡಿಯಲ್ಲಿ ಭಾರತ ರತ್ನ ಡಾ. ಬಿ.ಆರ್. ಅಂಬೇಡ್ಕರ ಓದು ಕಾರ್ಯಕ್ರಮವು ಗುರುವಾರ (ನ.೨೪) ಅರ್ಥಪೂರ್ಣವಾಗಿ ಜರುಗಿತು.ಪ್ರಾಸ್ತವಿಕವಾಗಿ ವಿದ್ಯಾವತಿ ಎಚ್.ಬಿ ಉಪ ನಿರ್ದೇಶಕರು ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಬೆಳಗಾವಿ ಇವರು ಇಲಾಖೆಯ ಯೋಜನೆ ಕುರಿತು ಮಾತನಾಡಿದರು, ಉಧ್ಘಾಟಕರಾಗಿ ಭಾರತಿ ಮಠದ ಸಾಹಿತಿಗಳು ಬೆಳಗಾವಿ ಇವರು ಸಮಾಜದಲ್ಲಿ ಆತ್ಮ ಗೌರವದಿಂದ ಬದುಕಲು ವಿದ್ಯಾರ್ಥಿಗಳಿಗೆ ಕರೆ ನೀಡದರು.ಅತಿಥಿ ಉಪನ್ಯಾಸರಾಗಿ ಪ್ರೊ. ಬಿ.ಎಸ್. ಅಕ್ಕಣ್ಣವರ ಇವರು ಡಾ. ಬಿ.ಆರ್. ಅಂಬೇಡ್ಕರ ವಿಚಾರಧಾರೆ ಕುರಿತು ಉಪನ್ಯಾಸ ನೀಡಿದರು.ಡಿ. ಎಮ್ ಹೀರೆಮಠ ಪ್ರಾಚಾರ್ಯರು ಸರ್ಕಾರಿ ಪದವಿ ಪೂರ್ವ ಕಾಲೇಜು ಹೀರೆಬಾಗೆವಾಡಿ ಇವರು ಅಧ್ಯಕ್ಷತೆ ಸ್ಥಾನ ಅಲಂಕರಿಸಿದ್ದರು. ವಿವಿಧ ಸ್ಪರ್ಧೆಗಳಲ್ಲಿ ಕೆಳಕಂಡ ವಿದ್ಯಾರ್ಥಿಗಳಿಗೆ ಇಲಾಖೆಯಿಂದ ಪುಸ್ತಕ ರೂಪದಲ್ಲಿ ಬಹುಮಾನ ವಿತರಿಸಲಾಯಿತು. ಭಾಷಣ ವಿಷಯದಲ್ಲಿ ಪ್ರಥಮ ಸ್ಥಾನ ಸಂಪದಾ ಕುಡಚಿ, ಧ್ವೀತಿಯ ಸ್ಥಾನ ಕವನಾ ಅರಳಿಕಟ್ಟಿ, ತೃತಿಯ ಸ್ಥಾನ ಸುಪ್ರಿಯಾ ಸಾವಳಗಿ, ನಾಲ್ಕನೇ ಸ್ಥಾನ ಐಶ್ವರ್ಯ ಘಡಾದ ಹಾಗೂ ಗಾಯನ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಸ್ಯೌಮಾ ಮಠಪತಿ, ಧ್ವೀತಿಯ ಸ್ಥಾನ ಪವಿತ್ರಾ ಇಟಗಿ, ತೃತಿಯ ಸ್ಥಾನ ಕಾವೇರಿ ಹರಿಜನ, ನಾಲ್ಕನೇ ಸ್ಥಾನ ಗುರುರಾಜ ನಾವಲಗಿಮಠ ಪಡೆದುಕೊಂಡರು. ಅದೇ ರೀತಿಯಲ್ಲಿ ಪ್ರಭಂದ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ನೇತ್ರಾ ಹುಲಿಕವಿ, ಧ್ವೀತಿಯ ಸ್ಥಾನ ಪಲ್ಲವಿ ಉದೇಶಿಮಠ ತೃತಿಯ ಸ್ಥಾನ ವಿಜಯಲಕ್ಷ್ಮಿ ಕುಡಚಿ ನಾಲ್ಕನೇ ಸ್ಥಾನ ಜ್ಯೋತಿ ತಾಳೋಜಿ ಗಳಿಸಿದರು. ರಸಪ್ರಶ್ನೆ ಸ್ಪರ್ಧೆಯಲ್ಲಿ ಶ್ರೇಯಾ ಬೆನಚಿನಮರ್ಡಿ ಪ್ರಥಮ ಸ್ಥಾನ ಪಡೆದು ಕೊಂಡರು. ಮೇಘಾ ಹುಲಿಕವಿ, ಲಲಿತಾ ಹುಬ್ಬಳ್ಳಿ, ಸಂಪದಾ ಕುಡಚಿ ಸೇಹಾ ಮೇಲಿನಮನಿ, ನೇತ್ರಾ ಹುಲಿಕವಿ ಪಲ್ಲವಿ ಉದೇಶಿಮಠ, ವಿಜ ಯಲಕ್ಷ್ಮಿ ಕುಡಚಿ, ಹನಮಂತ ಹುಜರತ್ತಿ, ಪೂಜಾ ಬೂದಿಗೊಪ್ಪ, ಕಲ್ಲ ಯ್ಯಾ ಹಾಲಗಿಮರ್ಡಿ, ಚೈತ್ರಾ ಪಟ್ಯಾಳ ಸರ್ಧೆಯಲ್ಲಿ ಭಾಗವಹಿಸಿದ್ದರು.
Gadi Kannadiga > Local News > ಡಾ. ಬಿ.ಆರ್. ಅಂಬೇಡ್ಕರ ಓದು ಕಾರ್ಯಕ್ರಮ: ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ
ಡಾ. ಬಿ.ಆರ್. ಅಂಬೇಡ್ಕರ ಓದು ಕಾರ್ಯಕ್ರಮ: ವಿದ್ಯಾರ್ಥಿಗಳಿಗೆ ಬಹುಮಾನ ವಿತರಣೆ
Suresh25/11/2022
posted on