ಗದಗ ಜುಲೈ ೧೮: ಮುಂಡರಗಿ ತಾಲೂಕಿನ ೧೭- ಮುರಡಿ ವ ಮುರಡಿ ತಾಂಡಾದ ಸದಸ್ಯರ ಪದಾವಧಿಯು ಮುಕ್ತಾಯವಾಗಿರುವುದರಿಂದ ಸಾರ್ವತ್ರಿಕ ಚುನಾವಣೆ ಹಾಗೂ ಡೋಣಿ ಗ್ರಾಮ ಪಂಚಾಯ್ತಿಯ ಖಾಲಿ ಇರುವ ಸ್ಥಾನಗಳಿಗೆ ಉಪ-ಚುನಾವಣೆಗೆ ಜುಲೈ ೨೩ ರಂದು ಮತದಾನ ಜರುಗಲಿದೆ. ಈ ಸಮಯದಲ್ಲಿ ಮುಕ್ತ ಹಾಗೂ ಶಾಂತಿಯುತ ಮತದಾನ ಜರುಗಲು ಮತ್ತು ಶಾಂತಿ ಸುವ್ಯವಸ್ಥೆಯನ್ನು ಕಾಪಾಡಿಕೊಳ್ಳುವ ಸಲುವಾಗಿ ಚುನಾವಣೆ ನಡೆಯುವ ಗ್ರಾಮ ಪಂಚಾಯತ್ತಿಗಳ ನೀತಿ ಸಂಹಿತೆ ಜಾರಿಯಲ್ಲಿರುವ ಪ್ರದೇಶಗಳ ವ್ಯಾಪ್ತಿಯಲ್ಲಿ ಮತದಾನವು ಮುಕ್ತಾಯಗೊಳ್ಳುವ ಪೂರ್ವದ ೪೮ ಗಂಟೆಗಳನ್ನು ಶುಷ್ಕ ದಿನಗಳೆಂದು ಘೋಷಿಸಿ, ಜುಲೈ ೨೧ ರ ಸಂಜೆ ೫ ಗಂಟೆಯಿಂದ ಜುಲೈ ೨೩ರ ಮಧ್ಯರಾತ್ರಿಯವರೆಗೆ ಮದ್ಯ ಮಾರಾಟ ಸಂಪೂರ್ಣವಾಗಿ ನಿರ್ಬಂಧಿಸಿ ಮದ್ಯ ಮಾರಾಟದ ಎಲ್ಲ ವರ್ಗಗಳ ಮಳಿಗೆಗಳನ್ನು ಮುಚ್ಚಲು ಹಾಗೂ ಮದ್ಯ ತಯಾರಿಕಾ ಘಟಕಗಳನ್ನು ಮುಚ್ಚಲು ಆದೇಶಿಸಿದೆ.
Gadi Kannadiga > State > ಮದ್ಯ ಮಾರಾಟ ನಿಷೇಧ
ಮದ್ಯ ಮಾರಾಟ ನಿಷೇಧ
Suresh18/07/2023
posted on
More important news
ಆಯುಷ್ಮಾನ್ ಭವ್; ಕಾರ್ಯಕ್ರಮ
25/09/2023
ನೀರು ಪೂರೈಕೆಯಲ್ಲಿ ವ್ಯತ್ಯಯ
25/09/2023
ಶಿಕ್ಷಣ ಅದಾಲತ್
25/09/2023
ಉದ್ಯಮ ಶೀಲತಾ ಪ್ರೇರಣಾ ಕಾರ್ಯಕ್ರಮ
25/09/2023
ಗಣೇಶ ಹಬ್ಬದ ನಿಮಿತ್ಯ ಮದ್ಯ ಮಾರಾಟ ನಿಷೇಧ
22/09/2023