This is the title of the web page
This is the title of the web page

Please assign a menu to the primary menu location under menu

Local News

ಸಂಖ್ಯಾಶಾಸ್ತ್ರಕ್ಕೆ ಪ್ರೊ. ಪ್ರಶಂತಚಂದ್ರ ಕೊಡುಗೆ ಅಪಾರ: ಪ್ರಕಾಶ ವಡ್ಡರ್


ಬೆಳಗಾವಿ,ಜೂನ್೨೯: ಪ್ರೊ.ಪ್ರಶಾಂತಚಂದ್ರ ಮಹಾಲೋನೋಬಿಸ್ ಇವರ ಜನ್ಮ ದಿನವನ್ನು ರಾಷ್ಟ್ರೀಯ ಸಾಂಖ್ಯಿಕ ದಿನ ಎಂದು ಆಚರಿಸಲಾಗುತ್ತಿದ್ದು ಸಾಂಖ್ಯಿಕ ಇಲಾಖೆಯು ತನ್ನದೆಯಾದ ಒಂದು ವೈಶಿಷ್ಠತೆಯನ್ನು ಹೊಂದಿದ್ದು ಇಲಾಖೆಯ ಸಿಬ್ಬಂದಿಯು ತಮ್ಮ ಹುದ್ದೆಗಳಿಗೆ ನಿಡಲಾದ ಕೆಲಸಗಳನ್ನು ದಕ್ಷತೆಯಿಂದ ನಿರ್ವಹಿಸಬೇಕು ಹಾಗೂ ದೂರದೃಷ್ಠಿ ಯೋಜನೆಗಳನ್ನು ತಯಾರಿಸಲು ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಳ್ಳಬೇಕೆಂದು ಜಿಲ್ಲಾ ಪಂಚಾಯತ ಯೋಜನಾಧಿಕಾರಿ ಪ್ರಕಾಶ ವಡ್ಡರ್ ಹೇಳಿದರು.
ಜಿಲ್ಲಾ ಪಂಚಾಯತ ಯೋಜನಾ ವಿಭಾಗದಲ್ಲಿ ಬುಧವಾರ(ಜೂನ್೨೯) “ರಾಷ್ಟ್ರೀಯ ಸಾಂಖ್ಯಿಕ ದಿನ” ವನ್ನು ಆಚರಿಸಲಾಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಯೋಜನಾಧಿಕಾರಿ ಪ್ರÀ್ರಕಾಶ ವಡ್ಡರ್ ಮಾತನಾಡಿದರು.
ಯೋಜನಾ ಅಂದಾಜು ಮತ್ತು ಮೌಲ್ಯ ಮಾಪನಾಧಿಕಾರಿ ಜಿ.ಪಿ.ಸುಂಕದ ಮಾತನಾಡಿ ಪ್ರೊ|| ಪ್ರಶಾಂತಚಂದ್ರ ಮಹಾಲೋನೋಬಿಸ್ ಅವರು ಸಂಖ್ಯಾಶಾಸ್ತ್ರಕ್ಕೆ ನೀಡಿದ ಅಪಾರವಾದ ಕೊಡುಗೆ ಹಾಗೂ ೨೦೨೨ರ ಸಾಂಖ್ಯಿಕ ದಿನಾಚರಣೆಯ ಧ್ಯೇಯ ವ್ಯಾಕ್ಯವಾದ “ಶಿಕ್ಷಣ, ಆರೋಗ್ಯ ಮತ್ತು ಪೌಷ್ಟಿಕತೆಯಲ್ಲಿ ಅಭಿವೃಧ್ಧಿ ಆಕಾಂಕ್ಷಿ ತಾಲೂಕುಗಳನ್ನು ಗುರುತಿಸಿ ಅಭಿವೃದ್ಧಿ ಪಡಿಸುವ” ಬಗ್ಗೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಪಿ.ಪಿ ದೇಶಪಾಂಡೆ, ಮಂಜುನಾಥ ದೊಡಮನಿ, ದಿವಾಕರ ಮಾನೆ, ಸಿ.ಎಮ್.ಚನ್ನಪಗೌಡರ್, ರಾಜಶೇಖರ ಕಡೆಮನಿ, ತಾಲೂಕು ಯೋಜನಾಧಿಕಾರಿಗಳು ಹಾಗೂ ಯೋಜನಾ ಶಾಖೆಯ ಸಿಬ್ಬಂದಿಗಳು ಹಾಜರಿದ್ದರು. ಸ.ಸಾಂ.ಅ ಎನ್.ಎಸ್ ಹೂಗಾರ ಕಾರ್ಯಕ್ರಮದ ನಿರೂಪಿಸಿದರು, .ಸ.ಸಾಂ.ಅ .ಸಂತೋಶ ಮುರನಾಳ ಅವರು ವಂದಿಸಿದರು.


Gadi Kannadiga

Leave a Reply