ಗದಗ ಜುಲೈ ೧೮: ಮುಂಡರಗಿ ತಾಲೂಕಿನ ೧೭- ಮುರಡಿ ವ ಮುರಡಿ ತಾಂಡಾದ ಸದಸ್ಯರ ಪದಾವಧಿಯು ಮುಕ್ತಾಯವಾಗಿರುವುದರಿಂದ ಸಾರ್ವತ್ರಿಕ ಚುನಾವಣೆ ಹಾಗೂ ಡೋಣಿ ಗ್ರಾಮ ಪಂಚಾಯ್ತಿಯ ಖಾಲಿ ಇರುವ ಸ್ಥಾನಗಳಿಗೆ ಉಪ-ಚುನಾವಣೆಗೆ ಜುಲೈ ೨೩ ರಂದು ಮತದಾನ ಜರುಗಲಿದೆ. ಈ ಸಮಯದಲ್ಲಿ ಮುಕ್ತ ಹಾಗೂ ಶಾಂತಿಯುತ ಮತದಾನ ಜರುಗಲು ಮತ್ತು ಶಾಂತಿ ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳುವ ಸಲುವಾಗಿ ಚುನಾವಣೆ ನಡೆಯುವ ಗ್ರಾಮ ಪಂಚಾಯತ್ತಿಗಳ ನೀತಿ ಸಂಹಿತೆ ಜಾರಿಯಲ್ಲಿರುವ ಪ್ರದೇಶಗಳ ವ್ಯಾಪ್ತಿಯಲ್ಲಿ ಮತದಾನವು ಮುಕ್ತಾಯಗೊಳ್ಳುವ ಪೂರ್ವದ ೪೮ ಗಂಟೆಗಳನ್ನು ಶುಷ್ಕ ದಿನಗಳೆಂದು ಘೋಷಿಸಿ, ಜುಲೈ ೨೧ ರ ಸಂಜೆ ೫ ಗಂಟೆಯಿಂದ ಜುಲೈ ೨೩ರ ಮಧ್ಯರಾತ್ರಿಯವರೆಗೆ ಮದ್ಯ ಮಾರಾಟ ಸಂಪೂರ್ಣವಾಗಿ ನಿರ್ಬಂಧಿಸಿ ಮದ್ಯ ಮಾರಾಟದ ಎಲ್ಲ ವರ್ಗಗಳ ಮಳಿಗೆಗಳನ್ನು ಮುಚ್ಚಲು ಹಾಗೂ ಮದ್ಯ ತಯಾರಿಕಾ ಘಟಕಗಳನ್ನು ಮುಚ್ಚಲು ಆದೇಶಿಸಿದೆ. ಈ ಅವಧಿಯಲ್ಲಿ ಯಾವುದೇ ಮದ್ಯದ ಅಂಗಡಿ ಬಾರ್ / ರೆಸ್ಟೋರೆಂಟ್ / ಕ್ಲಬ್/ ಡಿಪೋಗಳಲ್ಲಿ ಮದ್ಯ ಮಾರಾಟ ಸೇವೆಯ ಕುರಿತು ಅಧಿಕೃತ ಲೈಸನ್ಸ್ ಪಡೆದ ಯಾವುದೇ ವ್ಯವಹಾರ ಕೇಂದ್ರಗಳಲ್ಲಿ ಮದ್ಯ ಮಾರಾಟ ಸರಬರಾಜು ಮತ್ತು ಸೇವೆಗಳನ್ನು ಕಡ್ಡಾಯವಾಗಿ ನಿಷೇಧಿಸಲಾಗಿದೆ. ನೀತಿ ಸಂಹಿತೆ ಜಾರಿಯಲ್ಲಿರುವ ಪ್ರದೇಶಗಳಲ್ಲಿರುವ ಎಲ್ಲ ಮದ್ಯದ ಅಂಗಡಿಗಳನ್ನು ಮತ್ತು ಮದ್ಯ ತಯಾರಿಕಾ ಘಟಕಗಳನ್ನು ಅದರ ಮಾಲೀಕರು ಅಧಿಬೋಗದಾರರು ಮತ್ತು ಸಂದರ್ಭಾನುಸಾರ ವ್ಯವಸ್ಥಾಪಕರು ಮುಚ್ಚತಕ್ಕದ್ದು ಎಂದು ಜಿಲ್ಲಾ ಚುನಾವಣಾಧಿಕಾರಿಗಳೂ ಆಗಿರುವ ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್. ತಿಳಿಸಿದ್ದಾರೆ.
Gadi Kannadiga > State > ಮದ್ಯ ಮಾರಾಟ ನಿಷೇಧ
ಮದ್ಯ ಮಾರಾಟ ನಿಷೇಧ
Suresh18/07/2023
posted on