This is the title of the web page
This is the title of the web page

Please assign a menu to the primary menu location under menu

Local News

ತಂಬಾಕು ಮುಕ್ತ ಸಮಾಜ ನಿರ್ಮಾಣದಲ್ಲಿ ವಿವಿಗಳ ಪಾತ್ರ ಹಿರಿದು: ಪ್ರೊ. ಎಂ. ಹನುಮಂತಪ್ಪ


ಬೆಳಗಾವಿ,ಸೆ.೨೨: ಇತ್ತೀಚಿನ ದಿನಗಳಲ್ಲಿ ಯುವಕರು ಇವುಗಳ ದಾಸರಾಗಿ ತಮ್ಮ ಆರೋಗ್ಯವನ್ನು ತಾವೇ ಹಾಳು ಮಾಡಿಕೊಳ್ಳುತ್ತಿರುವುದು ವಿಷಾದಕರ ಸಂಗತಿ. ವಿಶ್ವವಿದ್ಯಾನಿಲಯಗಳನ್ನು ಸಂಪೂರ್ಣವಾಗಿ ತಂಬಾಕು ಮುಕ್ತವನ್ನಾಗಿಸುವ ಜವಾಬ್ದಾರಿಯನ್ನು ಹೊಂದಿವೆ ಎಂದು ರಾಣಿಚನ್ನಮ್ಮಾ ವಿಶ್ವವಿದ್ಯಾನಿಲಯದ ಕುಲಸಚಿವರಾದ ಪ್ರೋ.ಎಮ್.ಹನುಮಂತಪ್ಪ ಅವರು ಹೇಳಿದರು.
ಜಿಲ್ಲಾಡಳಿತ ಜಿಲ್ಲಾ ಪಂಚಾಯತ, ಜಿಲ್ಲಾ ಆರೊಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸರ್ವೇಕ್ಷಣಾಧಿಕಾರಿಗಳ ಘಟಕ ಜಿಲ್ಲಾ ತಂಬಾಕು ನಿಯಂತ್ರಣ ಕೋಶ ಬೆಳಗಾವಿ ಮತ್ತು ರಾಷ್ಟ್ರೀಯ ಸೇವಾ ಯೋಜನೆ ರಾಣಿ ಚನ್ನಮ್ಮಾ ವಿಶ್ವವಿದ್ಯಾನಿಲಯ ಇವರ ಸಂಯುಕ್ತ ಆಶ್ರಯದೊಂದಿಗೆ ರಾಣಿಚನ್ನಮ್ಮಾ ವಿಶ್ವವಿದ್ಯಾನಿಲಯದಲ್ಲಿ ಹಮ್ಮಿಕೊಂಡಿದ್ದ “ತಂಬಾಕು ಮುಕ್ತ ವಿಶ್ವವಿದ್ಯಾಲಯ” ಘೋಷಣಾ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮುಖ್ಯ ಅತಿಥಿಯಾಗಿ ಮಾತನಾಡಿದ ಜಿಲ್ಲಾ ಸಮೀಕ್ಷಣಾಧಿಕಾರಿಗಳು ಹಾಗೂ ತಂಬಾಕು ನಿಯಂತ್ರಣಾಧಿಕಾರಿಗಳಾದ ಡಾ: ಬಿ.ಎನ್ ತುಕ್ಕಾರ ಅವರು ತಂಬಾಕು ಸೇವನೆಯಿಂದಾಗುವ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಮನುಷ್ಯನ ಆರೋಗ್ಯದ ಮೇಲೆ ಆಗುವ ದುಷ್ಪರಿಣಾಮಗಳ ಕುರಿತು ಮಾಹಿತಿ ನೀಡಿ ತಂಬಾಕು ಮುಕ್ತ ವಿಶ್ವವಿದ್ಯಾನಿಲಯದ ಉದ್ದೇಶಗಳನ್ನು ತಿಳಿಸಿದರು.
ತಂಬಾಕಿನ ಕಾನೂನು ಅರಿವು ಕೋಟ್ಪಾ-೨೦೦೩ ರ ಬಗ್ಗೆ ಸೆಕ್ಷನ್-೪ ರ ಪ್ರಕಾರ ಸಾರ್ವಜನಿಕ ಸ್ಥಳಗಳಲ್ಲಿ ಧೂಮಪಾನ ನಿಷೇಧ ಮಾಡಲಾಗಿದೆ. ಈ ಕಾನೂನು ಉಲ್ಲಂಘಿಸಿದ ವ್ಯಕ್ಕಿಗೆ ೨೦೦/- ದಂಡ ವಿಧಿಸಲಾಗುವುದು. ಸೆಕ್ಷನ್-೫ ಪ್ರಕಾರ ತಂಬಾಕು ಉತ್ಪನ್ನಗಳ ನೇರ ಹಾಗೂ ಪರೋಕ್ಷ ಜಾಹೀರಾತು ನಿಷೇದ. ಸೆಕ್ಷನ್-೬ರ ಪ್ರಕಾರ ತಂಬಾಕು ಉತ್ಪನ್ನಗಳ ಅಪ್ರಾಪ್ತ ವಯಸ್ಕರಿಗೆ ನಿಯಂತ್ರಣ ಮಾಡುವುದು ಹಾಗೂ ಸೆಕ್ಷನ್ -೬(ಬಿ) ಪ್ರಕಾರ ಶಿಕ್ಷಣ ಸಂಸ್ಥೆಗಳ ೧೦೦ ಮೀಟರ ಒಳಗೆ ತಂಬಾಕು ಉತ್ಪನ್ನಗಳನ್ನು ಮಾರಾಟ ಮಾಡುವುದು ಶಿಕ್ಷಾರ್ಹ ಅಪರಾಧ. ಸೆಕ್ಷನ್-೭ ಪ್ರಕಾರ ಸಿಗರೇಟ ಮತ್ತು ಇತರ ತಂಬಾಕು ಉತ್ಪನ್ನಗಳ ಮೇಲೆ ನಿರ್ಧಿಷ್ಟ ಆರೋಗ್ಯ ಎಚ್ಚರಿಕೆಗಳ ಸಂದೇಶಗಳಿಲ್ಲದೆ ಮಾರಾಟ ಮಾಡುವುದು ಶಿಕ್ಷಾರ್ಹ ಅಪರಾಧ ಎಂದು ತಿಳಿಸಿ ಕೋಟ್ಪಾ ಕಾಯ್ದೆಯ ಬಗ್ಗೆ ಸವಿಸ್ತಾರವಾಗಿ ಅವರು ತಿಳಿಸಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ರಾಣಿಚನ್ನಮ್ಮಾ ವಿಶ್ವವಿದ್ಯಾನಿಲಯದ ನಂದಿನಿ ದೇವರಮನಿ ಅವರು ತಂಬಾಕು ಸೇವನೆಯಿಂದಾಗುವ ಪ್ರತ್ಯಕ್ಷ ಹಾಗೂ ಪರೋಕ್ಷವಾಗಿ ಮನುಷ್ಯನÀ ಆರೋಗ್ಯದ ಮೇಲೆ ದುಷ್ಪರಿಣಾಮಗಳು ಬಿಳುತ್ತವೆ. ಮತ್ತು ತಂಬಾಕು ಹಾಗೂ ತಂಬಾಕು ಉತ್ಪನ್ನಗಳ ಸೇವನೆಯಿಂದ ಶರೀರದ ಮೇಲೆ ಅನೇಕ ದುಷ್ಪರಿಣಾಮಗಳು ಉಂಟಾಗುತ್ತವೆ ಎಂದು ಕಳವಳ ವ್ಯಕ್ತಪಡಿಸಿದರು.
ರಾಣಿಚನ್ನಮ್ಮಾ ವಿಶ್ವವಿದ್ಯಾನಿಲಯದ ಈರಮ್ಮಾ ಲಕ್ಕಪ್ಪಗೋಳ ಕಾರ್ಯಕ್ರಮವನ್ನು ನಿರೂಪಿಸಿದರು. ಜಿಲ್ಲಾ ಸಲಹೆಗಾರರಾದ ಡಾ.ಶ್ವೇತಾ ಪಾಟೀಲ ವಂದಿಸಿದರು.
ಕಾರ್ಯಕ್ರಮದಲ್ಲಿ ಪ್ರೋ. ಶಿವಾನಂದ ಗೊರನಾಳೆ ಕುಲಸಚಿವರು (ಮೌಲ್ಯಮಾಪನ) ರಾಣಿಚನ್ನಮ್ಮಾ ವಿಶ್ವವಿದ್ಯಾನಿಲಯದ ಬೆಳಗಾವಿ ಇವರು ಪ್ರ ವಿಧಿ ಬೋಧಿಸಿದರು. ಹಾಗೂ ಡಾ. ಪಿ. ನಾಗರಾಜ ಕಾರ್ಯಕ್ರಮ ಅಧಿಕಾರಿಗಳು ಎನ್.ಎಸ್. ಎಸ್. ಘಟಕ ಬೆಳಗಾವಿ ಹಾಗೂ ರಾಣಿಚನ್ನಮ್ಮಾ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.


Gadi Kannadiga

Leave a Reply