ಕೊಪ್ಪಳ ಸೆಪ್ಟೆಂಬರ್ ೦೭ : ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಕೊಪ್ಪಳ ಜಿಲ್ಲಾ ಸಂಸ್ಥೆಯಿಂದ ಯಲಬುರ್ಗಾ ತಾಲೂಕ ಮಟ್ಟದ ದೇಶಭಕ್ತಿ ಗೀತೆಗಾನ ಸ್ಪರ್ಧೆಯ ಬಹುಮಾನ ವಿತರಣೆ ಕಾರ್ಯಕ್ರಮವು ಯಲಬುರ್ಗಾದ ಶ್ರೀ ವಿದ್ಯಾಸಾಗರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೆಪ್ಟೆಂಬರ್ ೦೭ರಂದು ನಡೆಯಿತು.
ಶಾಲೆಯ ಮುಖ್ಯ ಗುರುಗಳಾದ ಬಸವರಾಜ್ ಜಾರಗಡ್ಡಿ ಮಠ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಯಲಬುರ್ಗಾ ಅಕ್ಷರ ದಾಸೋಹದ ಸಹ ನಿರ್ದೇಶಕರಾದ ಎಫ್ ಎಂ ಕಳ್ಳಿ ಅವರು ಸ್ಪರ್ಧೆಯಲ್ಲಿ ಭಾಗವಹಿಸಿದ ಎಲ್ಲ ವಿದ್ಯಾರ್ಥಿಗಳಿಗೆ ಹಾಗು ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳಿಗೆ ಬಹುಮಾನ, ಪ್ರಶಸ್ತಿ ಪತ್ರಗಳನ್ನು ನೀಡಿ, ಶುಭ ಕೋರಿದರು.
ಕಾರ್ಯಕ್ರಮದಲ್ಲಿ ಸ್ಕೌಟ್ ಜಿಲ್ಲಾ ತರಬೇತಿ ಆಯುಕ್ತರಾದ ಶ್ರೀಕಾಂತ್ ಮಾಸ್ ಗಟ್ಟಿ, ಸ್ಕೌಟ್ ರಾಜ್ಯ ಪ್ರತಿನಿಧಿಗಳಾದ ವೀರನಗೌಡ ಪೊಲೀಸ್ ಪಾಟೀಲ್, ತಾಲೂಕ ಕಾರ್ಯದರ್ಶಿಗಳಾದ ವೀರಪ್ಪ ಗಾಣಿಗೇರ ಸೇರಿದಂತೆ ಸ್ಥಳೀಯ ಸಂಸ್ಥೆಯ ಸರ್ವ ಪದಾಧಿಕಾರಿಗಳು, ಶಾಲಾ ಶಿಕ್ಷಕರು ಕಾರ್ಯಕ್ರಮಕ್ಕೆ ಉಪಸ್ಥಿತರಿದ್ದರು.
ಶಿಕ್ಷಕರಾದ ಮಲಯ್ಯ ಪುರಾಣಿಕ ಕಾರ್ಯಕ್ರಮ ನಿರೂಪಿಸಿದರು. ವೀರಪ್ಪ ಗಾಣಿಗೆರ ಅವರು ಸ್ವಾಗತಿಸಿದರು. ವೀರನಗೌಡ ಪೋಲಿಸ್ ಪಾಟೀಲ ಅವರು ವಂದಿಸಿದರು. ಕಾರ್ಯಕ್ರಮದಲ್ಲಿ ವಿವಿಧ ಶಾಲೆಯ ಸ್ಕೌಟ್ಸ್ ಮತ್ತು ಗೈಡ್ಸ್ ವಿದ್ಯಾರ್ಥಿಗಳು ಕಬ್ ಮತ್ತು ಬುಲ್ ಬುಲ್ಸ್ ವಿದ್ಯಾರ್ಥಿಗಳು ಭಾಗವಹಿಸಿ, ತಾಲೂಕ ಮಟ್ಟದ ಗೀತೆಗಾನ ಸ್ಪರ್ಧೆಯನ್ನು ಯಶಸ್ವಿಗೊಳಿಸಿದರು.
Gadi Kannadiga > State > ಯಲಬುರ್ಗಾ: ದೇಶಭಕ್ತಿ ಗೀತೆಗಾನ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ
ಯಲಬುರ್ಗಾ: ದೇಶಭಕ್ತಿ ಗೀತೆಗಾನ ಸ್ಪರ್ಧೆ ವಿಜೇತರಿಗೆ ಬಹುಮಾನ ವಿತರಣೆ
Suresh07/09/2023
posted on
