This is the title of the web page
This is the title of the web page

Please assign a menu to the primary menu location under menu

Local News

ಮೂಡಲಗಿ ಎಂ.ಇ.ಎಸ್ ಕಾಲೇಜಿನ ಪ್ರಾಚಾರ್ಯರಾಗಿ ಪ್ರೊ.ಅಣ್ಣಾರಾಯ್ ರಡ್ಡಿ ನೇಮಕ


ಮೂಡಲಗಿ; ಮೂಡಲಗಿ ಶಿಕ್ಷಣ ಸಂಸ್ಥೆಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ನೂತನ ಪ್ರಾಚಾರ್ಯರಾಗಿ ಕಾಲೇಜಿನ ಅರ್ಥಶಾಸ್ತ್ರ ವಿಭಾಗದ ಮುಖ್ಯಸ್ಥರಾದ ಪ್ರೊ.ಅಣ್ಣಾರಾಯ್ ರಡ್ಡಿ ನೇಮಕಗೊಂಡಿದ್ದರೆ.
ಮೂಡಲಗಿ ಶಿಕ್ಷಣ ಸಂಸ್ಥೆಯ ಚೇರಮನ್ನ ವಿಜಯಕುಮರ ಸೋನವಾಲಕರ, ಉಪಾಧ್ಯಕ್ಷ ಎಸ್.ಆರ್.ಸೋನವಾಲ್ಕರ, ನಿರ್ದೇಶಕರಾದ ವೀರಣ್ಣಾ ಹೊಸೂರ, ಆರ.ಪಿ.ಸೋನವಾಲ್ಕರ, ಬಿ.ಎಚ್.ಸೋನವಾಲ್ಕರ, ಪ್ರದೀಪ ಲಂಕೆಪ್ಪನವರ, ಅನೀಲ ಸತರಡ್ಡಿ, ವೆಂಕಟೇಶ ಸೋನವಾಲಕರ, ರವಿ ನಂದಗಾವ, ಅಜಪ್ಪ ಗಿರಡ್ಡಿ ಸೆರಿದಂತೆ ಆಡಳಿತ ಮಂಡಳಿ ಅನುಮೊದನೆ ಪ್ರಕಾರ ನೇಮಕವನ್ನು ಮಾಡಲಾಗಿದೆ.
ಪ್ರೊ.ಅಣ್ಣಾರಾಯ್ ರಡ್ಡಿ ಅವರು ಕಳೆದ ೩೩ ವರ್ಷಗಳಿಂದ ಅರ್ಥಶಾಸ್ತ್ರ ಪ್ರಾಧ್ಯಾಪಕರಾಗಿ ಮುಖ್ಯಸ್ಥರಾಗಿ, ಸ್ಕೌಟ್ ಗೈಡ್ಸನ ಅಧಿಕಾರಿಗಳಾಗಿ, ಎನ್.ಎಸ್.ಎಸ್ ಅಧಿಕಾರಿಗಳಾಗಿ ಪ್ರಾಮಾನಿಕ ಸೆವೆ ಸಲ್ಲಿಸಿದ ಅನುಭವ ಹೊಂದಿದ್ದಾರೆ
ಪ್ರಾಚಾರ್ಯರಾಗಿ ಅಧಿಕಾರ ಸ್ವೀಕರಿಸಿ ಮಾತನಾಡಿದ ಪ್ರೊ.ಅಣ್ಣಾರಾಯ್ ರಡ್ಡಿ ನನ್ನ ಪ್ರಾಚಾರ್ಯ ಸೇವಾ ಅವಧಿಯಲ್ಲಿ ಕಾಲೇಜಿನ ಆಡಳಿತ ಸೇರಿದಂತೆ ವಿದ್ಯಾರ್ಥಿಗಳ ಶ್ರೇಯೋಭಿವೃದ್ಧಿ ಪ್ರಾಧ್ಯಾಪಕ ಹಾಗೂ ಶಿಕ್ಷಕೇತರ ಸಿಬ್ಬಂದಿ ಯೋಗಕ್ಷೇಮ, ಆಡಳಿತ ಮಂಡಳಿ ವಿಶ್ವ ವಿದ್ಯಾಲಯ ಹಾಗೂ ಕಾಲೇಜು ಶಿಕ್ಷಣ ಇಲಾಖೆ ಯೊಂದಿಗೆ ಮಧುರವಾದ ಕೊಂಡಿಯಾಗಿ ಕಾರ್ಯ ಗೈಯುವದಾಗಿ ಭರವಸೆ ನೀಡಿದರು.
ಅಧಿಕಾರ ಹಸ್ತಾಂತರ ಸಮಾರಂಭದಲ್ಲಿ ಸಂಸ್ಥೆಯ ಉಪಾಧ್ಯಕ್ಷ ಎಸ್.ಆರ್.ಸೋನವಾಲ್ಕರ, ನಿವೃತ್ತ ಪ್ರಾಚಾರ್ಯ ಡಾ.ಎಸ್.ಎ.ಶಾಸ್ತ್ರೀಮಠ, ಪ್ರೊ.ಸಂಗಮೇಶ ಗುಜಗೊಂಡ, ಡಾ.ಬಿ.ಸಿಪಾಟೀಲ, ಪ್ರೊ.ಎಸ್.ಜಿ.ನಾಯಿಕ, ಪ್ರೊ.ಎಸ್.ಬಿ.ಖೋತ, ಬಸವಂತ ಬರಗಾಲಿ, ಭಾರತಿ ತಳವಾರ, ವೆಂಕಟೇಶ ಪಾಟೀಲ ಮತ್ತಿತರು ಇದ್ದರು.


Gadi Kannadiga

Leave a Reply