ಬೆಳಗಾವಿ, ಜ.೧೩ : ಬೆಳಗಾವಿಯ ಸರ್ಕಾರಿ ಪಾಲಿಟೆಕ್ನಿಕ್ ಯಾಂತ್ರಿಕ ವಿಭಾಗದ ವಿದ್ಯಾರ್ಥಿಗಳಾದ ಭೂಮಿಕಾ ಬೆಣ್ಣಿ ಹಾಗೂ ಪವನ ಜಗದೀಶ ಅಮಾಸಿ ಇವರು ವಿಜಯನಗರ ಜಿಲ್ಲೆಯ ಹರಪ್ಪನಹಳ್ಳಿಯಲ್ಲಿ ಇತ್ತೀಚಿಗೆ ಜರುಗಿದ ೩ನೇ ರಾಜ್ಯಮಟ್ಟದ “ISಖಿಇ Sಣuಜeಟಿಣ ಅoಟಿveಟಿಣioಟಿ -೨೦೨೨” ರಲ್ಲಿ ದ್ವಿತೀಯ ಬಹುಮಾನವನ್ನು ಪಡೆದಿರುತ್ತಾರೆ. ಇದೇ ಸ್ಪರ್ಧೆಯಲ್ಲಿ ಭಾಗವಹಿಸಿದ ಯಾಂತ್ರಿಕ ವಿಭಾಗದ ವಿದ್ಯಾರ್ಥಿಗಳಾದ ರಾಘವ ದೇಸಾಯಿ ಹಾಗೂ ನಿಖಿಲ್ ಎಸ್ ನಾಯಕ ಇವರು ತೃತೀಯ ಬಹುಮಾನವನ್ನು ಪಡೆದಿರುತ್ತಾರೆ.
ನಗರದ ಭರತೇಶ ಪಾಲಿಟೆಕ್ನಿಕ್‌ನಲ್ಲಿ ಜರುಗಿದ ಜಿಲ್ಲಾಮಟ್ಟದ ISಖಿಇ ಅoಟಿveಟಿಣioಟಿನಲ್ಲಿಯೂ ಸಹ ಸರ್ಕಾರಿ ಪಾಲಿಟೆಕ್ನಿಕ್‌ನ ವಿದ್ಯಾರ್ಥಿಗಳು ಭಾಗವಹಿಸಿ ವಿದ್ಯುತ್ ವಿಭಾಗದ ವಿದ್ಯಾರ್ಥಿ ಅಚಲ ಚೌಧರಿ ಹಾಗೂ ಶುಭಂ ಬಿರಾದಾರ ದ್ವಿತೀಯ ಬಹುಮಾನ ಹಾಗೂ ಯಾಂತ್ರಿಕ ವಿಭಾಗದ ವಿದ್ಯಾರ್ಥಿ ಮಂಜುನಾಥ ಪಾಟೀಲ ಹಾಗೂ ಮಂಜು ಚಿಕ್ಕಲದಿನ್ನಿ ಇವರು ಸಮಾಧಾನಕರ ಬಹುಮಾನ ಪಡೆದಿರುತ್ತಾರೆ.
ಪ್ರಬಂಧ ಮಂಡಿಸುವ ವಿಷಯವಾದ “Sಛಿieಟಿಛಿe & ಖಿeಛಿhಟಿoಟogಥಿ ಜಿoಡಿ beಣಣeಡಿ ಟiviಟಿg” ನಲ್ಲಿ ಬಹುಮಾನ ಪಡೆದ ವಿದ್ಯಾರ್ಥಿಗಳನ್ನು ಸಂಸ್ಥೆಯ ಪ್ರಾಚರ್ಯರಾದ ಹೆಚ್.ಆರ್.ಪ್ರಸನ್ನ ಹಾಗೂ ಯಾಂತ್ರಿಕ ವಿಭಾಗದ ಮುಖ್ಯಸ್ಥರಾದ ಶ್ರೀ ವಾಸುದೇವ ಕೆ ಅಪ್ಪಾಜಿಗೋಳ ಹಾಗೂ ವಿಭಾಗದ ಎಲ್ಲ ಸಿಬ್ಬಂದಿ ವರ್ಗದವರು ಅಭಿನಂದಿಸಿದ್ದಾರೆ.
Gadi Kannadiga > Local News > ಬೆಳಗಾವಿ ಸರ್ಕಾರಿ ಪಾಲಿಟೆಕ್ನಿಕ್ ವಿದ್ಯಾರ್ಥಿಗಳಿಗೆ ಬಹುಮಾನ