This is the title of the web page
This is the title of the web page

Please assign a menu to the primary menu location under menu

Local News

ಅನುವಾದ ಸಾಹಿತ್ಯಕ್ಕೆ ಪ್ರೊ.ರಾಜಶೇಖರ ಕರಡಿಗುದ್ದಿಯವರ ಕೊಡುಗೆ ಅನನ್ಯ : ತೋಂಟದ ಡಾ.ಸಿದ್ಧರಾಮ ಮಹಾಸ್ವಾಮೀಜಿ ಪ್ರೊ. ರಾಜಶೇಖರ ಕರಡಿಗುದ್ದಿಯವರ ೮೫ನೇ ಸಾರ್ಥಕ ಸಂಭ್ರಮ ಹಾಗೂ ‘ಮೌನಸಾಧಕ’ ಅಭಿನಂದನ ಗ್ರಂಥ ಬಿಡುಗಡೆ ಸಮಾರಂಭ


ಬೆಳಗಾವಿ: ಪ್ರೊ.ರಾಜಶೇಖರ ಕರಡಿಗುದ್ದಿಯವರು ಶರಣರ ವಚನಗಳನ್ನು ಮರಾಠಿ ಭಾಷೆಗೆ ಅನುವಾದ ಮಾಡುವ ಮೂಲಕ ಅನುವಾದ ಸಾಹಿತ್ಯಕ್ಕೆ ಅನನ್ಯವಾದ ಕೊಡುಗೆಯನ್ನು ನೀಡಿದ್ದಾರೆ. ಅನುವಾದ ಅಕಾಡೆಮಿ ಅವರ ಸಾಹಿತ್ಯವನ್ನು ಗುರುತಿಸುವ ಕೆಲಸ ಮಾಡಬೇಕಾಗಿತ್ತೆಂದು ಗದಗ ಡಂಬಳದ ತೋಂಟದಾರ್ಯ ಸಿದ್ಧಸಂಸ್ಥಾನಮಠದ ಜಗದ್ಗುರು ಡಾ.ತೋಂಟದ ಸಿದ್ಧರಾಮ ಮಹಾಸ್ವಾಮೀಜಿಯವರು ಆಶಯ ವ್ಯಕ್ತಪಡಿಸಿದರು.
ಅವರು ರವಿವಾರ ೧೭.೭.೨೦೨೨ ಬೆಳಗಾವಿ ಶಾಹಪೂರದಲ್ಲಿ ಆಯೋಜಿಸಲಾಗಿದ್ದ ಪ್ರೊ.ರಾಜಶೇಖರ ಕರಡಿಗುದ್ದಿಯವರ ೮೫ನೇ ಸಾರ್ಥಕ ಸಂಭ್ರಮ ಹಾಗೂ ‘ಮೌನಸಾಧಕ’ ಅಭಿನಂದನ ಗ್ರಂಥವನ್ನು ಲೋಕಾರ್ಪಣೆ ಮಾಡಿ ಮಾತನಾಡಿದರು. ಶರಣರ ಹದಿನೆಂಟು ಸಾವಿರ ವಚನಗಳನ್ನು ಮರಾಠಿ ಭಾಷೆಗೆ ಅನುವಾದ ಮಾಡಿದ್ದಲ್ಲದೆ ಹಲವು ಕೃತಿಗಳನ್ನು ಮರಾಠಿ ಭಾಷೆಗೆ ಅನುವಾದಿಸಿದ ಕೀರ್ತಿ ಕರಡಿಗುದ್ದಿಯವರಿಗೆ ಸಲ್ಲುತ್ತದೆ. ಕನ್ನಡ ಸಾಹಿತ್ಯವನ್ನು ಮತ್ತೊಂದು ಭಾಷೆಗೆ ಅನುವಾದಿಸುವುದು ಅಷ್ಟುಸುಲಭವಾದ ಕೆಲಸವಲ್ಲ, ಅದನ್ನು ಒಂದು ವ್ರತದಂತೆ ನಿರ್ವಹಿಸಿದವರು ಕರಡಿಗುದ್ದಿಯವರು. ಬದುಕಿನಲ್ಲಿ ಅನೇಕ ಕಷ್ಟಗಳನ್ನು ಅನುಭವಿಸಿದರೂ ತಮ್ಮ ಸಾಹಿತ್ಯ ಸೇವೆಯಿಂದ ಹಿಂದೆ ಸರಿಯದ ಸರಳ ವ್ಯಕ್ತಿ ಅವರು. ಬೆಳಗಾವಿಯ ಸಾಂಸ್ಕೃತಿಕ ವಲಯವನ್ನು ತಮ್ಮ ಸಾಮಾಜಿಕ ಹಾಗೂ ಧಾರ್ಮಿಕ ಸೇವೆಯಿಂದ ಶ್ರೀಮಂತಗೊಳಿಸಿದ ಅವರು ಮೌನವಾಗಿಯೇ ಕನ್ನಡ ಸರಸ್ವತಿಯ ಸೇವೆಯನ್ನು ನೆರವೇರಿಸಿದ್ದಾರೆ ಎಂದು ನುಡಿದರು.
ಇದೇ ಸಂದರ್ಭದಲ್ಲಿ ಬಾಲ್ಕಿಯ ಹಿರೇಮಠದ ಬಸವಲಿಂಗ ಪಟ್ಟದದೇವರು ಆಶೀರ್ವಚನವನ್ನು ನೀಡುತ್ತಾ, ‘ಕರಡಿಗುದ್ದಿಯವರು ಶರಣರ ವಚನಗಳನ್ನು ಬೃಹತ್ ಸಂಖ್ಯೆಯಲ್ಲಿ ಮರಾಠಿ ಭಾಷೆಗೆ ಅನುವಾದಿಸಿ ಸಾಹಿತ್ಯವನ್ನು ಪೋಷಿಸಿ ಬೆಳೆಸಿದ್ದಾರೆ. ಮರಾಠಿಯ ಅನೇಕ ವಿದ್ವಾಂಸರು ಅವರು ಅನುವಾದಿಸಿದ ವಚನಸಾಹಿತ್ಯವನ್ನು ಓದಿ ಅಭಿನಂದಿಸಿದ್ದಾರೆ. ಅಂದರೆ ಎರಡು ಭಾಷೆಗಳ ಮೇಲೆ ಅವರ ಪ್ರಭುತ್ವವನ್ನು ಮೆಚ್ಚುವಂತಹದು. ಇಂಗ್ಲೀಷ ಶಿಕ್ಷಕರಾಗಿ ಹಲವು ಭಾಷೆಗಳ ಮೇಲೆ ಅವರಿಗಿರುವ ಪಾಂಡಿತ್ಯ ಅಪಾರ. ಮೃದುಸ್ವಭಾವದ, ಹದುಳ ಹೃದಯದ ಕರಡಿಗುದ್ದಿಯವರು ಶತಾಯುಷಿಗಳಾಲೆಂದು ಶುಭಹಾರೈಸಿದರು.
ಬೆಳಗಾಗಿ ಕಾರಂಜಿಮಠದ ಪೂಜ್ಯ ಗುರುಸಿದ್ಧ ಮಹಾಸ್ವಾಮೀಜಿಯವರು ಆಶೀರ್ವಚನ ನೀಡುತ್ತಾ, ಕರಡಿಗುದ್ದಿಯವರು ಮಾಡಿರುವ ಸಾಹಿತ್ಯ ಸಾಧನೆಗೆ ಸರ್ಕಾರ ರಾಜ್ಯೋತ್ಸವ ಪ್ರಶಸ್ತಿ ನೀಡಿ ಗೌರವಿಸಬೇಕಾಗಿತ್ತು. ಇಂದು ವಸೂಲಿ, ಪ್ರಭಾವ ಹಣ ಅಲ್ಲಿ ಕಾರ್ಯನಿರ್ವಹಿಸುತ್ತಿರುವುದು ಖೇದಕರ ಸಂಗತಿ. ನಿಜ ಸಾಹಿತ್ಯ ಸೇವೆಕರನ್ನು ಯಾವುದೇ ಅರ್ಜಿಗಳನ್ನು ನೋಡದೇ ಗುರುತಿಸುವ ಕೆಲಸ ನಡೆಯಬೇಕಾಗಿದೆ ಎಂದರು.
ಅಥಣಿಯ ಮೋಟಗಿಮಠದ ಪೂಜ್ಯ ಪ್ರಭುಚನ್ನಬಸವ ಮಹಾಸ್ವಾಮಿಗಳು ಈ ಸಂದರ್ಭದಲ್ಲಿ ಮಾತನಾಡಿದರು. ಖ್ಯಾತ ಸಾಹಿತಿಗಳಾದ ಡಾ.ಬಸವರಾಜ ಜಗಜಂಪಿಯವರು ಅಭಿನಂದನ ನುಡಿಗಳನ್ನಾಡುತ್ತ, ಕರಡಿಗುದ್ದಿಯವರು ಸದ್ದಿಲ್ಲದೇ ನಾಡದೇವಿಯ ಸೇವೆಯನ್ನು ಗೈದವರು, ಅನುವಾದಕರಾಗಿ, ಬೆಳಗಾವಿ ಸಾಂಸ್ಕೃತಿ ಶಕ್ತಿ ಅವರು ಸಲ್ಲಿಸಿರುವ ಸೇವೆ ಅನುಪಮ ಹಾಗೂ ಚಿರಸ್ಮರಣೀಯ. ಅವರು ನಿಜವಾದ ಕಾಯಕಸಿರಿಯಾಗಿದ್ದಾರೆ. ಬೆಲೆಕಟ್ಟಲಾರದ ಸಾಹಿತ್ಯ ಸೇವೆಯನ್ನು ಗೈದಿದ್ದಾರೆ ಎಂದರು. ಅಭಿನಂದನ ಗ್ರಂಥದ ಪ್ರಧಾನ ಸಂಪಾದಕರಾದ ಡಾ.ಗುರುದೇವಿ ಹುಲೆಪ್ಪನವರಮಠ ಅವರು ಕೃತಿಕುರಿತು ಮಾತನಾಡಿದರು. ಶ್ರೀಮತಿ ನಾಗರತ್ನಾ ಹಡಗಲಿ ಸ್ವಾಗತಿಸಿದರು. ಪ್ರೊ.ಸಿ.ಜಿ.ಮಠಪತಿ ಹಾಗೂ ಡಾ.ಮಹೇಶ ಗುರನಗೌಡರ ನಿರೂಪಿಸಿದರು. ಸತೀಶ ಕುಲಕರ್ಣಿ ವಂದಿಸಿದರು. ರತಿಕಾ ನಾಟ್ಯಶಾಲೆಯ ವಿದ್ಯಾರ್ಥಿಗಳು ವಚನನೃತ್ಯವನ್ನು ಪ್ರದರ್ಶಿಸಿದರು.


Gadi Kannadiga

Leave a Reply